Advertisement
ಸೀರಂ ಇನ್‌ಸ್ಟಿಟ್ಯೂಟ್‌ನ ಕೊವಿಶೀಲ್ಡ್ ಲಸಿಕೆಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ-ಆಸ್ಟ್ರಾಜೆನೆಕಾ ಸಂಶೋಧನ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಸಾವಿರಾರು ಜನರ ಮೇಲೆ ಈ ಲಸಿಕೆಯ ಪ್ರಯೋಗಗಳನ್ನೂ ಮಾಡಿದೆ. ಕೊವಿಶೀಲ್ಡ್ ಇದೆಯಲ್ಲ, ಇದು “ಅಡಿನೋ ವೈರಸ್ ವೆಕ್ಟರ್ ಲಸಿಕೆ’. ಈ ರೀತಿಯ ಲಸಿಕೆ ಪ್ರಯೋಗವನ್ನು ಕೇವಲ ಆಕ್ಸ್‌ಫರ್ಡ್ ಅಷ್ಟೇ ಅಲ್ಲದೇ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಅಭಿವೃದ್ಧಿಗೂ ಬಳಸಲಾಗಿದೆ
1. ಮೊದಲ ಹಂತವಾಗಿ ವಿಜ್ಞಾನಿಗಳು ಚಿಂಪಾಂಜಿಗಳಲ್ಲಿ ಸೋಂಕು ಉಂಟುಮಾಡುವ ವೈರಸ್(ಅಡಿನೋವೈರಸ್) ಅನ್ನು ಹೊರತೆಗೆಯುತ್ತಾರೆ. ಅನಂತರ ಅದನ್ನು ಮಾನವನಿಗೆ ತೊಂದರೆಯುಂಟುಮಾಡದಂತೆ ಪರಿವರ್ತಿಸಲಾಗುತ್ತದೆ. 2. ಕೊರೊನಾ ವೈರಸ್‌ನ ಮೇಲ್ಮೆ„ಯಲ್ಲಿ ಮುಳ್ಳಿನ ರೀತಿಯ ಆಕೃತಿ (ಸ್ಪೈಕ್ ಪ್ರೊಟೀನುಗಳು) ಇರುವ ಚಿತ್ರವನ್ನು ನೀವು ನೋಡಿರುತ್ತೀರಿ. ಕೊರೊನಾದಲ್ಲಿ ಈ ರೀತಿಯ ಸ್ಪೈಕ್ ಪ್ರೋಟೀನುಗಳನ್ನು ಸೃಷ್ಟಿಸುವ ಜೀನೋಮುಗಳನ್ನು ಪ್ರತ್ಯೇಕಿಸಿ ಅದನ್ನು ಚಿಂಪಾಂಜಿಯಿಂದ ಈಗಾಗಲೇ ಸಂಗ್ರಹಿಸಿ ನಿಷ್ಕ್ರಿಯಗೊಳಿಸಲಾದ ಅಡಿನೋ ವೈರಸ್‌ಗೆ ಸೇರಿಸಲಾಗುತ್ತದೆ. ಇದರಿಂದಾಗಿ ಅಡಿನೋವೈರಸ್‌ನ ಮೇಲ್ಮೆ„ಯಲ್ಲಿ ಕೊರೊನಾ ವೈರಸ್‌ಗೆ ಇರುವಂಥದ್ದೇ ಮುಳ್ಳಿನ ಆಕೃತಿಗಳು ಸೃಷ್ಟಿಯಾಗುತ್ತವೆ. ಆದರೆ ಇದು ಕೊರೊನಾದಂತೆ ಮನುಷ್ಯನಿಗೆ ಹಾನಿ ಮಾಡುವುದಿಲ್ಲ. ಇದೇ ಕೊವಿಶೀಲ್ಡ್ ಲಸಿಕೆ.
Related Articles
Advertisement
ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಸೋಂಕಿತರೊಬ್ಬರಿಂದ ಕೊರೊನಾ ವೈರಸ್‌ಗಳನ್ನು ಹೊರತೆಗೆದ ಎನ್‌ಐವಿ, ಲಸಿಕೆ ಅಭಿವೃದ್ಧಿಗಾಗಿ ಆ ಮಾದರಿಯನ್ನು ಭಾರತ್ ಬಯೋಟೆಕ್‌ಗೆ ಕೊಟ್ಟಿತ್ತು. ಭಾರತ್ ಬಯೋಟೆಕ್ ಹೇಗೆ ಲಸಿಕೆಯನ್ನು ಅಭಿವೃದ್ಧಿ ಮಾಡಿತು? ಇನ್‌ಆ್ಯಕ್ಟಿವೇಟೆಡ್ ವೈರಸ್
1. ಮೊದಲ ಹಂತವಾಗಿ ಅದು ಎನ್‌ಐವಿಯಿಂದ ಸಂಗ್ರಹಿಸಿದ ಕೊರೊನಾ ವೈರಸ್ ಅನ್ನು ಪ್ರಯೋಗಾಲಯದಲ್ಲೇ ಕೃತಕವಾಗಿ ಬೆಳೆಸಿತು. ಅನಂತರ ರಾಸಾಯನಿಕಗಳು, ರೇಡಿಯೇಶನ್‌ಗಳು ಅಥವಾ ವಿವಿಧ ತಾಪಮಾನದ ಮೂಲಕ ಕೋವಿಡ್‌ನ ರೋಗಕಾರಕ ಶಕ್ತಿಯನ್ನು ಸಂಪೂರ್ಣ ತಗ್ಗಿಸಲಾಯಿತು. ಅಂದರೆ ಆ ವೈರಸ್‌ಗೆ ರೋಗ ಉಂಟುಮಾಡುವ ಸಾಮರ್ಥ್ಯ ಹಾಗೂ ದ್ವಿಗುಣಗೊಳ್ಳುವ ಸಾಮರ್ಥ್ಯ ಹೋಗಿಬಿಡುತ್ತದೆ. ಇದೇ ಕೊವ್ಯಾಕ್ಸಿನ್ ಲಸಿಕೆ . 2. ಕೋವಿಡ್ ರೋಗಕಾರಕ ಶಕ್ತಿ ಕಳೆದುಕೊಂಡು ನಿಷ್ಕ್ರಿಯಗೊಂಡಿದ್ದರೂ ಅದರ ದೇಹರಚನೆಯಲ್ಲಿ ಬದಲಾವಣೆಯೇನೂ ಆಗಿರುವುದಿಲ್ಲ. ಲಸಿಕೆಯ ರೂಪದಲ್ಲಿ ಈ ನಿಷ್ಕ್ರಿಯ ವೈರಸ್‌ಗಳನ್ನು ಮಾನವನ ದೇಹಕ್ಕೆ ನುಸುಳಿಸಲಾಗುತ್ತದೆ. ಜತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುವಂಥ ಅಂಶಗಳೂ ಈ ಲಸಿಕೆಯಲ್ಲಿ ಇರುತ್ತವೆ. ಕೂಡಲೇ ನಮ್ಮ ರೋಗ ನಿರೋಧಕ ವ್ಯವಸ್ಥೆಯು ಈ ನಿಷ್ಕ್ರಿಯ ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ. ಅಲ್ಲದೇ ಹೋರಾಡುವ ಮುಂದೆ ಶತ್ರುವಿನ ಸಾಮರ್ಥ್ಯವನ್ನು ಸರಿಯಾಗಿ ನೆನಪಿಟ್ಟುಕೊಳ್ಳುತ್ತದೆ. ಮುಂದೆ ರೋಗಕಾರಕ ಕೊರೊನಾ ದೇಹ ಪ್ರವೇಶಿಸಿತು ಎಂದಿಟ್ಟುಕೊಳ್ಳಿ ಆಗ ಅದು ಕೂಡಲೇ ತನ್ನ ನೆನಪಿನ ಶಕ್ತಿಯ ಆಧಾರದಲ್ಲಿ ಅಪಾರ ಪ್ರಮಾಣದಲ್ಲಿ ನಿರ್ದಿಷ್ಟ ರೂಪದ ಪ್ರತಿಕಾಯಗಳನ್ನು ಬಿಡುಗಡೆ ಮಾಡಿ, ಅದನ್ನು ನಾಶ ಮಾಡುತ್ತದೆ.