ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ, ಜಿಎಸ್‌ಬಿ ಸಮಾಜದ ಶ್ರೀ ರಾಮ ಮಂದಿರ ವಡಾಲದಲ್ಲಿ ನ. 20 ರಂದು ಮುಂಜಾನೆ 5ರಿಂದ ದೇವರ ವಿಶ್ವರೂಪ ದರ್ಶನ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮುಂಜಾನೆ 5.30ರಿಂದ ಪೂಜೆ ಪ್ರಾರಂಭಗೊಂಡಿತು. ಪ್ರಾರಂಭದಲ್ಲಿ ಕಾಕಡ ಆರತಿ, ಆನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ|ಮೂ| ಗೋವಿಂದ ಆಚಾರ್ಯ ಅವರ ಮುಂದಾಳತ್ವದಲ್ಲಿ ನೆರವೇರಿತು.
ವಡಾಲ ಮಠದ ಕಾರ್ಯಾಧ್ಯಕ್ಷ ಮುಕುಂದ್ ಕಾಮತ್, ವಡಾಲ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಮಂಡಳ ಸಮಿತಿಯ ಟ್ರಸ್ಟಿಗಳಾದ ಶಾಂತಾರಾಮ ಭಟ್, ಉಮೇಶ್ ಪೈ, ಪ್ರಮೋದ್ ಪೈ, ಮಾಜಿ ಕಾರ್ಯಾಧ್ಯಕ್ಷ ಎನ್. ಎನ್. ಪೈ, ರಾಮ ಮಂದಿರದ ವಕ್ತಾರ ಕಮಲಾಕ್ಷ ಸರಾಫ್, ಮಾಜಿ ಪದಾಧಿಕಾರಿಗಳಾದ ಜಿ. ಎಸ್. ಭಟ್, ವಿಜಯ ನಾಯಕ್, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳು ಅದ್ದೂರಿಯಾಗಿ ನಡೆಯಿತು.
ವೇ|ಮೂ| ಮೋಹನ್‌ದಾಸ್ ಭಟ್, ವೇ|ಮೂ| ಸುಧಾಮ ಭಟ್, ನಾಗೇಶ್ ಫಾವ್ಕರ್ ಮೊದಲಾದವರು ಸಹಕರಿಸಿದರು. ಕೊನೆಯಲ್ಲಿ ಫಲಾಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು. ಸೇವಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಲಡ್ಡು ಸೇವೆ, ದೀಪಾರಾಧನೆ ಸೇವೆ, ಫಲಾಹಾರ ಸೇವೆಯು ನಡೆಯಿತು. ಇದರ ಪ್ರಯೋ ಜನವನ್ನು ಭಕ್ತಾದಿಗಳು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಡೆದುಕೊಂಡರು. ಸಂಜೆ ತುಳಸಿ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಸಮಾಜ ಬಾಂಧವರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.