Advertisement
ದೇಶ-ವಿದೇಶಕ್ಕೆ ಹೂವು ಪೂರೈಕೆ ಮಾಡುವ ಹೆಬ್ಟಾಳದಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ(ಐಎಫ್ಎಬಿ)ದಲ್ಲಿ ಇತರೆ ಹೂವುಗಳಿಗಿಂತ ಕೆಂಗುಲಾಬಿ, ಡಚ್ ರೋಸ್‌ಗೆ ಹೆಚ್ಚು ಬೇಡಿಕೆ ಇದೆ. ಡಚ್ ರೋಸ್‌ಗಳು ಸಾಧಾರಣವಾಗಿ ಕೆಂಪು, ಬಿಳಿ, ಪಿಂಕ್, ಹಳದಿ, ಕಿತ್ತಳೆ ಬಣ್ಣಗಳಲ್ಲಿ ಇರುತ್ತವೆ. ಕೆಂಗುಲಾಬಿಯ ಬೇಡಿಕೆ ಶೇ.45ರಷ್ಟು ಹೆಚ್ಚಾಗಿದೆ.
Related Articles
Advertisement
ಗುಲಾಬಿ ಮಾರಾಟವಾದರೆ, ವ್ಯಾಲೆಂಟೈನ್ ಡೇ ಪ್ರಯುಕ್ತ 10 ರಿಂದ 15 ರೂ.ಗಳಿಗೆ ಒಂದು ಗುಲಾಬಿ ಮಾರಾಟವಾಗುತ್ತಿದ್ದು, ಗುಲಾಬಿಗಳ ವಹಿವಾಟು ಜೋರಾಗಿ ನಡೆಯುತ್ತಿದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಹರಾಜಿನಲ್ಲಿ ನೋಂದಣಿಯಾದವರು ಮಾತ್ರ ಭಾಗಿ: ಐಎಫ್‌ಎಬಿ ಕೇಂದ್ರದಲ್ಲಿ ನೋಂದಣಿಯಾದ ರೈತರು ಹಾಗೂ ಖರೀದಿದಾರರಿಗೆ ಮಾತ್ರ ವಹಿವಾಟು ನಡೆಸಲು ಅವಕಾಶವಿದೆ. ಇಲ್ಲಿ 325 ರೈತರು ಹಾಗೂ 235 ಜನ ಖರೀದಿದಾರರು ನೋಂದಣಿ ಮಾಡಿಕೊಂಡಿದ್ದಾರೆ. 30 ರಿಂದ 40 ಜನ ಖರೀದಿದಾರರು ಮತ್ತು 60ಕ್ಕೂ ಜನ ರೈತರು ನಿತ್ಯ ನಡೆಯುವ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಐಎಫ್ಎಬಿನಲ್ಲಿ ಕೋಲ್ಡ್ ರೂಂ ವ್ಯವಸ್ಥೆ :
ರೈತರು ಹೂವುಗಳನ್ನು ಕಟಾವು ಮಾಡಿದ ನಂತರದಿಂದ ಸುಮಾರು 7 ರಿಂದ 10 ದಿನಗಳವರೆಗೆ ತಾಜಾತನ ಇರುವಂತೆ ಶೀತಲೀಕರಣ ವ್ಯವಸ್ಥೆಯನ್ನು ಐಎಫ್ಎಬಿ ಹೊಂದಿದೆ. ಇದರಿಂದಾಗಿ ಹರಾಜು ಪ್ರಕ್ರಿಯೆಯ ನಂತರವು ದೂರದ ಸ್ಥಳಗಳಿಗೆ ರಫ್ತು ಮಾಡುವ ಉದ್ದೇಶದಿಂದ ವಾರದವರೆಗೆ ತಾಜಾತನದಿಂದ ಇರುವಂತಹ ವಿಶೇಷ ಗುಣವನ್ನು ಇಲ್ಲಿಯ ಹೂವುಗಳು ಹೊಂದಿರುತ್ತವೆ ಎಂದು ಐಎಫ್ಎಬಿನ ಸಹಾಯಕ ಮುಖ್ಯ ವ್ಯವಸ್ಥಾಪಕಿ ವೀಣಾ ತಿಳಿಸುತ್ತಾರೆ.
ಕಳೆದ ವರ್ಷದ ವ್ಯಾಲೆಂಟೈನ್ ಡೇ ಗೆ ಹೋಲಿಸಿದರೆ, ಗುಲಾಬಿ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ 30ರಿಂದ 40ರಷ್ಟು ಹೆಚ್ಚು ವಹಿವಾಟು ಹೆಚ್ಚಾಗಿದೆ. ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಗುಲಾಬಿಗಳು ಉತ್ತಮ ಗುಣಮಟ್ಟದ್ದಾಗಿದ್ದು, ಸುಮಾರು ಒಂದು ವಾರದವರೆಗೆ ತಾಜಾತನ ಹೊಂದಿರುತ್ತವೆ. ಆದ್ದರಿಂದ ದೇಶ-ವಿದೇಶದಿಂದಲೂ ಬೇಡಿಕೆ ಹೆಚ್ಚಾಗಿದೆ.-ಎಂ.ವಿಶ್ವನಾಥ್, ವ್ಯವಸ್ಥಾಪಕ ನಿರ್ದೇಶಕ, ಐಎಫ್ಎಬಿ
– ಭಾರತಿ ಸಜ್ಜನ್