Advertisement

ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಪೀಠಗಳ ಮುಖ್ಯ ಧ್ಯೇಯ: ವಚನಾನಂದ ಶ್ರೀಗಳು

11:29 AM Aug 06, 2022 | Team Udayavani |

ರಬಕವಿ-ಬನಹಟ್ಟಿ: ಅನ್ನ, ಅಕ್ಷರ, ದಾಸೋಹ, ಆರೋಗ್ಯ ಹಾಗೂ ಉದ್ಯೋಗಗಳ ಸಂಕೇತವಾಗಿ ಈಗಿರುವ ಹರಿಹರ,ಆಲಗೂರಿನ ಪಂಚಮಸಾಲಿ ಪೀಠಗಳು ರಾಜ್ಯಾದ್ಯಂತ ಕೃಷಿ ಮಾಡುವಲ್ಲಿ ಮುಂದಾಗಿವೆ. ಕೇವಲ ಪ್ರಚಾರ ಹಾಗು ಪತ್ರಿಕೆಗಳಿಗೆ ಸೀಮಿತವಾಗದೆ ಬೇರುಮಟ್ಟದಲ್ಲಿ ಸಮಾಜದಲ್ಲಿ ಹಿಂದುಳಿದವರ ಪರ ಧ್ವನಿಯಾಗಿ ಕಾರ್ಯನಿರ್ವಹಿಸುವುದೇ ಪೀಠಗಳ ಮುಖ್ಯ ಧ್ಯೇಯವಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಹೇಳಿದರು.

Advertisement

ರಬಕವಿಯ ದಲಾಲ ಫಾರ್ಮ್ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಪೀಠಗಳು ರಾಜ್ಯಾದ್ಯಂತ ಎಲ್ಲೆಂದರಲ್ಲಿ ಆದರೂ ತಪ್ಪೇನಿಲ್ಲ. ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಮಠಗಳಿಗೆ ಸದಾ ಬೆಂಬಲವಿದೆ. ವಿನಾಕಾರಣ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಠಿಸುವಂತಾಗಬಾರದೆಂದು ಪರೋಕ್ಷವಾಗಿ ಕೂಡಲಸಂಗಮ ಪೀಠದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

4 ವರ್ಷಗಳಿಂದ ಹರಿಹರ ಪೀಠದಲ್ಲಿ ಸಕಲ ರೀತಿಯ ಸೌಕರ್ಯಗಳನ್ನು ಒದಗಿಸಿ ಇದೀಗ ರಾಜ್ಯ ಪ್ರವಾಸದಲ್ಲಿ ತೊಡಗಿದ್ದು, ಪಂಚಮಸಾಲಿ ಸಮಾಜ ಬಲಿಷ್ಠತೆ ನಮ್ಮ ಗುರಿಯಾಗಿದೆ ಎಂದರು.

ಮೀಸಲಾತಿಗೆ ಮೌನ ಹೋರಾಟ: ರಾಜ್ಯ ಸರ್ಕಾರಕ್ಕೆ ಈಗಾಗಲೇ ಬೃಹತ್ ಪಾದಯಾತ್ರೆ, ರ‍್ಯಾಲಿಗಳ ಮೂಲಕ ಎಚ್ಚರಿಕೆ ನೀಡಿದೆ. ಮುಂದಿನ ಹೋರಾಟಗಳು ಮೌನ ರೀತಿಯಲ್ಲಿ ನಡೆಯಲಿದ್ದು, ಸರ್ಕಾರದ ಪ್ರತಿನಿಧಿಗಳು ಸ್ಪಂದನೆಯಲ್ಲಿರುವುದು ಸ್ವಾಗತಾರ್ಹ. ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ಮೂಲಕ 2ಎ ಮೀಸಲಾತಿಯನ್ನು ಪಡೆದುಕೊಂಡೇ ತೀರುತ್ತೇವೆಂದು ವಚನಾನಂದ ಶ್ರೀಗಳು ಹೇಳಿದರು.

ಇದೇ ಸಂದರ್ಭ ಸಮಾಜದ ಮುಖಂಡರಾದ ಭೀಮಶಿ ಮಗದುಮ್, ಬಸವರಾಜ ದಲಾಲ, ಬಸವರಾಜ ಕಾನಗೊಂಡ, ಪರಪ್ಪ ಉರಭಿನವರ, ಎಸ್.ಎಂ. ದಾಶ್ಯಾಳ, ಶಂಕರ ಮಲ್ಲಣ್ಣವರ ಸೇರಿದಂತೆ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next