Advertisement

ಭಾಲ್ಕಿಯಲ್ಲಿ ವಚನ ಕ್ರಾಂತಿಯ ಪುನರುತ್ಥಾನ ವಿಚಾರ ಸಂಕಿರಣ

12:29 PM Feb 26, 2018 | Team Udayavani |

ಭಾಲ್ಕಿ: ವಿಶ್ವದ ಸಕಲ ಜೀವಾತ್ಮರ ಲೇಸಿಗಾಗಿ ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ವಿಶಿಷ್ಟ ಕೊಡುಗೆಯಾಗಿದೆ ಎಂದು ಡಾ| ವೈ.ವೇ. ದೇವರುಷಿ ಹೇಳಿದರು. ಪಟ್ಟಣದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ವಚನ ಕ್ರಾಂತಿಯ ಪುನರುತ್ಥಾನ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಮಾಜದಲ್ಲಿ ದುಡಿಯುವ ಜನರೇ ವಚನ ಸಾಹಿತ್ಯದ ಉದಯಕ್ಕೆ ಕಾರಣರಾಗಿದ್ದಾರೆ. 12ನೇ ಶತಮಾನದಲ್ಲಿ ಉದಯವಾದ ವಚನ ಸಾಹಿತ್ಯದ ಅಧ್ಯಯನ ಅನುಷ್ಠಾನ ಇಂದಿನ ದಿನಮಾನಗಳಿಗೆ ಬಹು ಅವಶ್ಯಕವಾಗಿದೆ ಎಂದು ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ ಮಾತನಾಡಿ, ವಚನ ಸಾಹಿತ್ಯ ಸರ್ವರ ಹಿತವನ್ನು ಬಯಸುವ ಸಾಹಿತ್ಯವಾಗಿದೆ. 

ವ್ಯಕ್ತಿ ಮತ್ತು ಸಮಾಜ ಎರಡನ್ನೂ ಎತ್ತರಕ್ಕೆ ಕೊಂಡೊಯ್ಯುವ ಮೌಲಿಕ ವಿಚಾರ ಇಲ್ಲಿವೆ ಎಂದು ಹೇಳಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಪ್ರೊ| ವಿ.ಎಸ್‌. ಕಟ್ಟಿಮನಿ ಉದ್ಘಾಟಿಸಿದರು. ಸರಸ್ವತಿ ಸ್ವಾಮಿ ವಚನಗಾಯನ ಮಾಡಿದರು. ಪ್ರಾಚಾರ್ಯ ಪ್ರೊ| ಎಸ್‌.ಎಸ್‌. ರಾಂಪುರೆ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಪ್ರೊ| ಚಂದ್ರಶೇಖರ ಬಿರಾದಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next