Advertisement

ಜೀವನಕ್ಕೆ ಶರಣರ ವಚನಗಳು ದಾರಿದೀಪ: ಹಿರೇಮಠ

05:53 PM Jan 18, 2022 | Team Udayavani |

ಬಾಗಲಕೋಟೆ: ಜೀವನದ ಅಪಮೌಲ್ಯಗಳ ಬಗ್ಗೆ ಗೊಂದಲಗಳಿಗೆ ಬಸವಾದಿ ಶರಣರ ತತ್ವಗಳು ಪರಿಹಾರ ನೀಡಬಲ್ಲವು ಎಂದು ಬಾದಾಮಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ  ಡಾ| ಜಿ.ಜಿ. ಹಿರೇಮಠ ಹೇಳಿದ್ದಾರೆ.

Advertisement

ನವನಗರದ ಸೆಕ್ಟರ್‌ ನಂ.52 ರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಖೀಲ ಭಾರತೀಯ ಸಾಹಿತ್ಯ ಪರಿಷತ್ತು ತಾಲೂಕು ಸಮಿತಿ ಹಾಗೂ ಜತ್ತಿ ಕುಟುಂಬವು ಲಿಂ| ಸಂಗಪ್ಪ ದಾನಪ್ಪ ಜತ್ತಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಸಾಹಿತ್ಯ ಸಿಂಚನ ವೇದಿಕೆಯ ಸರಣಿ ಉಪನ್ಯಾಸ ಮಾಲಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಜೀವನದ ಮೌಲ್ಯಗಳು ಮತ್ತು ಅಪಮೌಲ್ಯಗಳ ಬಗ್ಗೆ ಗೊಂದಲಗಳ ಸಾಗಿಸುತ್ತಿರುವ ಜೀವನಕ್ಕೆ ಬಸವಾದಿ ಶರಣರ ತತ್ವಗಳು ಹಾಗೂ ಅವರ ವಚನಗಳು ದಾರಿ ದೀಪವಾಗಬಲ್ಲವು, ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲವು ಎಂದರು.

ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಶರಣರ ತತ್ವಾದರ್ಶಗಳು ಹಾಗೂ ಸಾಹಿತ್ಯದ ಮೂಲಕ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ತರಬಹುದಾಗಿದೆ ಎಂದು ತಿಳಿಸಿದರು.

ಅಖೀಲ ಭಾರತೀಯ ವೀರಶೈವ ಮಹಾಸಭೆಯ ಜಿಲ್ಲಾ ಧ್ಯಕ್ಷ ಜಿ.ಎನ್‌. ಪಾಟೀಲ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಶರಣರ ತತ್ವ ಮೈಗೂಡಿಸಿಕೊಂಡು ಆದರ್ಶಮಯ ಸಂಸ್ಕಾರಗಳನ್ನು ಬೆಳೆಸಿಕೊಂಡು ಜೀವನ ಸಾಗಬೇಕಾಗಿದೆ. ಅವಿಭಕ್ತ ಕುಟುಂಬಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಸಂಬಂಧಗಳಿಗೆ ಬೆಲೆ ನೀಡಿ ಬದುಕುತ್ತಿರುವ ಜತ್ತಿ ಕುಟುಂಬ ಮಾದರಿಯಾಗಿದೆ ಎಂದು ಹೇಳಿದರು.

Advertisement

ಬಿವಿವಿ ಸಂಘದ ಮಾನವ ಸಂಪನ್ಮೂಲ ಅಧಿಕಾರಿ, ಸಾಹಿತಿ ಸಿದ್ದರಾಮ ಮನಹಳ್ಳಿ, ಬಿಮ್ಸ್‌ ನಿರ್ದೇಶಕ ಡಾ| ಆರ್‌.ಜಿ. ಅಳ್ಳಗಿ, ಸಾಹಿತಿ ಡಾ| ಪ್ರಕಾಶ ಖಾಡೆ, ಬಿವಿವಿ ಸಂಘದ ಪಾಲಿಟೆಕ್ನಿಕ್‌  ಸಂಸ್ಥೆ ಪ್ರಾಚಾರ್ಯ ಜಿ.ಬಿ. ದಾನಶೆಟ್ಟಿ ಮಾತನಾಡಿದರು. ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಎಸ್‌.ಜಿ. ಕೋಟಿ, ಶ್ರೀಶೈಲಪ್ಪ ದಾನಪ್ಪ ಜತ್ತಿ, ಶೇಖರಪ್ಪ ಜತ್ತಿ, ಅಶೋಕ ಜತ್ತಿ, ವಿರುಪಾಕ್ಷಿ ಜತ್ತಿ, ಸೋಮಶೇಖರ ಜತ್ತಿ, ವೀರಭದ್ರಪ್ಪ ವಾಲ, ವಿಜಯಲಕ್ಷ್ಮೀ ನರೇಗಲ್ಲ, ಶಿವಲೀಲಾ ಸಂಬಣ್ಣವರ, ಬಸವರಾಜ ಬಿದರಿ ಉಪಸ್ಥಿತರಿದ್ದರು.

ಉಮಾ ಜತ್ತಿ ಪ್ರಾರ್ಥಿಸಿದರು. ಪಿ.ಡಿ. ಜತ್ತಿ ಸ್ವಾಗತಿಸಿದರು. ಮಂಜುಳಾ ಅಂಗಡಿ, ನಿರ್ಮಲಾ ಲೂತಿಮಠ ಪರಿಚಯಿಸಿದರು. ಶ್ರೀಶೈಲ ಮಠ ನಿರೂಪಿಸಿದರು. ಶೇಖರ ಗೊಳಸಂಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next