Advertisement
ಸ್ನೇಹಿತೆಯೇ ಸಂಗಾತಿಯಾದರೆ ಅಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವ, ಅದನ್ನು ಬಣ್ಣ ಬಣ್ಣವಾಗಿ ಹೇಳುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿಯೇ ಮೊದಲೇ ಹೇಳಿದ್ದು ಪ್ರೀತಿಯಲ್ಲಿ ಪ್ರಪೋಸ್ ಮಾಡಲೇ ಬೇಕೆಂಬ ನಿಯಮವಿದ್ದರೆ ನಮ್ಮದು ಪ್ರೀತಿಯೇ ಅಲ್ಲ ಅಂತ. ನಾವಿಬ್ಬರು ಎಂದು ಪ್ರೀತಿ ನಿವೇದನೆಯನ್ನು ಮಾಡಲಿಲ್ಲ. ಹಾಗೇ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ಇಲ್ಲವೇ ನಿರಾಕರಿಸುವ ಸಂದರ್ಭವು ಎದುರಾಗಲೇ ಇಲ್ಲ. ಸ್ನೇಹದ ಮುಂದಿನ ಹಂತವಾಗಿ ಜೀವನದುದ್ದಕ್ಕೂ ಸಂಗಾತಿಗಳಾಗಿ ಸಾಗುವ ಆಲಿಖಿತ ಮತ್ತು ಆನಿರ್ಭಂದಿತ ಒಪ್ಪಂದವೊಂದಕ್ಕೆ ಸುಮ್ಮನೆ ಸಹಿಯೊಂದನ್ನು ಹಾಕಿ ಮುಂದೆ ಸಾಗುತ್ತಿದ್ದೇವೆ ಅಷ್ಷೇ.
Related Articles
Advertisement
ಇಷ್ಟಾಗಿದ್ದು ಆಕೆಯಿಂದಲೇ. ಸುಮ್ಮನೆ ಆಕೆಗೆ ಕೃತಜ್ಞತೆಯನ್ನು ತಿಳಿಸುವುದು ಸರಿಯಲ್ಲ, ಇಡೀ ಜೀವನವೇ ಆಕೆ ಕೈಗಿತ್ತು ಆಡಿಸಿದಂತೆ ಆಡುವ ಗೊಂಬೆಯಾದರೂ ಚಿಂತೆಯಿಲ್ಲ, ಆಕೆಯ ನಗುವಿಗೆ ಕಾರಣವಾಗಿ ಉಳಿದರೆ ಧನ್ಯ. ಹೇಳುವುದು ಒಂದೇ ಮಾತು, ಅವಳಿಲ್ಲದ ನಾಳೆಯಲ್ಲಿ ನಾನೂ ಇಲ್ಲ.
ಇದು ಬಿಟ್ಟು ಸಾಗಿದ ಬಂದ ಹಾದಿಯಲ್ಲಿ ಅಂದಿಗೂ ಇಂದಿಗೂ ಬಹಳಷ್ಟೇನು ಬದಲಾವಣೆಗಳಿಲ್ಲವಾದರೂ, ಅಂದೂ ಹೇಳಿದ ಮಾತಿಗೆ ಇದ್ದಂತ ಬೆಲೆ ಇಂದು ಜಾಸ್ತಿ ಆಗಿದೆ. ಅದೇ ಹಾದಿಯಲ್ಲಿ ಸಾಗಿದ್ದಕ್ಕೆ ಫಲವು ದೊರಕಿದೆ. ಸಾಧ್ಯವಾಗದ ಸಾಧ್ಯತೆಯೊಂದು ನಮ್ಮ ಕಣ್ಣ ಮುಂದೆಯೇ ಸಾಕ್ಷಿಯಾಗಿ ನಿಂತಿದೆ. ಸ್ನೇಹಿತೆ ಸಂಗಾತಿಯಾಗಿದ್ದಕ್ಕೆ ಸಾಕ್ಷಿ ಸಿಕ್ಕಿದೆಯೋ ಅಥವಾ ಇಲ್ಲವೂ ಆದರೆ ನಮ್ಮ ಸ್ನೇಹವನ್ನು ಇನ್ನೊಂದು ಹಂತಕ್ಕೆ ತಂದು ನಿಲ್ಲಿಸಿದಕ್ಕೆ ಸಾರ್ಥಕತೆ ಇದೆ.
ಏನು ಇಲ್ಲದವನಿಗೆ ಪ್ರೀತಿ ಎಲ್ಲಾ ನೀಡಿದೆ, ಸ್ನೇಹಕ್ಕೂ ಮೀಗಿಲಾಗಿ ಪ್ರೇಮಕ್ಕೆ ಶಕ್ತಿ ಇದೆ ಎಂಬುದು ಮಾತಿನಲ್ಲಿ ಅಲ್ಲ, ಕೃತಿಯಾಗಿ ಜೀವನದಲ್ಲಿ ಪಾಠವನ್ನು ಕಲಿಸಿದೆ. ಇಲ್ಲಿ ಯಾರಿಗೂ ಕಾರಣ ನೀಡಬೇಕಿಲ್ಲ, ಯಾರಿಗೂ ಅರ್ಥ ಮಾಡಿಸಬೇಕಾಗಿಲ್ಲ. ಪ್ರೀತಿ ನಾವೇ ಕಟ್ಟಿದ ಜೀವನದ ಜೋಪಡಿಯಲ್ಲಿ ಜೊತೆಯಾಗಿ ನೆಮ್ಮದಿಯ ನಿದ್ದೆ ಜಾರುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇನ್ಯಾರಿಗೂ ಉತ್ತರಿಸುವ ಅಗತ್ಯವು ಇಲಿಲ್ಲ. ನಮ್ಮ ಪ್ರೀತಿಯ ಫಲಕ್ಕೆ ಸ್ನೇಹವೇ ಮರವಾಗಿದೆ ಎಂದು ಹೇಳಲು ಯಾವುದೇ ಸಂಕೋಚವು ನಮಗಿಲ್ಲ.
ಹೀಗೆ ತಿಳಿಯದೇ ಆರಂಭವಾದ ಪ್ರೀತಿಗೆ ಇನ್ನೇನು ಪ್ರಮೋಷನ್ ಬೇರೆ ಹತ್ತಿರದಲ್ಲಿಯೇ ಇದೆ. ಸ್ನೇಹಿತೆಗೆ ಸಂಗಾತಿಯ ಪಟ್ಟಾಭಿಷೇಕಕ್ಕೆ ತಯಾರಿ ಭರ್ಜರಿಯಾಗಿಯೇ ಜಾರಿಯಲ್ಲಿದೆ, ಬಾಳ ಸಂಗಾತಿಯಾಗುವ ನನ್ನಾಕೆಗೆ ನಾ ಎಂದಿಗೂ ಚಿರಋಣಿ.
ಶ್ರೀನಿಧಿ ಶ್ರೀಕರ್