ವಿಕಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರವನ್ನು ವಿಶ್ಲೇಷಿಸಲಾಗಿದೆ.
Advertisement
ಗಾಂಧೀ ಪುಣ್ಯತಿಥಿಯಂದು “ವೈಷ್ಣವ ಜನ ತೋ…’ ಹಾಡನ್ನು ರಾಗವಾಗಿ ಹಾಡುವುದು, ಕೇಳುವ ವರ್ಗ ಕಿವಿಯರಳಿಸಿ ಅಥವಾ ತಲೆ ಅಲ್ಲಾಡಿ ಸುತ್ತಾ ಕೇಳುವುದು, ಸಾಧ್ಯವಾದರೆ ಜತೆಗೆ ಗುನುಗು ನಿಸುವುದು ಸಾಮಾನ್ಯ. ಈ ಹಾಡನ್ನು ಯಾರು ರಚಿಸಿದ್ದು? ಎಷ್ಟು ವರ್ಷಗಳ ಇತಿಹಾಸವಿದೆ? ಈ ಹಾಡಿಗೂ ಗಾಂಧೀಜಿಗೂ ಏನು ಸಂಬಂಧ? ಕನಿಷ್ಠ ಇದರ ಅರ್ಥವಾದರೂ ಏನು? ಎಂದು ಕೇಳಿದರೆ ಬಹುವರ್ಗಕ್ಕೆ ತಿಳಿದಿರಲಾರದು.
Related Articles
ಖಾನ್‌ರ ಸರೋದ್, ಪಂ| ನಾರಾಯಣರ ಸಾರಂಗಿ, ಹರಿಪ್ರಸಾದ್ ಚೌರಾಸಿಯಾರ ಕೊಳಲು, ಪಂ| ಶಿವಕುಮಾರ ಶರ್ಮರ ಸಂತೂರ್ ವಾದ್ಯಗಳಲ್ಲಿಯೂ ಮೂಡಿಬಂದಿದೆ. 2018ರ ಅ. 2ರಂದು ಗಾಂಧೀಜಿ ಯವರ 150ನೇ ಜನ್ಮದಿನಾಚರಣೆ ಸಂದರ್ಭ 124 ದೇಶಗಳ ಸಂಗೀತಜ್ಞರು ಜತೆಗೂಡಿ ಹಾಡಿರುವುದು ಒಂದು ದಾಖಲೆ. ಈ ಹಾಡು ಸಂಸ್ಕೃತ, ಕನ್ನಡ ಮೊದಲಾದ ಅನೇಕ ಭಾಷೆಗಳಿಗೆ ಭಾಷಾಂತ ರಗೊಂಡಿದೆ.
Advertisement
ಸಾತ್ವಿಕ ಗುಣಗಳನ್ನು ಹೊಂದಿರುವಾತ ವೈಷ್ಣವ. ಇಂತಹವರ ದರ್ಶನಕ್ಕೆ ನಾನು (ನಾರಸಿ) ಕಾದಿರುತ್ತಾನೆ, ಈ ಸಾತ್ವಿಕ ಗುಣವು ಕುಲವನ್ನೇ ಉದ್ಧರಿಸುತ್ತದೆ ಎಂದು ಹಾಡಿನಲ್ಲಿ ಮೆಹ್ತಾ (ಸ್ತೋತ್ರಗಳ ಕೊನೆಯ ಫಲಶ್ರುತಿಯಂತೆ) ವಿವರಿಸಿದ್ದಾರೆ. ಕನ್ನಡದಲ್ಲಿ ಇತ ರರು ಇದನ್ನು ಅನುವಾದ ಮಾಡಿದ್ದರೂ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಬರೆದ “ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ…’ ಹಾಡು ಜನಪ್ರಿಯವಾಗಿದೆ. ಅನುವಾದದಲ್ಲಿ “ವೈಷ್ಣವ ಜನ’ ಶಬ್ದವಿಲ್ಲ, ಇದಕ್ಕೆ ಜಾತ್ಯತೀತ ಗುಣ ಮತ್ತು ಜೀವನದ ಉತ್ಕರ್ಷಕ್ಕೆ ಬೇಕಾಗುವ ಸಂದೇಶ ಇರುವುದರಿಂದ ಸರ್ವರಿಗೂ ಅನ್ವಯಗೊಳಿಸುವ ಕಾರಣವಿರಬಹುದು.
ಕರ್ನಾಟಕದ ಕೋಗಿಲೆ ಹಾಡನ್ನು ಮೆಚ್ಚಿಕೊಂಡಿದ್ದ ಗಾಂಧಿ“ವೈಷ್ಣವ ಜನ ತೋ’ ಹಾಡನ್ನು ಹಾಡಿದ ಪ್ರಮುಖ ರಲ್ಲಿ ಅಮೀರ್ ಬಾಯಿ ಕರ್ನಾಟಕಿ ಒಬ್ಬರು. ಇವರ ಹಾಡಿಗೆ ಗಾಂಧೀಜಿ ಮನಸೋತಿದ್ದರು. ಇವರು ಕರ್ನಾಟಕದವರೆಂಬುದು ಕನ್ನಡಿಗರಿಗೆ ಹೆಮ್ಮೆ. ಬೀಳಗಿ ಮೂಲದ ಅಮೀರ್ ಬಾಯಿ ಮುಂಬಯಿಗೆ ತೆರಳಿ ಹಿಂದಿ ಚಲನಚಿತ್ರಗಳಲ್ಲಿ ಹಾಡುನಟಿಯಾಗಿ ಮೂಡಿಬಂದಿದ್ದರೂ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧರಾದರು. 1940ರಲ್ಲಿ ನರಸಿ ಮೆಹ್ತಾ ಕುರಿತು ಸಿನೆಮಾವನ್ನು ವಿಜಯ ಭಟ್ ಗಾಂಧೀಜಿಯವರ ಅಪೇಕ್ಷೆ ಮೇರೆಗೆ ಹೊರತಂದಾಗ ಅಮೀರ್ ಬಾಯಿ ಹಾಡಿದ್ದರು. ಸಿನೆಮಾ, ಹಾಡು ಯೂ ಟ್ಯೂಬ್‌ನಲ್ಲಿ ಲಭ್ಯವಿದೆ. ಅಮೀರ್ ಬಾಯಿ 1965ರ ಮಾರ್ಚ್ 3ರಂದು ಕೊನೆಯುಸಿರೆಳೆದಾಗ ವಿಜಯಪುರದ ಇಬ್ರಾಹಿಂ ರೋಜಾದ ಖಬರಸ್ಥಾನದಲ್ಲಿ ದಫನ ಮಾಡಲಾಯಿತು. ಕರ್ನಾಟಕದ ಹೆಸರನ್ನು ಉತ್ತರ ಭಾರತದಲ್ಲಿ ಪಸರಿಸಿದ ಇವರ ಸಮಾಧಿ ನೂರಾರು ಸಮಾಧಿಗಳ ನಡುವೆ ಹುಡುಕುವುದೇ ದುಸ್ತರ. ಇವರ ಸಮಗ್ರ ಜೀವನ ಚರಿತ್ರೆಯನ್ನು ಹಂಪಿ ವಿ.ವಿ. ಪ್ರಾಧ್ಯಾಪಕ ಡಾ| ರೆಹಮತ್ ತರಿಕೆರೆಯವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಏನಿದರ ಅರ್ಥ? ಯಾರು ವೈಷ್ಣವರು?
– ಪರರ ನೋವು, ದುಃಖಗಳನ್ನು ಅರಿತು ಅವರಿಗೆ ಉಪಕಾರಿಯಾಗುವವ
– ಅಹಂಕಾರ ತೋರದವ
– ಇಡೀ ಲೋಕವನ್ನು ಗೌರವಿಸಿ ಎಲ್ಲರ ಜತೆ ಸಹನೆಯಿಂದ ವರ್ತಿಸುವವ
– ಮಾತು-ಕೃತಿ- ಯೋಚನೆಗಳನ್ನು ಶುದ್ಧವಾಗಿಟ್ಟುಕೊಂಡವ
– ನಡೆ ನುಡಿಗಳಲ್ಲಿ ಸಮಚಿತ್ತನಾಗಿ ವರ್ತಿಸುವವ
– ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವವ
– ದಾಹವನ್ನು (ಬಯಕೆಯನ್ನು) ತೊರೆದವ
– ಪರಸ್ತ್ರೀಯರನ್ನು ತಾಯಿ ಎಂದು ಕಾಣುವವ
– ಸುಳ್ಳು ಹೇಳದವ
– ಪರರ ಸೊತ್ತುಗಳನ್ನು ಮುಟ್ಟದವ
– ಮೋಹಗಳಿಗೆ ಒಳಗಾಗದವ
– ದೃಢ ವೈರಾಗ್ಯ ಭಾವ ಹೊಂದಿದವ
– ದೇವರ (ರಾಮ) ನಾಮವೇ ಆತನಿಗೆ ಅಮೃತ
– ನೆನೆದಲ್ಲೇ ಪುಣ್ಯಧಾಮ ಆತನಿಗೆ
– ದುರಾಸೆಯ ಮಾಡದವ
– ಕಪಟವೆಂಬುದನ್ನು ಅರಿಯದವ
– ಕಾಮಕ್ರೋಧಾದಿಗಳನ್ನು ನಿವಾರಿಸಿಕೊಂಡವ – ಮಟಪಾಡಿ ಕುಮಾರಸ್ವಾಮಿ