Advertisement
ಕನ್ನಡ ಸಾಹಿತ್ಯ ಲೋಕದ ಕಾದಂಬರಿ ಕ್ಷೇತ್ರಕ್ಕೆ ಚದುರಂಗ ಅವರ “ವೈಶಾಖ’ ಒಂದು ಮಹ ತ್ವದ ಕೊಡುಗೆ. ಮಹಿಳೆ ಮತ್ತು ಶೋಷಿತರ ಬಗ್ಗೆ ಅನುಕಂಪವಿರುವ ಈ ಕೃತಿಯಲ್ಲಿ ಪಾತ್ರಗಳ ವೈವಿಧ್ಯ ಗಮನ ಸೆಳೆಯುತ್ತದೆ.ಬದುಕಿನ ನೋವು ನಲಿವುಗಳು, ಎದುರಾಗುವ ಸಮಸ್ಯೆಗಳು ಮುಂತಾದ ಹಲವು ವಿಷಯಗಳು ಕಥೆಯ ರೂಪದಲ್ಲಿ ಕೃತಿಯಲ್ಲಿ ಮೂಡಿಬಂದಿದೆ.
Related Articles
Advertisement
ಕಾದಂಬರಿಯ ಮಧ್ಯಭಾಗದಲ್ಲಿ ತನಗರಿವಿ ಲ್ಲದಂತೆ ಕೃಷ್ಣ ಶಾಸ್ತ್ರಿಗಳು ರುಕ್ಮಿಣಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾರೆ. ಇದು ಇಬ್ಬರನ್ನೂ ಚಿಂತೆಗೀಡು ಮಾಡುತ್ತದೆ. ಇನ್ನೊಂದೆಡೆ ಯಾವುದೋ ಕಾರಣಕ್ಕೆ ಭೀಮನ ಹಳ್ಳಿಗೆ ಹೋಗುವ ಕಾಡಿನ ಹಾದಿಯಲ್ಲಿರುವ ಲಕ್ಕನ ಮನೆಯ ಮೇಲೆ ರುಕ್ಮಿಣಿಯೇ ಆಕ್ರಮಣ ಮಾಡುತ್ತಾಳೆ. ಅದರಲ್ಲಿ ಆಕೆ ಹೊಂದಿರುವ ರಹಸ್ಯ ಉದ್ದೇಶ ಬೇರೆಯೇ ಇದೆ. ಅದೊಂದು ರೀತಿಯಲ್ಲಿ ಕುತೂಹಲ ವನ್ನೂ ಮೂಡಿಸುತ್ತದೆ.
ಕಾದಂಬರಿಯ ಕೊನೆಯ ಭಾಗದಲ್ಲಿ ರುಕ್ಮಿಣಿ ತಾನು ಗರ್ಭಿಣಿಯಾದ ವಿಷಯ ಲಕ್ಕನ ಬಳಿ ಹೇಳುವ ಪ್ರಸಂಗವಿದೆ. ವಿಷಯ ಇಡೀ ಊರಿಗೆ ಹಬ್ಬುತ್ತದೆ. ಎಲ್ಲರೂ ಲಕ್ಕನೇ ಇದಕ್ಕೆ ಕಾರಣ ಎನ್ನುತ್ತಾರೆ. ಇದರಿಂದ ಲಕ್ಕನು ಹಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.
ಇತ್ತ ಶಾಸ್ತ್ರಿಗಳಿಗೆ ತನ್ನಿಂದ ಆದ ತಪ್ಪಿಗೆ ಲಕ್ಕ ಮತ್ತು ರುಕ್ಮಿಣಿ ಪಡುವ ಹಿಂಸೆ ನೋವು ತರಿಸುತ್ತದೆ. ತನ್ನ ಮರ್ಯಾದೆಯನ್ನು ಉಳಿ ಸಲು ಅವರಿಬ್ಬರು ಸುಳ್ಳು ಹೇಳಿ ನೋವು ಅನುಭವಿಸು ತ್ತಿ¨ªಾರೆಂದು ನೊಂದು ಕೊಳ್ಳುತ್ತಾರೆ. ಈ ನಡುವೆ ತನ್ನ ಗರ್ಭಕ್ಕೆ ಕಾರಣರಾದವರ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲಾಗದೆ ರುಕ್ಮಿಣಿ ಇಕ್ಕಟ್ಟಿನಲ್ಲಿ ಸಿಲುಕುವ ಪರಿಯನ್ನೂ ಕಾದಂಬ ರಿಯಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ.
ರುಕ್ಮಿಣಿಯ ಗರ್ಭದ ವಿಷಯದಲ್ಲಿ ಊರಿನಿಂದ ಲಕ್ಕನನ್ನು ಬಹಿಷ್ಕರಿಸಲಾಗುತ್ತದೆ. ಈ ಸಂದರ್ಭ ತಾಯಿ ಕಲ್ಯಾಣಿ, ತಂಗಿ ಶಿವುನಿಯ ವಾತ್ಸಲ್ಯದ ಚಿತ್ರಣ ಮನಸ್ಪರ್ಶಿ ಯಾಗಿದೆ. ಇಡೀ ಕಾದಂಬರಿಯಲ್ಲಿ ಸಾವು ನೋವುಗಳ ತೊಳಲಾಟದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ.
ಈ ನಡುವೆ ಎಲ್ಲ ಸಮಸ್ಯೆಗಳಿಗೂ ತಾನೇ ಕಾರಣ ಎಂದು ರುಕ್ಮಿಣಿ ಮನೆಬಿಟ್ಟು ಹೋಗು ವುದು, ಬಳಿಕ ಅವಳ ಸಾವಿನ ಸುದ್ದಿ, ಇದರಿಂದ ನೊಂದುಕೊಳ್ಳುವ ಲಕ್ಕ ಮುಂತಾದವೆಲ್ಲ ಓದುಗರನ್ನು ಸೆಳೆದು ನಿಲ್ಲಿಸುತ್ತವೆ.
ಈ ಕೃತಿಯು ಹಲವು ರೀತಿಯ ಮಾನಸಿಕ ಸಂಘರ್ಷಗಳು, ಸಾಮಾಜಿಕ ಮೌಡ್ಯತೆಯ ಪ್ರತಿಬಿಂಬವಾಗಿ ನಮ್ಮ ವಿವೇಕಕ್ಕೆ ಕವಿದಿರುವ ಮಸುಕನ್ನು ದೂರ ಮಾಡಲು ಪೂರಕವಾಗಿದೆ.
– ಪೂರ್ಣಿಮಾ ಬಿ., ಕುಣಿಗಲ್