Advertisement

Supreme Court: ಸಲಿಂಗ ವಿವಾಹಕ್ಕೆ ಮಾನ್ಯತೆ: ಸುಪ್ರೀಂಗೆ ದುಂಬಾಲು

10:04 PM Apr 19, 2023 | Team Udayavani |

ನವದಹೆಲಿ: ಸಲಿಂಗ ವಿವಾಹ ವಿಚಾರಕ್ಕೆ ಮಾನ್ಯತೆ ನೀಡುವ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಎಲ್‌ಜಿಬಿಟಿಕ್ಯೂಐಎ ಸಮುದಾಯವೂ ಕೂಡ ಭಿನ್ನಲಿಂಗೀಯರಂತೆ ಗೌರವಯುತ ಜೀವನ ನಡೆಸಲು ಸಮಾಜದಲ್ಲಿ ಅವಕಾಶ ಕಲ್ಪಿಸಿಕೊಡಬೇಕು.

Advertisement

ಅದಕ್ಕಾಗಿ ಸರ್ವೋಚ್ಚ ನ್ಯಾಯಾಲಯ ತನ್ನ ಸಂಪೂರ್ಣ ಅಧಿಕಾರ ಬಳಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಸಲಿಂಗವಿವಾಹಕ್ಕೆ ಮಾನ್ಯತೆ ಕೋರಿರುವ ಅರ್ಜಿದಾರರ ಪರ ವಕೀಲರಾದ ಮುಕುಲ್‌ ರೋಹrಗಿ ಅವರು ನ್ಯಾಯಪೀಠಕ್ಕೆ ಮೇಲಿನಂತೆ ಅರಿಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಸಮಾಜಗಳಿಂದ ಮೌಡ್ಯಗಳನ್ನು ತೊಲಗಿಸಿ, ಸರ್ವರ ಹಕ್ಕುಗಳನ್ನು ಗೌರವಿಸುವ ಮನಸ್ಥಿತಿ ರೂಪುಗೊಳ್ಳಬೇಕಿದೆ.

ಅಪರಾಧವೆಂದುಕೊಂಡಿದ್ದ ವಿಧವಾ ಮರುವಿವಾಹವನ್ನು ಈಗ ಸಮಾಜ ಒಪ್ಪಿಕೊಂಡಿದೆ. ಆ ನಿಟ್ಟಿನಲ್ಲಿ ಕಾನೂನಿನ ಪಾತ್ರ ಮಹತ್ತರದ್ದು. ಅದೇ ರೀತಿ ಎಲ್‌ಜಿಬಿಟಿಕ್ಯೂಐಎ ಜನರ ಹಕ್ಕುಗಳು ಹಾಗೂ ಗೌರವಯುತ ಜೀವನ ಖಾತರಿಪಡಿಸಲು ಸುಪ್ರೀಂ ತನ್ನೆಲ್ಲ ಅಧಿಕಾರ ಬಳಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next