Advertisement

ವಚನ ಸಾಹಿತ್ಯಕ್ಕೆ ಹಳಕಟ್ಟಿಕೊಡುಗೆ ಅಪಾರ: ಖಜೂರಿ ಶ್ರೀ

11:33 AM Jul 03, 2018 | |

ಆಳಂದ: ವಚನ ಸಾಹಿತ್ಯಕ್ಕೆ ಡಾ| ಘ. ಗು. ಹಳಕಟ್ಟಿ ಅವರ ಕೊಡುಗೆ ಅಪಾರ ಎಂದು ಖಜೂರಿ ಮಠದ ಮುರುಘೇಂದ್ರ ಸ್ವಾಮೀಜಿ ನುಡಿದರು. ಖಜೂರಿ ಗ್ರಾಮದ ನಿಜಾಚರಣೆ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ವಚನ ಪಿತಾಮಹ ಫ. ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. ಅಂದು ಬಸವಾದಿ ಶರಣರು ವಚನ ಚಳವಳಿಯನ್ನು ಜಗತ್ತಿಗೆ ಮಾದರಿ ರೀತಿಯಲ್ಲಿ ತೋರಿಸಿ ಕೊಟ್ಟರು. ಪುಸ್ತಕಗಳನ್ನು ತಲೆ ಮೇಲೆ ಹೊತ್ತು ಮನೆ ಮನೆಗೆ ಹಾಗೂ ಮನಗಳಿಗೂ ತಲುಪಿಸಿ ವಚನ ಸಾಹಿತ್ಯ ರಕ್ಷಣೆ ಮತ್ತು ಪ್ರಸಾರ ಮಾಡಿದ್ದಾರೆ ಎಂದು ಹೇಳಿದರು.

Advertisement

ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅನೇಕ ಬಡ ಮಕ್ಕಳಿಗೆ ಶಿಕ್ಷಣ ನೀಡಿ ಬಾಳು ಬೆಳಗಿದರು. ವಚನ ಸಾಹಿತ್ಯದ ಮಹತ್ವವನ್ನು ಜನರಿಗೆ ತಿಳಿಸಿಕೊಟ್ಟು ಪಿತಾಮಹ ಎನ್ನಿಸಿಕೊಂಡರು. ಕಾನೂನು ಪದವೀಧರರಾಗಿದ್ದರು. ವಚನ ಸಾಹಿತ್ಯವನ್ನು ಜೀವನದ ಉದ್ದಕ್ಕೂ ಕರಕಗತ ಮಾಡಿಕೊಂಡು ಜನಸಾಮಾನ್ಯರಿಗೂ ವಚನ ಅರಿಯುವಂತೆ ಮಾಡಿದರು. ಹಳಕಟ್ಟಿ ಅವರು ನಮ್ಮೊಂದಿಗೆ ಇರದಿದ್ದರು ಅವರ ಜನಪರ, ಸಾಮಾಜಿಕ ಕಾಳಜಿ ಮರೆಯುವಂತ್ತಿಲ್ಲ. ಪತ್ರಿಕಾ ರಂಗಕ್ಕೆ ಹಳಕಟ್ಟಿ ಅವರ ಸೇವೆ ಬಹಳಷ್ಟಾಗಿದೆ. ಆದ್ದರಿಂದ ಮಕ್ಕಳು ಪುಸ್ತಕದ ಜ್ಞಾನದ ಜತೆಗೆ ವಚನ ಸಾಹಿತ್ಯಅರಿಯಬೇಕು.

ಬಿಡುವಿನ ವೇಳೆಯಲ್ಲಿ ಮಹಾತ್ಮರ ಜೀವನ, ಸಾಧನೆಗಳು ತಿಳಿದುಕೊಂಡರೆ ಮಾತ್ರ ಉನ್ನತ ಸಾಧನೆಗೆ ಇದು ಪ್ರೇರಣೆಯಾಗುತ್ತದೆ ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶರಣಿ ನೀಲಲೋಚನಾ ತಾಯಿ, ಮುಖ್ಯ ಶಿಕ್ಷಕ ಸುಭಾಷ ಹರಳಯ್ಯ, ಶಿಕ್ಷಕಿ ಲಲಿತಾ ನಡಗೇರಿ ಮಾತನಾಡಿದರು. ಪ್ರಮುಖರಾದ ಸದಾನಂದ ಬಂಗರಗಿ,
ಹಣಮಂತ ನಗರೆ, ಕಮಲಾಬಾಯಿ ಪೂಜಾರಿ, ಖಂಡಪ್ಪ ಢಗೆ, ಮಥುರಾಬಾಯಿ ನಗರೆ, ದಿಲೀಪ ನಡಗೇರಿ, ಶಿಕ್ಷಕರಾದ ನರಸಿಂಗ ಸಗರ, ಶರಣಬಸಪ್ಪ ಶಿವಮೂರ್ತಿ, ಬಸವರಾಜ ಶೀಲವಂತ ಇದ್ದರು. ವಿದ್ಯಾರ್ಥಿಗಳಾದ ಭಾಗ್ಯಶ್ರೀ ದುಮ್ಮಾ, ಮಲ್ಲಮ್ಮ ಬಂಡೆ, ರಾಜಶ್ರೀ ಹಡಪದ ವಚನ ಗಾಯನ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next