Advertisement

ಬಸವನನ್ನು ಕಾಡಿ ಓಡಿಸಿದ್ದು ಮನುವಾದಿಗಳು

10:20 AM May 08, 2019 | Naveen |

ವಾಡಿ: ತಳವರ್ಗದ ಶರಣರನ್ನು ಅನುಭವ ಮಂಟಪದ ಮೂಲಕ ಸಂಘಟಿತರನ್ನಾಗಿಸಿ ಸಾಮಾಜಿಕ ಕ್ರಾಂತಿಗೆ ಮುಂದಾದ ಅಣ್ಣ ಬಸವಣ್ಣನನ್ನು ಮನುವಾದಿ ಜನರು ಹೆಜ್ಜೆ ಹೆಜ್ಜೆಗೂ ಕಾಡಿ ಓಡಿಸಿದರು ಎಂದು ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಹೇಳಿದರು.

Advertisement

ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಅಸ್ಪೃಶ್ಯತೆ ಪೋಷಿಸಿ ಅಸಮಾನತೆ ಆಚರಿಸುತ್ತಿದ್ದ ಮನುಸ್ಮೃತಿ ಸಿದ್ಧಾಂತಕ್ಕೆ ಸೆಡ್ಡುಹೊಡೆದ 12ನೇ ಶತಮಾನದ ಶರಣರು, ಅಂತರ್ಜಾತಿ ವಿವಾಹ ನೆರವೇರಿಸುವ ಮೂಲಕ ಜಾತಿ ತಾರತಮ್ಯದ ವಿರುದ್ಧ ಸಿಡಿದೆದ್ದರು. ಇದನ್ನು ಸಹಿಸದ ಪುರೋಹಿತಶಾಹಿ ಸನಾತನವಾದಿಗಳು ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದರು. ಬಸವಣ್ಣನವರ ವಚನ ಸಾಹಿತ್ಯ ಅರಿತರೆ ಮತ್ತೂಂದು ಕ್ರಾಂತಿ ಘಟಿಸುವುದರಲ್ಲಿ ಸಂಶಯವಿಲ್ಲ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಭಾವಚಿತ್ರ ಪೂಜಿಸುವುದಷ್ಟೇ ಬಸವ ಜಯಂತಿಯಲ್ಲ. ಅವರ ಆದರ್ಶ, ವಿಚಾರಗಳನ್ನು ಪಾಲಿಸಬೇಕು. ಬಸವ ಚಿಂತನೆಯಿಂದ ವಿಶ್ವ ಶಾಂತಿಯ ಜಗತ್ತು ಸ್ಥಾಪನೆ ಸಾಧ್ಯ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಮುನೀಂದ್ರ ಸ್ವಾಮೀಜಿ, ಮನದಾಳಕ್ಕಿಳಿದಿರುವ ಜಾತಿ ಎನ್ನುವ ಬೇರನ್ನು ಬುಡ ಸಮೇತ ಕಿತ್ತೆಸೆಯಲು ಬಸವಣ್ಣನ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು.

Advertisement

ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ಮಹೆಮೂದ್‌ ಸಾಹೇಬ, ಸಿದ್ಧಣ್ಣ ಬಿರಾದಾರ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ ಮಾತನಾಡಿದರು.

ಪುರಸಭೆ ಸದಸ್ಯ ಶರಣು ನಾಟೀಕಾರ, ವೀರಶೈವ ಸಮಾಜದ ಅಧ್ಯಕ್ಷ ಸಿದ್ಧಣ್ಣ ಕಲಶೆಟ್ಟಿ, ಯುವ ಘಟಕದ ಅಧ್ಯಕ್ಷ ಮಹಾಲಿಂಗ ಶೆಳ್ಳಗಿ, ಮುಖಂಡರಾದ ಕೊಳ್ಳಪ್ಪ ಸಿಂಧಗೀಕರ, ಶಾಂತಪ್ಪ ಶೆಳ್ಳಗಿ, ರಾಮಚಂದ್ರರೆಡ್ಡಿ, ಕಲ್ಯಾಣರಾವ ಶೆಳ್ಳಗಿ, ವಿಠ್ಠಲ ನಾಯಕ, ಶರಣಗೌಡ ಚಾಮನೂರ, ಬಸವರಾಜ ಕೀರಣಗಿ, ನಿಂಗಣ್ಣ ದೊಡ್ಡಮನಿ, ನಾಗರಾಜ ಗೌಡಪ್ಪನೋರ, ಕಾಶಿನಾಥ ಶೆಟಗಾರ, ಈರಣ್ಣ ಪಂಚಾಳ ಪಾಲ್ಗೊಂಡಿದ್ದರು. ವೀರಣ್ಣ ಯಾರಿ ಸ್ವಾಗತಿಸಿದರು, ಸಿದ್ಧಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next