Advertisement

ಬಿಜೆಪಿ ಮಾಜಿ ಶಾಸಕರ ಪುತ್ರನ ಗುಂಡಿಕ್ಕಿ ಹತ್ಯೆ

07:30 AM Dec 18, 2017 | Team Udayavani |

ಲಕ್ನೋ: ಉತ್ತರ ಪ್ರದೇಶದ ಶಾಸಕರ ಭವನದ ಸಮೀಪವೇ ಬಿಜೆಪಿ ಮಾಜಿ ಶಾಸಕರೊಬ್ಬರ ಪುತ್ರನ ಹತ್ಯೆಯಾಗಿದೆ. ಪ್ರೇಮ್‌ ಪ್ರಕಾಶ್‌ ತಿವಾರಿ ಅವರ ಪುತ್ರ ವೈಭವ್‌ ತಿವಾರಿ (38) ಅವರೇ ಕೊಲೆಯಾದವರು. ಮನೆಯಿಂದ ಹೊರಗೆ ಬರುವಂತೆ ಕರೆಸಿಕೊಂಡು ಕೆಲವು ಪರಿಚಯಸ್ಥರೇ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿ ದ್ದಾರೆ. ಶಾಸಕರ ಭವನದ ಪಕ್ಕದಲ್ಲೇ ಘಟನೆ ನಡೆದಿರುವುದು ಜನತೆಯನ್ನು ತಲ್ಲಣಗೊಳಿಸಿದೆ. ವಿಧಾನ ಮಂಡಲ ಅಧಿವೇಶನದಲ್ಲೂ ಇದು ಪ್ರಸ್ತಾಪವಾಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next