Advertisement

ವಾಕರಸಾ ಸಂಸ್ಥೆಗೆ ಪಿಎಸ್‌ಯು ಅವಾರ್ಡ್‌-17

12:35 PM Feb 01, 2017 | Team Udayavani |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯಲ್ಲಿ ಜಾರಿಗೊಳಿಸಲಾದ ತಂತ್ರಾಂಶದ ಆಧಾರಿತ ರಜೆ ಅರ್ಜಿ ನಿರ್ವಹಣಾ ವ್ಯವಸ್ಥೆಗೆ ಪಿಎಸ್‌ಯು ಅವಾರ್ಡ್‌-2017ರ ಪುರಸ್ಕಾರ ದೊರೆತಿದೆ. ಸಂಸ್ಥೆಯ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ರಜೆಯನ್ನು ಮಾನವ ಆಧಾರಿತ ಪದ್ಧತಿಯಲ್ಲಿ ನೀಡಲಾಗುತ್ತಿತ್ತು.

Advertisement

ಇದರಿಂದ  ಎಲ್ಲಾ ಸಿಬ್ಬಂದಿಗೆ ಸಮರ್ಪಕ ರಜೆ ಮಂಜೂರಾತಿ ಮಾಡಲು ಅನಾನುಕೂಲವಾಗುತ್ತಿತ್ತು. ಇದನ್ನು ಮನಗಂಡು ಆಡಳಿತದಲ್ಲಿ ಪಾರದರ್ಶದಕತೆಯೊಂದಿಗೆ ಕಾರ್ಮಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ “ಸ್ಮಾರ್ಟ್‌ ಲೀವ್‌ ಅಪ್ಲಿಕೇಶನ್‌ ಮ್ಯಾನೇಜಮೆಂಟ್‌ ಸಿಸ್ಟಮ್‌’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿತ್ತು.

ಇದಕ್ಕಾಗಿ 6 ಸಾವಿರ ರೂ. ವೆಚ್ಚ ಮಾಡಲಾಗಿತ್ತು. ಇದರಿಂದಾಗಿಸಂಸ್ಥೆಯ ಎಲ್ಲಾ 49 ಘಟಕಗಳಿಗೆ ಖರೀದಿಸಬೇಕಾದ ರಜೆ ಕಿಯೊಸ್ಕ್ ಯಂತ್ರಗಳಿಗೆ ತಗಲುವ 4 ಕೋಟಿ ರೂ. ಹಣವು ಉಳಿತಾಯವಾಗಿದೆ. ಈ ತಂತ್ರಾಂಶದ ಕುರಿತು ಪಿಎಸ್‌ಯು ಸಮ್ಮಿಟ್‌ ದೆಹಲಿಯಿಂದ ಆಹ್ವಾನಿಸಲಾದ ಪಿಎಸ್‌ಯು ಅವಾರ್ಡ್‌-2017ಕ್ಕೆಸಂಸ್ಥೆಯಿಂದ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನು ಪರಿಗಣಿಸಿ ವಾಕರಸಾ ಸಂಸ್ಥೆಗೆ ಪಿಎಸ್‌ಯು  ಅವಾರ್ಡ್‌-2017 ಪ್ರಶಸ್ತಿ ಲಭಿಸಿದೆ. ಮಂಗಳವಾರ ದೆಹಲಿಯಲ್ಲಿ ಆಯೋಜಿಸಲಾದ 3ನೇ ಇಲೆಟ್ಸ್‌ ಪಿಎಸ್‌ ಯು ಸಮ್ಮಿಟ್‌ 2017ರ ಸಮಾರಂಭದಲ್ಲಿ ಗೌವರ್ನಿಂಗ್‌ ಮಿನಿಸ್ಟ್ರೀ ಆಫ್‌ ಶಾಪಿಂಗ್‌ನ ವಿನಿತ್‌ ಗೋಯಂಕಾ ಅವರು ವಾಕರಗೆ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಿದರು. 

ಸಂಸ್ಥೆಯ ಪರವಾಗಿ ಮುಖ್ಯ ಗಣಕವ್ಯವಸ್ಥಾಪಕ ಡಾ| ಕೆ.ಎನ್‌. ಇಂಗಳಗಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ವಾಕರಸಾ ಸಂಸ್ಥೆಯ ಎಲ್ಲಾ ಅಧಿಕಾರಿ ಮತ್ತು ನೌಕರರ ಪರಿಶ್ರಮದ ಪ್ರತಿಫಲವಾಗಿದೆ. ಆದ್ದರಿಂದ ಈ ಪ್ರಶಸ್ತಿಯನ್ನು ಸಮಗ್ರ ನೌಕರರ ವರ್ಗಕ್ಕೆ ಸಮರ್ಪಿಸುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆರ್‌. ವಿನೋತ್‌ಪ್ರಿಯಾ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next