Advertisement

ವೈಕುಂಠ ಏಕಾದಶಿ ಅದ್ಧೂರಿ ಆಚರಣೆ

04:24 PM Dec 26, 2020 | Adarsha |

ಹುಬ್ಬಳ್ಳಿ: ವೈಕುಂಠ ಏಕಾದಶಿಯನ್ನುನಗರದಲ್ಲಿ ಭಕ್ತಿಭಾವದಿಂದ ಅದ್ಧೂರಿ ಯಾಗಿ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಧಾಮಿìಕ ಕಾರ್ಯಕ್ರಮಗಳು ನಡೆದವು. ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿತ್ತು.

Advertisement

ರಾಯಾಪುರದ ಇಸ್ಕಾನ್‌ ದೇವಸ್ಥಾ ನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ವಿಶೇಷ ಪೂಜೆ, ನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ನೃಪತುಂಗ ಬೆಟ್ಟದ ಹಿಂದೆ ಇರುವ ಕಾಶೀಮಠದ ಶ್ರೀ ವೆಂಕಟರಮಣ ಮಂದಿರದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಇದನ್ನೂ ಓದಿ:ಬೆಳ್ತಂಗಡಿ: ಗ್ರಾ.ಪಂ. ಚುನಾವಣೆ ಹಿನ್ನೆಲೆ ಮಸ್ಟರಿಂಗ್; ಮತಪೆಟ್ಟಿಗೆ ಹಿಡಿದು ನಡೆದ ಸಿಬ್ಬಂದಿ

ಬೆಳಗ್ಗೆಯಿಂದಲೇ ಭಕ್ತರು ಮಂದಿರಕ್ಕೆ ಆಗಮಿಸಿ ದರ್ಶನ ಪಡೆದರು. ವಿವಿಧ ಹೂ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ನಗರದ ತೊರವಿಗಲ್ಲಿ, ಸಿಬಿಟಿ ಗೌಳಿಗಲ್ಲಿ, ಮಯೂರ ಎಸ್ಟೇಟ್‌, ಚಿಟಗುಪ್ಪ ಆಸ್ಪತ್ರೆ ಆವರಣ ಸೇರಿದಂತೆ ವಿವಿಧೆಡೆಗಳಲ್ಲಿ ವೆಂಕಟೇಶ್ವರ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next