Advertisement

ವೈರಮುಡಿ : ಹೊರ ರಾಜ್ಯ, ಜಿಲ್ಲೆಯ ಭಕ್ತಾದಿಗಳಿಗೆ ನಿರ್ಬಂಧ

12:26 PM Mar 16, 2021 | Team Udayavani |

ಮಂಡ್ಯ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್‌-19 ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ವೈರಮುಡಿ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದು, ಅಂತಾರಾಜ್ಯ, ಅಂತರ್‌ ಜಿಲ್ಲೆ ಮಂಡ್ಯದ ಇತರೆ ತಾಲೂಕುಗಳಿಂದ ಬರುವ ಭಕ್ತಾದಿಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನೆಗೆಟಿವ್‌ ವರದಿ ಬಂದವರಿಗೆ ದರ್ಶನ: ಭಕ್ತಾ ಗಳ ದರ್ಶನಕ್ಕೆ ದೇವಸ್ಥಾನದ 2 ಪ್ರವೇಶ ದ್ವಾರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರವೇಶ ದ್ವಾರದಲ್ಲಿಯೇ ಕೋವಿಡ್‌-19 ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು. ಅಲ್ಲದೇ, ನೆಗೆಟಿವ್‌ ವರದಿ ಬಂದವರಿಗೆ ಸೀಲ್‌ ಹಾಕಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

2 ಸಾವಿರ ಭಕ್ತರಿಗೆ ಅವಕಾಶ: ಉತ್ಸವದಲ್ಲಿ ಕೇವಲ 2 ಸಾವಿರ ಹೆಚ್ಚಿನ ಭಕ್ತಾ ದಿಗಳು ಸೇರದಂತೆ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನದ ಪ್ರಾಂಗಣದೊಳಗೆ ಒಂದು ಬಾರಿಗೆ ನೂರಕ್ಕಿಂತ ಹೆಚ್ಚು ಜನರಿಗೆ ಪ್ರವೇಶವಿಲ್ಲ. ದೇವಸ್ಥಾನದಲ್ಲಿ ನಿಯೋಜಿಸಿರುವ ಅರ್ಚಕರು, ಸರ್ಕಾರಿ ಸಿಬ್ಬಂದಿ ಹೊರತುಪಡಿಸಿ, ಹೆಚ್ಚುವರಿ ಅರ್ಚಕರು, ಸಿಬ್ಬಂದಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇಗುಲ ಆವರಣದಲ್ಲಿ ಗುಂಪುಗೂಡುವುದನ್ನು ಹಾಗೂ ರಾತ್ರಿ ವೇಳೆಯಲ್ಲಿ ತಂಗುವಿಕೆಯನ್ನು ನಿಷೇ ಧಿಸಲಾಗಿದೆ ಎಂದರು.

ಪ್ರಸಾದ ವಿತರಣೆ ಇಲ್ಲ: ಒಳ ಮತ್ತು ಹೊರ ಆವರಣದಲ್ಲಿ ಯಾವುದೇ ರೀತಿಯ ಸಾಮೂಹಿಕ ಭೋಜನ ವ್ಯವಸ್ಥೆ, ಪ್ರಸಾದ ವಿತರಣೆ ಇರುವುದಿಲ್ಲ. ಸುತ್ತಮುತ್ತಲಿನ ಹೋಟಲ್‌ ಗಳನ್ನು ತೆರೆಯ ದಂತೆ ಆದೇಶಿಸಲಾಗಿದೆ ಎಂದರು.

Advertisement

ರಾತ್ರಿ 12ರೊಳಗೆ ಮುಗಿಯಲಿದೆ: 24ರಂದು ಬ್ರಹ್ಮೋತ್ಸವ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯಲಿದ್ದು, ರಾತ್ರಿ 12 ಗಂಟೆಯೊಳಗೆ ಮುಗಿಯುವಂತೆ ಕ್ರಮ ವಹಿಸಲಾಗಿದೆ. ಸರಳ ಆಚರಣೆಗೆ ಸಾರ್ವಜನಿಕರು ಸಹಕರಿಸಬೇಕು. ಸ್ಥಳದಲ್ಲಿ ಮಾಸ್ಕ್ ಧರಿಸಿ, ನಿಯೋಜಿಸಿರುವ ಸ್ಯಾನಿಟೈಸರ್‌ ಬಳಸಿ ಹಾಗೂ 3.25 ಚ.ಮೀ ದೈಹಿಕ ಅಂತರ ಕಾಪಾಡಿಕೊಂಡು ಸ್ವಾಮಿಯ ದರ್ಶನ ಪಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಂಡವಪುರದ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಪೊಲೀಸ್‌ ವರಿಷ್ಠಾ ಧಿಕಾರಿ ಡಾ.ಎಂ.ಅಶ್ವಿ‌ನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ, ವಾರ್ತಾಧಿಕಾರಿ ಟಿ.ಕೆ. ಹರೀಶ್‌, ಪಾಂಡವಪುರ ತಹಶೀಲ್ದಾರ್‌ ಪ್ರಮೋದ್‌ ಎಲ್‌ .ಪಾಟೀಲ್‌ ಮತ್ತಿತರರು ಇದ್ದರು.

 19ರಿಂದ 31ರವರೆಗೆ ವೈರಮುಡಿ ಉತ್ಸವ : ಮಾ.19ರಿಂದ 31ರವರೆಗೆ ವಿಶ್ವ ವಿಖ್ಯಾತಿ ಮೇಲುಕೋಟೆ ವೈರಮುಡಿ ಉತ್ಸವ ನಡೆಯಲಿದ್ದು, 24ರಂದು ಶ್ರೀ ಚೆಲುವ ನಾರಾಯಣಸ್ವಾಮಿಯ ವೈರಮುಡಿ ಕಿರೀಟಧಾರಣೆ ಮಹೋತ್ಸವ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾ ದಿಗಳು ಭಾಗವಹಿಸುವುದರಿಂದ ಮಾ.12ರ ಸರ್ಕಾರದ ಆದೇಶದಂತೆ ಕೋವಿಡ್‌-19 ವೈರಸ್‌ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮಗಳನ್ನು ಸೂಚಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ನಿಬಂಧನೆಗಳೇನು? :

  1. ದೇವಸ್ಥಾನದ ಎರಡು ಪ್ರವೇಶ ದ್ವಾರಗಳಲ್ಲಿ ಭಕ್ತರಿಗೆ ಅವಕಾಶ
  2. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ ಬಳಸಬೇಕು.
  3. ದೈಹಿಕ ಅಂತರ ಕಾಪಾಡಿಕೊಳ್ಳಬೇಕು.
  4. ಭಕ್ತಾ ದಿಗಳಿಗೆ ಕೋವಿಡ್‌ ಪರೀಕ್ಷೆ, ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ.
  5. ವೈರಮುಡಿ, ಕೃಷ್ಣರಾಜಮುಡಿ ಪರಕಾವಣೆ ವೇಳೆ 100 ಮಂದಿಗೆ ಅವಕಾಶ
  6. ನಿಗದಿತ ಅರ್ಚಕರು ಹೊರತುಪಡಿಸಿ ಹೆಚ್ಚುವರಿ ಅರ್ಚಕರಿಗೆ ನಿರ್ಬಂಧ
  7. ಹೆಚ್ಚುವರಿ ನೌಕರರ ಪ್ರವೇಶ ನಿರ್ಬಂಧ
  8. ಅರ್ಚಕರು ಹಾಗೂ ನೌಕರರಿಗೆ ಕಡ್ಡಾಯ ಕೋವಿಡ್‌ ಲಸಿಕೆ 9 ದೇವಸ್ಥಾನದ ಸುತ್ತಮುತ್ತ 100 ಮೀಟರ್‌ ಬ್ಯಾರಿಕೇಡ್‌ ಅಳವಡಿಕೆ
  9. ಉತ್ಸವ ವೀಕ್ಷಣೆಗೆ ತೆರೆದ ಪ್ರದೇಶಗಳಲ್ಲಿ 500 ಮಂದಿಗೆ ಅವಕಾಶ
  10. ಹೆಚ್ಚುವರಿ ಬಸ್‌ ಸಂಚಾರಕ್ಕೆ ನಿರ್ಬಂಧ
  11. ರಾಜ್ಯ, ಜಿಲ್ಲೆ, ಹೊರ ರಾಜ್ಯದ ಭಕ್ತಾ ಗಳಿಗೆ ನಿರ್ಬಂಧ 13 ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಸುತ್ತೋಲೆಯಂತೆ ವೈರಮುಡಿ ಬ್ರಹ್ಮೋತ್ಸವ ವನ್ನು ಸರಳವಾಗಿ ಆಚರಿಸಲು ಕ್ರಮ ವಹಿಸಲಾಗಿದೆ.  ಕೋವಿಡ್ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಭಕ್ತಾ ದಿಗಳು ಹಾಗೂ ಸಾರ್ವಜನಿಕರು ಕೊರೊನಾ ನಿಯಮ ಪಾಲಿಸುವ ಮೂಲಕ ನಿಯಂತ್ರಣಕ್ಕೆ ಕೈಜೋಡಿಸಬೇಕು. – ಎಸ್‌.ಅಶ್ವಥಿ,  ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next