Advertisement

ವಚನ-ದಾಸ ಸಾಹಿತ್ಯ ಅಗ್ರಮಾನ್ಯ: ಡಾ|ಹೇಮಲತಾ ವಡ್ಡೆ

12:05 PM Jan 19, 2018 | |

ಬೀದರ: ಶರಣರು ಮತ್ತು ದಾಸರು ತಮ್ಮ ಅನುಭಾವದ ನೆಲೆಯಿಂದ ವಚನ, ಕೀರ್ತನೆಗಳನ್ನು ರಚಿಸಿದ್ದಾರೆ. ವಿಶ್ವ
ಸಮುದಾಯಕ್ಕೆ ಅವರು ನೀಡಿರುವ ಮಾನವೀಯ, ಸಾಮಾಜಿಕ ಹಾಗೂ ಜೀವನ ಮೌಲ್ಯ ಭರಿತ ಸಂದೇಶಗಳನ್ನು ಅನುಕರಿಸಿ ಆದರ್ಶ ಬದುಕು ಕಟ್ಟಿಕೋಳ್ಳಬೇಕೆಂದು ಬೆಂಗಳೂರು ವಿವಿ ಪ್ರಾಧ್ಯಾಪಕಿ ಡಾ| ಹೇಮಲತಾ ವಡ್ಡೆ ಹೇಳಿದರು.

Advertisement

ನಗರದ ರಾಘವೇಂದ್ರಸ್ವಾಮಿ ಮಠದ ರಮಾ ಮಂಟಪದಲ್ಲಿ ಅಖೀಲ ಭಾರತ ದಾಸ ಸಾಹಿತ್ಯ ಪರಿಷತ್ತು ಪುರಂದರ
ದಾಸರ ಆರಾಧನೆ ನಿಮಿತ್ತ ಹಮ್ಮಿಕೊಂಡಿದ್ದ “ಪುರಂದರದಾಸರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಸಾಹಿತ್ಯದಲ್ಲಿ ವಚನ ಮತ್ತು ದಾಸ ಸಾಹಿತ್ಯಗಳು ಅಗ್ರಮಾನ್ಯ ಸಾಹಿತ್ಯವಾಗಿ ಹೆಸರು ಪಡೆದಿವೆ. ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ರೂಪಿಸುವಲ್ಲಿ, ಸಮೃದ್ಧಿಗೊಳಿಸುವಲ್ಲಿ ದಾಸರ ಕೊಡಗೆ ಅತ್ಯಂತ ಮಹತ್ವಪೂರ್ಣವಾದುದು ಎಂದರು.

ಶ್ರೀಮಠದ ಅರ್ಚಕ ಮಿಲಿಂದಾಚಾರ್ಯರು ಉಪನ್ಯಾಸ ನೀಡಿ, ಸಮಾಜದ ಜನರಲ್ಲಿ ಅಂತಃ ಕರಣ ಶುದ್ಧಿಗೆ ದಾರಿಮಾಡಿಕೊಡುವ, ಕಾಮ ಕ್ರೋಧಾದಿಗಳ ಬಗ್ಗೆ ಜಾಗೃತಿ ಮೂಡಿಸುವ, ಪರನಿಂದೆ, ಹಿಂಸೆ, ವಂಚನೆಗಳಿಂದ ಮನಸ್ಸನ್ನು ಮುಕ್ತಮಾಡುವ ಒಂದು ಚಳವಳಿಯನ್ನು ಪುರಂದರದಾಸರು ಪ್ರಾರಂಭಿಸಿದರು. ಅವರು ಪರಿಶುದ್ಧ, ಪಾವನ, ಪವಿತ್ರವಾದ ಜೀವನ ನಡೆಸಲು ಜನತೆಗೆ ಕರೆ ಕೊಟ್ಟರು. ವಿಚಾರವಿಲ್ಲದೆ ಪರರ ದೂಷಿಸುವವರಿಗೆ ಕೀರ್ತನೆಗಳಿಂದ ಬುದ್ಧಿ ಹೇಳಿದ್ದಾರೆ ಎಂದು ಹೇಳಿದರು.

ಉಪನ್ಯಾಸಕಿ ಡಾ| ಶೀಲಾ ಬಿರಾದಾರ ಮಾತನಾಡಿ, ಶರಣರು, ದಾಸರು, ಸಂತರು, ಸೂಫಿಗಳು, ನಾಥರು, ಸಮಾಜ ಸುಧಾರಕರು, ಮನಸ್ಸು-ಬುದ್ಧಿಯನ್ನೂ ಶುದ್ಧಿ ಮಾಡುವ, ಹೃದಯ ಸಂಸ್ಕರಣ ಮಾಡುವ, ಉತ್ತಮ ಸಂಸ್ಕಾರ ನೀಡುವ ಸಾಹಿತ್ಯವನ್ನು ನೀಡಿದ್ದಾರೆ ಎಂದರು. 

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್‌ ಪವಾರ ಅವರು ಪುರಂದರ ವಿಠ್ಠಲ ಭಜನಾ ಮಂಡಳಿಗೆ ಚಾಲನೆ
ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಪಾಟೀಲ ಮಾತನಾಡಿ, ದಾಸರು ಸಮಾಜಕ್ಕೆ ಅತ್ಯಮೂಲ್ಯವಾದ ಕಾಣಿಕೆ ನೀಡಿದ್ದಾರೆ.

Advertisement

ಅವರ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಹೆಚ್ಚು ಪ್ರಮಾಣದಲ್ಲಿ ಆಗಬೇಕು ಎಂದರು. ಸಪ್ತಗಿರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗೋಪಾಲ ತಾಂದಳೆ ಹಾಗೂ ನರಸಿಂಹಸ್ವಾಮಿ ದೇವಸ್ಥಾನದ ಅಧ್ಯಕ್ಷ ಕಲ್ಲಪ್ಪ  ನಕನಳ್ಳಿಕರ್‌
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪರಿಷತ್ತಿನ ಅಧ್ಯಕ್ಷ ರವೀಂದ್ರ ಲಂಜವಾಡಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಂದಾಚಾರ್ಯರು
ಹಾಗೂ ಮಹೇಶಕುಮಾರ ಮೈಲೂರಕರ್‌ ಕೀರ್ತನೆ, ಗಾಯನ ನಡೆಸಿಕೊಟ್ಟರು. ಮಹೇಬೂಬ ಉಸ್ತಾದ ನಿರೂಪಿಸಿದರು. ಆತ್ಮಾನಂದ ಬಂಬಳಗಿ ಸ್ವಾಗತಿಸಿದರು. ರಾಮಶೆಟ್ಟಿ ಐನೋಳ್ಳೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next