Advertisement

ನೆಮ್ಮದಿ ಜೀವನಕ್ಕೆ ವಚನ ಸಹಕಾರಿ: ಮಲ್ಲೇಶ

06:13 AM Jan 17, 2019 | |

ಚಿತ್ತಾಪುರ: ನೆಮ್ಮದಿ ಜೀವನಕ್ಕೆ ವಚನಗಳು ಸಹಕಾರಿಯಾಗಿವೆ ಎಂದು ತಹಶೀಲ್ದಾರ ಮಲ್ಲೇಶ ತಂಗಾ ಹೇಳಿದರು. ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಮಾಜದಲ್ಲಿನ ಜಾತಿ ವ್ಯವಸ್ಥೆ, ಬಾಲ್ಯ ವಿವಾಹ, ಸ್ತ್ರೀ ಶೋಷಣೆಯಂತ ಹೀನಾಯ ಅಪರಾಧಗಳು, ಆಯಾ ಕಾಲಘಟ್ಟದಲ್ಲಿ ಮಾಡಿದ ಸಮಾಜ ಸುಧಾರಣೆ, ಅವರು ನಡೆದು ಬಂದ ದಾರಿ ಕುರಿತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಲುವಾಗಿ ಸರ್ಕಾರವು ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ನಾವು ಮಹಾನ್‌ ಪುರುಷರ ಆದರ್ಶಗಳನ್ನು ಅಳವಡಿಸಿಕೊಳ್ಳುವಲ್ಲಿ ಎಡವುತ್ತಿದ್ದೇವೆ ಎಂದರು.

ಉಪನ್ಯಾಸಕ ನರಸಪ್ಪ ಚಿನ್ನಾಕಟ್ಟಿ ಉಪನ್ಯಾಸ ನೀಡಿ, ಸಿದ್ಧರಾಮ ಶರಣರು ಕಾಯಕದ ಜೊತೆಗೆ ವಚನಗಳನ್ನು ರಚಿಸುವುದರ ಮೂಲಕ ಬಸವಕಲ್ಯಾಣ ಶೂನ್ಯ ಪೀಠದ ಮೂರನೇ ಅಧ್ಯಕ್ಷರಾಗಿ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳನ್ನು ನಾಡಿನ ಪ್ರತಿಯೊಬ್ಬರು ಅಧ್ಯಯನ ಮಾಡುವಂತಾಗಬೇಕು ಎಂದರು. ಈರಣ್ಣ ರಾವೂರಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆ‌ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಪಿಎಸ್‌ಐ ನಟರಾಜ ಲಾಡೆ, ಸಮಾಜದ ಅಧ್ಯಕ್ಷ ಮಲ್ಲಪ್ಪ ಚೌಧರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ತಿಮ್ಮಯ್ಯ ಪವಾರ, ತಿಮ್ಮಯ್ಯ ಕುರಕುಂಟಾ, ಮರಗಪ್ಪ ಬಸವನಖಣಿ, ಪುರಸಭೆ ಸದಸ್ಯ ಸಂತೊಷ್‌ ಚೌದರಿ, ಮುಖಂಡರಾದ ಭೀಮರಾಯ ಕರದಾಳ, ಸಿದ್ಧು ಚೌದರಿ, ರಾಮು ಹರವಾಳ, ಸಂಜಯ ಕಾಶಿ ಹಾಗೂ ಇತರರು ಇದ್ದರು. ಕಂದಾಯ ನಿರೀಕ್ಷಕ ದಶರಥ ಸ್ವಾಗತಿಸಿದರು, ಸಂತೊಷ ಶಿರನಾಳ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next