Advertisement

ಮೌಲ್ಯಮಾಪಕರ ಮಾಹಿತಿ ಕೋಶ ಸಿದ್ಧ

10:47 PM Jan 20, 2020 | Lakshmi GovindaRaj |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಮೌಲ್ಯಮಾಪಕರ ಸಮರ್ಪಕ ಮಾಹಿತಿ ಇರಲಿಲ್ಲ. ಪ್ರಸಕ್ತ ಸಾಲಿನಿಂದ ಆನ್‌ಲೈನ್‌ ಮೂಲಕ ಮೌಲ್ಯಮಾಪಕರ ಮಾಹಿತಿ ಕೋಶ ಸಿದ್ಧಪಡಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ ಕುರಿತಂತೆ ಸೋಮವಾರ ಮಲ್ಲೇಶ್ವರದಲ್ಲಿರುವ ಎಸ್ಸೆಸ್ಸೆಲ್ಸಿ ಬೋರ್ಡ್‌ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ವರ್ಷ ಸುಮಾರು 60ರಿಂದ 65 ಸಾವಿರ ಮೌಲ್ಯಮಾಪಕರ ಅಗತ್ಯ ಇರುತ್ತದೆ. ಏ.19ರಿಂದ ರಾಜ್ಯದ 34 ಶೈಕ್ಷಣಿಕ ಜಿಲ್ಲಾ ಕೇಂದ್ರಗಳ 228 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ ಎಂದರು.

ಡಿಜಿ ಲಾಕರ್‌ ವ್ಯವಸ್ಥೆ: 2003ರಿಂದ 2019ರ ವರೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಸುಮಾರು 1.15 ಕೋಟಿ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ ತಂತ್ರಾಂಶ ದಲ್ಲಿ ಅಳವಡಿಸಲಾಗಿದೆ. ಅರ್ಜಿ ಪಡೆದು ಚಲನ್‌ ಮೂಲಕ ಶುಲ್ಕ ಪಾವತಿಸಿ ಪ್ರಮಾ ಣ ಪತ್ರವನ್ನು ಅಂಚೆ ಮೂಲಕ ವಿತರಿಸುವ ಪದ್ಧತಿಯ ಬದಲಿಗೆ ಆನ್‌ಲೈನ್‌ಲ್ಲಿ ಅರ್ಜಿ ಹಾಗೂ ಶುಲ್ಕ ಪಡೆದು 10 ದಿನಗಳ ಒಳಗೆ ಅಂಕಪಟ್ಟಿಯನ್ನು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪ್ರವೇಶ ಪತ್ರ ತಿದ್ದುಪಡಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಕರಡು ಪ್ರವೇಶ ಪತ್ರವನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌) ಬಳಸಿಕೊಂಡು ಶಾಲೆಯ ಮುಖ್ಯ ಶಿಕ್ಷಕರಿಗೆ ಪ್ರವೇಶ ಪತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಸುಮಾರು 1.01 ಲಕ್ಷ ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲೇ ಪ್ರವೇಶಪತ್ರ ತಿದ್ದುಪಡಿ ಮಾಡಿದ್ದಾರೆ. ಫೆಬ್ರವರಿ 2ನೇ ವಾರದಲ್ಲಿ ಅಂತಿಮ ಪ್ರವೇಶ ಪತ್ರ ಬಿಡಲಾಗುತ್ತದೆ. ಹಾಗೆಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಮುಖ್ಯ ಶಿಕ್ಷಕರು ಆನ್‌ಲೈನ್‌ ಮೂಲಕ ನಮೂದಿಸಲು ಫೆಬ್ರವರಿ ಮೂರನೇ ವಾರದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿವರ
* ಪರೀಕ್ಷಾ ಸಮಯ – ಮಾ.27ರಿಂದ ಏ.9.
* ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಶಾಲೆಗಳು – 14,735.
* ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು – 8,48,192.
* ಶಾಲಾ ಅಭ್ಯರ್ಥಿಗಳು – 7,64,180.
* ಖಾಸಗಿ ಅಭ್ಯರ್ಥಿಗಳು – 20,951.
* ಪುನರಾವರ್ತಿತ ಶಾಲಾ ಅಭ್ಯರ್ಥಿಗಳು – 54,432
* ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು – 8,629.
* ಪರೀಕ್ಷಾ ಕೇಂದ್ರಗಳು – 2,879.
* ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಮೌಲ್ಯಮಾಪಕರು – 79,670.

Advertisement

ಸರ್ಕಾರಿ ಶಾಲೆ ಸಹಿತವಾಗಿ ಎಲ್ಲ ಪರೀಕ್ಷಾ ಕೇಂದ್ರಕ್ಕೂ ಸಿಸಿ ಕ್ಯಾಮರಾ ಅಳವಡಿಸಲಿದ್ದೇವೆ. ಐಚ್ಛಿಕ ವಿಷಯಗಳಿಗೆ 15 ನಿಮಿಷ ಹಾಗೂ ಎರಡು ಮತ್ತು ಮೂರನೇ ಭಾಷಾ ವಿಷಯಕ್ಕೆ ಅರ್ಧಗಂಟೆ ಹೆಚ್ಚಳ ಮಾಡಿದ್ದೇವೆ. ಅವಧಿಗೂ ಮೊದಲೇ ಪರೀಕ್ಷೆ ಬರೆದು ಮುಗಿಸುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಪ್ರತಿಯ ಜತೆಗೆ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ಹಿಂದಿರುಗಿಸಿ ಹೋಗಬೇಕು. ಮೌಲ್ಯಮಾಪಕರ ನೋಂದಣಿ ಪ್ರಕ್ರಿಯೆ ಆನ್‌ಲೈನ್‌ನಲ್ಲೇ ನಡೆದಿದೆ. ಅವರಿಗೆ ಸೂಕ್ತ ತರಬೇತಿ ನೀಡಲಿದ್ದೇವೆ. ಕೆಲವೊಂದು ವಿಷಯದಲ್ಲಿ ಮೌಲ್ಯಮಾಪಕರ ಕೊರತೆ ಆಗಬಹುದು. ಒಟ್ಟಾರೆಯಾಗಿ ಮೌಲ್ಯಮಾಪಕರ ಕೊರತೆ ಇಲ್ಲ.
-ವಿ.ಸುಮಂಗಳಾ, ಮಂಡಳಿಯ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next