ಭಾರತ ಹಲವು ಭಾಷೆ, ಜಾತಿ, ಧರ್ಮ ಮತ್ತು ಸಂಸ್ಕೃತಿಗಳನ್ನೊಳಗೊಂಡ ದೇಶವಾಗಿದೆ. ಅಷ್ಟೇ ಅಲ್ಲ ಪ್ರವಾಸೋದ್ಯಮ ರೀತಿಯಲ್ಲಿಯೇ ಆಹಾರೋದ್ಯಮದಲ್ಲಿಯೂ ಹೆಸರು ಗಳಿಸಿದೆ. ನಮ್ಮಲ್ಲಿ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮ, ಊರು, ಬೀದಿ, ಬೀದಿಗಳಲ್ಲಿ ವೈವಿಧ್ಯಮಯವಾದ ರುಚಿ, ರುಚಿಯಾದ ಆಹಾರ ಸಿಗುವುದು ವಿಶೇಷತೆಯಾಗಿದೆ.
ಯಾವಾಗಲೂ ಪ್ರವಾಸಿಗರು ಸ್ಥಳೀಯ ರುಚಿಕಟ್ಟಾದ ಊಟೋಪಚಾರ, ಉಪಹಾರವನ್ನೇ ಹುಡುಕಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ನಿಮಗೆ ಕರಾವಳಿ ಭಾಗದಲ್ಲಿ ತುಂಬಾ ಸಲೀಸಾಗಿ ದೊರೆಯಬಲ್ಲ ಬಾಯಿ ಚಪ್ಪರಿಸುವ ಕೆಲವು ತಿಂಡಿಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಬನ್ನಿ..ಉಡುಪಿಯ ವೈಶಾಲಿ ಚಾಟ್ ಶಾಪ್ ಗೆ;
ಹೌದು ಉಡುಪಿ ಕೃಷ್ಣನ ನಾಡಿಗೆ ಬಂದರೆ ನೀವು ಸಂಸ್ಕೃತ ಕಾಲೇಜಿನ ಎದುರು ಭಾಗದ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿರುವ ವೈಶಾಲಿ ಚಾಟ್ ಶಾಪ್ ಗೆ ತಪ್ಪದೇ ಭೇಟಿ ಕೊಡೋದನ್ನು ಮರೆಯಬೇಡಿ. ಚಾಟ್ ಪ್ರೇಮಿಗಳಿಗೆ ಬಾಯಿ ಚಪ್ಪರಿಸುವ ರೀತಿಯಲ್ಲಿ ಗ್ರಾಹಕರು ತೃಪ್ತಿಪಡುವ ರೀತಿಯಲ್ಲಿ ಸವಿಯಬಹುದು.
ವೈಶಾಲಿ ಚಾಟ್ ನಲ್ಲಿ ಬೌಲ್ ನಲ್ಲಿ ಗರಿಗರಿಯಾದ ಸೇಮಿಗೆಯ ಮಸಾಲಾ ಪುರಿ ಅದರ ಮೇಲೆ ಹಸಿರು ಬಟಾಣಿಯಿಂದ ಮಾಡಿದ ಬಿಸಿ, ಬಿಸಿ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿಕೊಡುತ್ತಾರೆ. ಹೀಗೆ ನೀವು ಬಾಯಿ ಚಪ್ಪರಿಸುವ ಸ್ಪೆಷಲ್ ಚಾಟ್ ಕುರಿತ ವಿಡಿಯೋ ಮಾಹಿತಿ ಇಲ್ಲಿದೆ…