Advertisement

‘ಕೇಳುಗರ ಒಲವು -ಅರಿವು ಸಂಗೀತಕ್ಕೆ  ಪ್ರೇರಕ ‘

02:58 PM Dec 25, 2018 | Team Udayavani |

ಉಡುಪಿ: ಕೇಳುಗರ ಒಲವು ಮತ್ತು ಅರಿವು ಸಂಗೀತಕ್ಕೆ ಪ್ರೇರಕ ಎಂದು ಹಿರಿಯ ವಿದ್ವಾಂಸರಾದ ಡಾ| ನೀರ್ಕಜೆ ತಿರುಮಲೇಶ್ವರ ಭಟ್‌ ಹೇಳಿದರು. ಅವರು ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜ್ಯುಕೇಶನ್‌, ಮಹಾತ್ಮಾಗಾಂಧಿ ಮೆಮೋರಿಯಲ್‌ ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಆಯೋಜಿಸಿದ 41ನೇ ವಾದಿರಾಜ ಕನಕದಾಸ ಸಂಗೀತೋತ್ಸವದ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

Advertisement

ಹಲವು  ಭಾಗಗಳಿಂದ ಬಂದು ಭಾಗವಹಿಸಿ ಒಂದು ಸಂಗೀತದ ವಾತಾವರಣ ಉಂಟು ಮಾಡಿದ್ದಕ್ಕೆ ಎಲ್ಲ ಹಿರಿ-ಕಿರಿಯ ಕಲಾವಿದರನ್ನು ಡಾ| ಭಟ್‌ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ| ಉದಯಶಂಕರ್‌ ಮಾತನಾಡಿದರು.

ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಂಯೋಜನಾಧಿಕಾರಿ ಪ್ರೊ| ವರದೇಶ್‌ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಗೀತಾಸಕ್ತರ ಸೇರುವಿಕೆಯಿಂದ ಈ ಸಂಗೀತ ಕಾರ್ಯಕ್ರಮ ‘ಊರಿನ ಹಬ್ಬ’ವಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಂಗವಾಗಿ ನಡೆದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಉಮಾ ಉದಯಶಂಕರ್‌ ವಂದಿಸಿ, ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next