Advertisement

ಶೀಘ್ರದಲ್ಲಿಯೇ ತೆರೆಗೆ ವಾಜಪೇಯಿ ಬಯೋಪಿಕ್‌

11:20 PM Aug 28, 2019 | Team Udayavani |

ಹೊಸದಿಲ್ಲಿ: ಕಳೆದ ವರ್ಷ ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಬಗೆಗಿನ ಬಯೋಪಿಕ್‌ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಲೇಖಕ ಉಲ್ಲೇಖ್‌ ಎನ್‌.ಪಿ. ಬರೆದಿರುವ “ದ ಅನ್‌ಟೋಲ್ಡ್‌ ವಾಜಪೇಯಿ’ ಎಂಬ ಪುಸ್ತಕವನ್ನು ಆಧಾರವಾಗಿ ಇರಿಸಿಕೊಂಡು ಈ ಬಯೋಪಿಕ್‌ ಸಿದ್ಧಪಡಿಸಲು ನಿರ್ಧರಿಸಲಾಗಿದೆ. “ಅಮಾಶ್‌ ಫಿಲಮ್ಸ್‌’ನ ಮಾಲೀಕರಾಗಿರುವ ಶಿವ ಶರ್ಮಾ ಮತ್ತು ಝೀಶನ್‌ ಅಹ್ಮದ್‌ ಎಂಬುವರು ಕೃತಿಯ ಹಕ್ಕುಗಳನ್ನು ಖರೀದಿಸಿದ್ದಾರೆ. ವಾಜಪೇಯಿ ಅವರ ಬಾಲ್ಯ, ಕಾಲೇಜು ದಿನಗಳು ಮತ್ತು ರಾಜಕೀಯ ಜೀವನದ ಚಿತ್ರಣವನ್ನು ಬೆಳ್ಳಿ ತೆರೆ ಮೇಲೆ ತರುವುದೇ ನಮ್ಮ ಮಹತ್ವಾಕಾಂಕ್ಷೆಯ ಯೋಜನೆ ಎಂದು ಶರ್ಮ ಮತ್ತು ಅಹ್ಮದ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next