Advertisement
ಸೋಮವಾರ ಪಟ್ಟಣದ ಕವೀ ಫೌಂಡೇಶನ್ ಆಯೋಜಿಸಿದ್ದ ಅಟಲ್‌ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ನೋಡುವಂತೆ ಮಾಡುತ್ತಿದ್ದು ವಾಜಪೇಯಿ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದರು.
Related Articles
Advertisement
ಮುಖಂಡರಾದ ರಾಮನಗೌಡ ಕರಕಳ್ಳಿ, ವಿಠ್ಠಲ ಗಾಯಕವಾಡ, ರಮೇಶ ಪಾಟೀಲ, ಕಾಶೀನಾಥ ಅರಳಿಚಂಡಿ, ಬಸವರಾಜ ಕೋರಿ, ಮಲಕನಗೌಡ ಪಾಟೀಲ, ಶಿವನಗೌಡ ಉಕ್ಕಲಿ, ಸಿದ್ದು ಬಿರಾದಾರ, ನಾಗೇಶ ಭಜಂತ್ರಿ, ಸುರೇಶ ಪಾಟೀಲ, ಕುಮಾರ ಪಾಟೀಲ, ಆನಂದ ಮೇಟಿ, ಪುಂಡಲಿಂಗ ಬಿರಾದಾರ, ಸೋಮು ಹಿರೇಮಠ, ಕಾಶೀನಾಥ ಅರಳಿಚಂಡಿ ಇದ್ದರು.
ಅಟಲ್ ಜನ್ಮದಿನಾಚರಣೆ ಮುದ್ದೇಬಿಹಾಳ: ಇಲ್ಲಿನ ಬಸ್ ನಿಲ್ದಾಣದಲ್ಲಿ ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ಬಿಜೆಪಿ ಯುವ ಘಟಕದ ನೇತೃತ್ವದಲ್ಲಿ ಸೋಮವಾರ ಆಚರಿಸಲಾಯಿತು. ಬಿಜೆಪಿಯ ಎಲ್ಲ ಮುಖಂಡರು, ಯುವ ಘಟಕದ ಕಾರ್ಯಕರ್ತರು ಭಾಗವಹಿಸಿ ನಿಲ್ದಾಣದಲ್ಲಿನ ಕಸ ಗೂಡಿಸುವ ಮೂಲಕ ಸ್ವತ್ಛಗೊಳಿಸಿದರು. ಈ ವೇಳೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಗಳಾದೇವಿ ಬಿರಾದಾರ ಅವರು ಅಟಲ್‌ಬಿಹಾರಿ ವಾಜಪೇಯಿ ಅವರ ಸರಳ, ನಿಗರ್ವಿ ಜೀವನ ಮತ್ತು ಅವರು ಪ್ರಧಾನಿಯಾಗಿದ್ದಾಗ ಜನಮಾನಸದಲ್ಲಿ ಸದಾ ಉಳಿಯುವ ಉತ್ತಮ ಆಡಳಿತ ನೀಡಿದ್ದರ ಕುರಿತು ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ ಕೂಚಬಾಳ, ಮುದ್ದೇಬಿಹಾಳ ಮಂಡಲ ಅಧ್ಯಕ್ಷ ವಕೀಲ ಎಂ.ಡಿ. ಕುಂಬಾರ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಶಾಂತಗೌಡ ಬಿರಾದಾರ, ಪ್ರಭು ಕಡಿ, ಬಿ.ಪಿ. ಕುಲಕರ್ಣಿ, ಪರಶುರಾಮ ಪವಾರ, ಕಾಶೀಬಾಯಿ ರಾಂಪುರ, ಅರವಿಂದ ಕಾಶಿನಕುಂಟಿ, ಸಿದ್ದು ಹೆಬ್ಟಾಳ, ಶೇಖರ ಢವಳಗಿ, ಜಗದೀಶ ಪಂಪಣ್ಣವರ, ರಾಜಶೇಖರ ಹೊಳಿ, ಬಸವರಾಜ ಗುಳಬಾಳ, ನಾಗಪ್ಪ ರೂಢಗಿ, ಬಿ.ಜಿ. ಜಗ್ಗಲ್, ರಫೀಕ್ ಕುಂಟೋಜಿ, ಮುತ್ತು ಪಾಟೀಲ ಇದ್ದರು. ಬಿಜೆಪಿ ಕಾರ್ಯಾಲಯ: ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ವಾಜಪೇಯಿ ಜನ್ಮದಿನ ಆಚರಿಸಲಾಯಿತು. ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಬಿಜೆಪಿ ಮುಖಂಡರಾದ ಪ್ರಭು ಕಡಿ, ಬಿ.ಪಿ. ಕುಲಕರ್ಣಿ, ಪರಶುರಾಮ ಪವಾರ ಮಾತನಾಡಿ ವಾಜಪೇಯಿ ಅವರ ಒಡನಾಟ, ಸರಳತೆ ಸ್ಮರಿಸಿದರು. ಮುಖಂಡರಾದ ಮಂಗಳಾದೇವಿ ಬಿರಾದಾರ, ಬಾಬುಲಾಲ ಓಸ್ವಾಲ್, ಎಂ.ಎಸ್. ಪಾಟೀಲ, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು. ಅಟಲ್‌ಜೀ ಮಹಾನ್ ನಾಯಕ
ಚಡಚಣ: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ಬಿಹಾರಿ ವಾಜಪೇಯಿ ದೇಶ ಕಂಡ ಅಪರೂಪದ ಮಹಾನ್ ನಾಯಕ
ಎಂದು ಬಿಜೆಪಿ ಮುಖಂಡ ನಾಗೇಂದ್ರ ಮಾಯವಂಶಿ ಹೇಳಿದರು. ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಘೋಷಿತ ತಾಲೂಕು ಹೋರಾಟ ಸಮಿತಿಯ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ 93ನೇಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖಂಡ ಗಂಗಾಧರ ಪಾವಲೆ, ನ್ಯಾಯವಾದಿ ಅಶೋಕ ಕುಲಕರ್ಣಿ ಮಾತನಾಡಿ, ಅಟಲಜೀ ಅವರ ದೂರದೃಷ್ಟಿ ಪರಿಣಾಮ ದೇಶ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅವರೊಬ್ಬ ಅಪರೂಪದ ರಾಜಕೀಯ ನಾಯಕರಾಗಿದ್ದಾರೆ ಎಂದರು. ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ನಾಗಠಾಣ ಮಂಡಲ ಬಿಜೆಪಿ ಅಧ್ಯಕ್ಷ ಕಲ್ಲು ಉಟಗಿ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ನಿರಾಳೆ, ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಪ್ರಭಾಕರ ನಿರಾಳೆ, ಮುಖಂಡರಾದ ರಾಮ ಅವಟಿ, ಮಹಾದೇವ ಯಂಕಂಚಿ, ರಾಮಚಂದ್ರ ಬಡಿಗೇರ, ಸಂಗಮೇಶ ಮುಂಡೋಡಗಿ, ಪ್ರಕಾಶಗೌಡ ಪಾಟೀಲ, ರಾಜು ಕ್ಷತ್ರಿ, ಪ್ರಮೋದ ಮಠ, ಮಲ್ಲು ಉಮರಾಣಿ,
ಬಸವರಾಜ ಭಮಶೆಟ್ಟಿ, ಚೇತನ ನಿರಾಳೆ, ಚೇತನ ಮಠ, ರಾಹುಲ್ ಬನಪಟ್ಟಿ, ರಾಹುಲ್ ಲೋಖಂಡೆ, ಅನಿಲ ಸಾಳುಂಕೆ ಇದ್ದರು.