Advertisement
ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಪ್ರತಿನಿಧಿಸುವ ಬಸವನಬಾಗೇವಾಡಿ ತಾಲೂಕು ವ್ಯಾಪ್ತಿಯ ಹಾಗೂ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಪ್ರತಿನಿಧಿಸುತ್ತಿರುವ ದೇವರಹಿಪ್ಪರಗಿ ಕ್ಷೇತ್ರದಲ್ಲಿರುವ ವಡವಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಮಿಕರಿಂದ ಕೇಳಿ ಬರುತ್ತಿರುವ ದೂರಿದು. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಡವಡಗಿ, ನಾಗರಾಳ ಹಾಗೂ ಹುಲುಬೆಂಚಿ ಗ್ರಾಮಗಳ ನೂರಾರು ಕಾರ್ಮಿಕರಿಗೆ ನರೇಗಾ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಜಾಬ್ ಕಾರ್ಡ್ ನೀಡಲಾಗಿಲ್ಲ.
Related Articles
Advertisement
ಇನ್ನು ಈ ದುರವಸ್ಥೆ ಪ್ರಶ್ನಿಸಿದರೆ ಕಾರ್ಮಿಕರಿಗೆ ಗ್ರಾಮದಲ್ಲಿ ಬೆದರಿಕೆ ಹಾಗೂ ಕಿರುಕುಳ ನೀಡಲು ಆರಂಭಿಸುತ್ತಾರೆ. ನರೇಗಾ ಮಧ್ಯವರ್ತಿಗಳು, ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ಗ್ರಾಪಂ ಪ್ರಭಾವಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿ ನಮ್ಮನ್ನೇ ಪ್ರಶ್ನಿಸುತ್ತಿಯಾ ಎಂದು ಬೆದರಿಕೆ ಹಾಕಿಸಲಾಗುತ್ತದೆ. ಇಂಥ ಕೆಲಸಕ್ಕಾಗಿಯೇ ಕೆಲವು ಮದ್ಯವ್ಯಸನಿಗಳನ್ನು ಹಿಂಬಾಲಕರನ್ನಾಗಿ ಮಾಡಿಕೊಂಡಿದ್ದಾರೆ. ಇಂಥವರ ಮೂಲಕ ನರೇಗಾದಲ್ಲಿ ಕೆಲಸ ಕೇಳುವ ಹಾಗೂ ಜಾಬ್ ಕಾರ್ಡ್ ಮಾಡಿಸಲು ಮುಂದಾಗುವ ನೈಜ ಕಾರ್ಮಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತದೆ. ಹೀಗಾಗಿ ಮುಜುಗುರಕ್ಕೀಡಾಗುವ ದುರವಸ್ಥೆಯೇ ಬೇಡ ಎಂದು ನೈಜವಾಗಿ ದುಡಿಯುವ ಕಾರ್ಮಿಕರು ಜಾಬ್ ಕಾರ್ಡ್ ಮಾಡಿಸುವ ಗೋಜಿಗೆ ಹೋಗಿಲ್ಲ.
ಬದಲಾಗಿ ಎಷ್ಟೇ ಕಷ್ಟವಾದರೂ ತಾಲೂಕ ಬಸವನಬಾಗೇವಾಡಿ ಇಲ್ಲವೇ ಜಿಲ್ಲಾ ಕೇಂದ್ರ ವಿಜಯಪುರ ನಗರಕ್ಕೆ ಬಸ್ ಚಾರ್ಜ್ ಮಾಡಿಕೊಂಡು ಕೂಲಿ ಕೆಲಸಕ್ಕೆ ಬರುತ್ತಾರೆ. ಬಸ್ ಚಾರ್ಜ್ ಹಾಗೂ ತಮ್ಮ ಖರ್ಚು ಕಳೆದರೂ ಕಿರಿ ಕಿರಿ ಇಲ್ಲದೇ ಪರಿಶ್ರಮಕ್ಕೆ ತಕ್ಕಂತೆ ಕನಿಷ್ಠ 200 ರೂ. ಉಳಿಯುವ ಕಾರಣ ಬಹುತೇಕ ಕಾರ್ಮಿಕರು ನರೇಗಾ ಹೆಸರು ನೋಂದಣಿ ಹಾಗೂ ಕೆಲಸ ಕೊಡಿ ಎಂಬ ಸಹವಾಸಕ್ಕೆ ಹೋಗಿಲ್ಲ.
ನಮ್ಮ ಗ್ರಾಪಂ ದುಡಿಯುವ ಕಾರ್ಮಿಕರಿಗೆ ನರೇಗಾದಲ್ಲಿ ಉದ್ಯೋಗವನ್ನೇ ಕೊಡುವುದಿಲ್ಲ. ನಿತ್ಯವೂ ಕೂಲಿ ಮಾಡುವ ನೂರಾರು ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಹೆಸರನ್ನೇ ನೋಂದಾಯಿಸಿ, ಜಾಬ್ ಕಾರ್ಡ್ ನೀಡಿಲ್ಲ. ಇದನ್ನು ಪ್ರಶ್ನಿಸಿದರೆ ರಾಜಕೀಯ ಪ್ರಭಾವ ಬಳಸಿ ಬೆದರಿಸುವ ಕೆಲಸ ಮಾಡಲಾಗುತ್ತದೆ. ಹೀಗಾಗಿ ನಾವು ಬಸ್‌ಚಾರ್ಜ್ ವೆಚ್ಚವಾದರೂ ನಗರ ಪ್ರದೇಶಕ್ಕೆ ದುಡಿಯಲು ಬರುತ್ತೇವೆ.•ಶ್ರೀಶೈಲ ಮನಹಳ್ಳಿ,
ನಗರಕ್ಕೆ ಕೂಲಿಗೆ ಬರುವ ಕಾರ್ಮಿಕ, ಸಾ| ವಡವಡಗಿ ನರೇಗಾ ಯೋಜನೆಯ ಅಯಾ ನೋಂದಾಯಿತ ಕಾರ್ಮಿಕರ ಬಳಿಯೇ ಜಾಬ್ ಕಾರ್ಡ್ ಇರಬೇಕು. ಕೂಲಿ ಕೇಳಿದ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಕೆಲಸ ಕಲ್ಪಿಸಬೇಕು. ನಿಯಮ ಬಾಹೀರವಾಗಿ ಯಾವುದೇ ರೀತಿಯಲ್ಲಿ ಅನ್ಯರು ಜಾಬ್ ಕಾರ್ಡ್ ಇರಿಸಿಕೊಳ್ಳುವ ಹಾಗೂ ಹಣದ ಅಕ್ರಮಕ್ಕೆ ಅವಕಾಶ ನೀಡಬಾರದು. ಇಂಥ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರಿಗಿಸಲಾಗುತ್ತದೆ.
•ವಿಕಾಸ ಸುರಳಕರ, ಜಿಪಂ ಸಿಇಒ ಗ್ರಾಪಂ ಸದಸ್ಯರು ಸೇರಿದಂತೆ ಅನ್ಯರ ಬಳಿ ನರೇಗಾ ಜಾಬ್ ಕಾರ್ಡ್ ಇರುವುದು, ಜಾಬ್ ಕಾರ್ಡ್ ಕೇಳಿದರೆ ಬೆದರಿಕೆ ಹಾಕಿರುವುದು ನನ್ನ ಗಮನಕ್ಕೆ
ಬಂದಿಲ್ಲ. ಎರಡು ವಾರದ ಹಿಂದಷ್ಟೇ ವರ್ಗಾವಣೆಗೊಂಡಿರುವ ನಾನು ನನ್ನ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಕೆಲಸ ಕೊಡಿಸಲು ಯೋಜನೆ ರೂಪಿಸುತ್ತೇನೆ.
ರಾಘವೇಂದ್ರ ಪಂಚಾಳ
ವಡವಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಕಮತರ