Advertisement
ಪಟ್ಟಣದಲ್ಲಿ ಬಂಜಾರಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 281ನೇ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಅಪರಾ ಜನಾಂಗ ಎಂದು ಘೋಷಿಸಿ ಕಾನೂನು ಪಾಸ್ ಮಾಡಿದ್ದ ಬ್ರಿಟಿಷ ಸರಕಾರ, ಆರು ವರ್ಷದಲ್ಲಿ ಹತ್ತು ಸಾವಿರ ಲಂಬಾಣಿಗರನ್ನು ಗಲ್ಲಿಗೇರಿಸಿತ್ತು. ಬ್ರಿಟಿಷರ ಹಿಂಸಾತ್ಮಕ ಧೋರಣೆ, ಕ್ರೂರ ದಬ್ಟಾಳಿಕೆಗೆ ನಲುಗಿದ್ದ ಬಂಜಾರಾ ಜನಾಂಗವನ್ನು ಅಂದು ಕಾಪಾಡಿದ್ದು ಸೇವಾಲಾಲ ಮಹಾರಾಜರು. ಬಸವಾದಿ ಶರಣರು ದಾಖಲಿಸಿರುವ ವಚನ ಚಿಂತನೆಗಳಂತೆ ಸೇವಾಲಾಲ ಮಹಾರಾಜರೂ ತಮ್ಮದೆ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಲಂಬಾಣಿ ಸುಮುದಾಯಕ್ಕೆ ಭಾಷೆಯಿದ್ದು, ಲಿಪಿ ಇಲ್ಲದ ಕಾರಣ ಅವು ದಾಖಲಾಗಿಲ್ಲ. ಇಂಥಹ ಮಹಾನ್ ಸಂತನ ಬದುಕನ್ನು ಪಠ್ಯಗಳಲ್ಲಿ ಅಳವಡಿಸದೆ ಸರಕಾರಗಳು ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿವೆ ಎಂದು ಆರೋಪಿಸಿದರು.
ಮಾಡಿಸುವುದಾಗಿ ಭರವಸೆ ನೀಡುವ ಮೂಲಕ ಸೇರಿದ್ದ ಸಾವಿರಾರು ಜನರಿಂದ ಚೆಪ್ಪಾಳೆಗಿಟ್ಟಿಸಿಕೊಂಡರು. ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಳಕರ್ಟಿ ಮಠದ ಶ್ರೀ ಮುನೀಂದ್ರ ಸ್ವಾಮೀಜಿ, ಯಲ್ಲಾಲಿಂಗ ಆಶ್ರಮದ ಶ್ರೀ ಜೇಮಸಿಂಗ್ ಮಹಾರಾಜ, ಅಳ್ಳೊಳ್ಳಿಯ ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಹಳಕರ್ಟಿ ದರ್ಗಾ ಶರೀಫ್ ಅಬುತುರಾಬಶಹಾ ಖ್ವಾದ್ರಿ, ಯರಗೋಳ ಶ್ರೀ, ಶ್ರೀ ಠಾಕೂರ ಮಹಾರಾಜ ಸಾನ್ನಿಧ್ಯ, ಮಾಜಿ ಶಾಸಕ ವಾಲ್ಮೀಕಿ ನಾಯಕ ಅಧ್ಯಕ್ಷತೆ ವಹಿಸಿದ್ದರು.
Related Articles
ಸೋನಿಬಾಯಿ ಚವ್ಹಾಣ, ಎಸಿಸಿ ಮುಖ್ಯಸ್ಥ ಕೆ.ಆರ್. ರೆಡ್ಡಿ, ಮುಖಂಡರಾದ ಡಾ| ರಾಮು ಪವಾರ, ಸದಾಶಿವ ಕಟ್ಟಿಮನಿ, ನೀಲಯ್ಯಸ್ವಾಮಿ ಮಠಪತಿ, ಸಿದ್ದಣ್ಣ ಕಲಶೆಟ್ಟಿ, ಬಸವರಾಜ ಪಂಚಾಳ, ರಮೇಶ ಕಾರಬಾರಿ, ತುಕಾರಾಮ ರಾಠೊಡ, ಈಶ್ವರ ರಾಠೊಡ, ಗಣೇಶ ಚವ್ಹಾಣ, ನಾಮದೇವ ಚವ್ಹಾಣ, ರಾಮು ರಾಠೊಡ ಪಾಲ್ಗೊಂಡಿದ್ದರು. ಸುರೇಶ ರಾಠೊಡ ನಿರೂಪಿಸಿದರು. ದೇವಜಿ ನಾಯಕ ವಂದಿಸಿದರು.
Advertisement
ಪ್ರತಿಭಾವಂತ ಬಂಜಾರಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲುಪಟ್ಟಣದಾದ್ಯಂತ ನಡೆದ ಸೇವಾಲಾಲ ಮಹಾರಾಜರ ಭವ್ಯ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ತಾಂಡಾಗಳ ಸಾವಿರಾರು ಜನರು ಪಾಲ್ಗೊಂಡಿದ್ದರು. ಮೊಳಕೆಯೊಡೆದ ಸಸಿಗಳನ್ನು ಹೊತ್ತು ಸಾಗಿದ ಲಂಬಾಣಿ ಯುವತಿಯರು ಹಾಗೂ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.