ಮೇಲುಕೋಟೆ: ವಿಶ್ವ ಪ್ರಸಿದ್ಧ ಮೇಲುಕೋಟೆ ವೈರಮುಡಿ ಉತ್ಸವ ಮಾ.24ರಂದು ನಡೆಯುವ ಹಿನ್ನೆಲೆಯಲ್ಲಿ ಕಳೆದ ಮೂರು ದಶಕಗಳಲ್ಲೇ ಕಾಣದ ರೀತಿ ವೈರಮುಡಿ ಜಾತ್ರಾ ಮಹೋತ್ಸವ ರಂಗು ಪಡೆದಿದೆ. ದೀಪಾಲಂಕಾರ: ವಿಶೇಷ ದೀಪಾಲಂಕಾರದಿಂದ ಮೇಲುಕೋಟೆ ಸಂಪೂರ್ಣವಾಗಿ ಜಗಮಗಿಸುತ್ತಿದ್ದು, ಮೇಲುಕೋಟೆಯ ರಾಜಬೀದಿ, ಉತ್ಸವಬೀದಿ, ಕಲ್ಯಾಣಿ, ಚೆಲುವನಾರಾಯಣಸ್ವಾಮಿ ದೇವಾಲಯಅಕ್ಕತಂಗಿಕೊಳ, ರಾಯಗೋಪುರ ಕಲ್ಯಾಣಿ ಬೀದಿ ಮತ್ತಿತರ ಕಡೆಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ.
ಪಾರ್ಕರ್ ಲೈಟ್: ಚೆಲುವನಾರಾಯಣಸ್ವಾಮಿ ದೇವಾ ಲಯದ ಗಂಡಬೇರುಂಡ ರಾಜ ಗೋಪುರ 15 ಸೆಕೆಂಡಿಗೊಮ್ಮೆ ಬದಲಾ ಗುವ ಆಕರ್ಷಕ ಪಾರ್ಕರ್ ಲೈಟ್ ಬೆಳಕಿನಿಂದ ಕಂಗೊಳಿಸುತ್ತಿದೆ.ಪ್ರಮುಖ ಬೀದಿಗಳಲ್ಲಿ ಅಳವಡಿ ಸಿರುವ ಎಲ್‌ಇಡಿ ದೀಪಾಲಂಕಾ ರದ ಸೊಬಗು ಭಕ್ತರ ಮನ ಸೂÃ ಗೊಂಡಿದೆ.
ಕಲ್ಯಾಣೋತ್ಸವ: ಮೇಲು ಕೋಟೆಯ ಪ್ರಮುಖ ಆಕ ರ್ಷಣೆ ಯೋಗನರಸಿಂಹ ಸ್ವಾಮಿ ಬೆಟ್ಟಕ್ಕೂ ಅತ್ಯಾಕರ್ಷಕದೀಪಾಲಂಕಾರ ಮಾಡುವ ಕಾರ್ಯ ಭರದಿಂದ ಸಾಗಿದೆ. ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡಪ್ರಮುಖ ಬೀದಿಗಳು ಮತ್ತು ಕಲ್ಯಾಣಿಯಲ್ಲಿ ದೀಪಾಲಂಕಾರ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಗನರಸಿಂಹಸ್ವಾಮಿ ಬೆಟ್ಟ ಹಾಗೂ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಉತ್ಸವ ಬೀದಿಗಳಲ್ಲಿ ಮತ್ತಷ್ಟು ವಿಶೇಷ ದೀಪಾಲಂಕಾರ ಮಾಡುವಂತೆ ಚೆಸ್ಕಾಂ ಅ ಧಿಕಾರಿಗಳಿಗೆಸೂಚನೆ ನೀಡಿದರು. ಇದೇ ವೇಳೆ ದೀಪಾಲಂಕಾರದ ಯಶಸ್ಸಿಗೆ ಶ್ರಮಿಸುತ್ತಿರುವ ಚೆಸ್ಕಾಂ ಮಂಡ್ಯ ವೃತ್ತದ ಅ ಧೀಕ್ಷಕ ಇಂಜಿನಿಯರ್ ಸ್ವಾಮಿ ಅವರನ್ನು ಸಚಿವ ನಾರಾಯಣಗೌಡ ಅಭಿನಂದಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈರಮುಡಿ ಜಾತ್ರಾ ಮಹೋತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿಗಳೇ ಮೈಸೂರಿನ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ ಕಾರಣ ದಸರಾ ಮಾದರಿಯಲ್ಲಿ ಎಲ್‌ಇಡಿ ಬಲ್ಬ್ ಬಳಸಿ ದೀಪಾಲಂಕಾರ ಮಾಡಲಾಗಿದೆ. ಭಕ್ತರ ಕಣ್ಮನ ಸೆಳೆಯುತ್ತಿದೆ. ಪಾಂಡವಪುರ ಉಪವಿಭಾಗಾಧಿಕಾರಿಶಿವಾನಂದಮೂರ್ತಿ, ಚೆಸ್ಕಾಂ ಸಹಾ ಯಕ ಕಾರ್ಯ ಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಮೇಲುಕೋಟೆ ಸಹಾಯಕ ಇಂಜಿನಿಯರ್ ಸತೀಶ್ ಇದ್ದರು.
ಕಾರ್ಯಕ್ರಮಗಳ ವಿವರ :
ಮಾ. 22: ಬೆಳಗ್ಗೆ ಆಚಾರ್ಯ ರಾಮಾನುಜರಿಗೆ ಅಭಿಷೇಕ, ರಾತ್ರಿ
ಸ್ವಾಮಿಗೆ ಶೇಷವಾಹನೋತ್ಸವ
ಮಾ. 23: ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲಿ ಮಹೋತ್ಸವ, ರಾತ್ರಿ
ಚಂದ್ರಮಂಡಲ ವಾಹನೋತ್ಸವ
ಮಾ. 25: ಸಂಜೆ ವೇದಾಂತ ದೇಶಿಕರ ಸನ್ನಿ ಧಿಯಲ್ಲಿ ಪ್ರಹ್ಲಾದ
ಪರಿಪಾಲನ, ರಾತ್ರಿ ಗರುಡ ವಾಹನೋತ್ಸವ
ಮಾ. 26: ಸಂಜೆ ಗಜೇಂದ್ರಮೋಕ್ಷ, ರಾತ್ರಿ ಆನೆ, ಕುದುರೆ ವಾಹನೋತ್ಸವ
ಮಾ. 27: ರಂದು ಬೆಳಗ್ಗೆ 10ಕ್ಕೆ ಮಹಾರಥೋತ್ಸವ, ರಾತ್ರಿ ಹರಿಜನ
ಸೇವೆಯಾದ ಪುಷ್ಪ ಪಲ್ಲಕ್ಕಿ ಉತ್ಸವ
ಮಾ. 28: ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ರಾತ್ರಿ ಕಳ್ಳರ ಸುಲಿಗೆ
ಮಾ. 29: ಬೆಳಗ್ಗೆ ಸಂಧಾನ ಸೇವೆ, ನಂತರ ಕಲ್ಯಾಣಿಯಲ್ಲಿ ತೀರ್ಥ
ಸ್ನಾನ, ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ. ರಾತ್ರಿ ಸಮರ
ಭೂಪಾಲ ವಾಹನೋತ್ಸವ
ಮಾ. 30: ಬೆಳಗ್ಗೆ ಮಹಾಭಿಷೇಕ, ಸಂಜೆ ಹನುಮಂತ ವಾಹನೋತ್ಸವ.