Advertisement

ಲಸಿಕೆ ಕೊರತೆ,ಕಾದು ಸುಸ್ತಾಗಿ ವಾಪಸ್ಸಾದ ಜನ

05:57 PM Jun 26, 2021 | Team Udayavani |

ಹುಣಸೂರು: ತಾಲೂಕಿನಲ್ಲಿ ಕೊರೊನಾ ಸೋಂಕುನಿಯಂತ್ರಿಸಲು ಕೋವಿಡ್‌ ಪರೀಕ್ಷೆ ಹೆಚ್ಚಿಸಲಾಗಿದ್ದು, ಜೊತೆಗೆಲಸಿಕೆ ಪಡೆಯಲು ಟೆಸ್ಟ್‌ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಒಂದೆಡೆ ಸಾರ್ವಜನಿಕರು ಕೊರೊನಾ ಪರೀಕ್ಷೆಗೆ ಮುಂದಾಗಿದ್ದರೆ, ಮತ್ತೂಂದೆಡೆ ಲಸಿಕೆ ಕೊರತೆ ಎದುರಾಗಿದೆ.

Advertisement

ಕೊರೊನಾ ಸರಪಳಿ ತುಂಡರಿಸಲು ಪರೀಕ್ಷೆ ಹೆಚ್ಚಿಸಲುಮುಂದಾಗಿರುವ ಜಿಲ್ಲಾಡಳಿತವು ಆರೋಗ್ಯ ಇಲಾಖೆ ಮೂಲಕತಾಲೂಕಿನ ರತ್ನಪುರಿ, ಬಿಳಿಕೆರೆ, ಗಾವಡಗೆರೆ, ಹುಣಸೂರುನಗರದ ಸಾರ್ವಜನಿಕ ಆಸ್ಪತ್ರೆ, ಅಂಬೇಡ್ಕರ್‌ ಭವನ ಹಾಗೂತಾಲೂಕುಕಚೇರಿಯಲ್ಲೂಕೊರೊನಾ ತಪಾಸಣೆ ನಡೆಸುತ್ತಿದೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಲಸಿಕೆ ಪಡೆಯಲುಬರುವವರಿಗೆ ಹಾಗೂ ವಿವಿಧ ಕೆಲಸಗಳಿಗಾಗಿ ತಾಲೂಕುಕಚೇರಿಗೆ ಎಡತಾಕುವ ಗ್ರಾಮೀಣ ಭಾಗದ ಜನರನ್ನುಕಡ್ಡಾಯವಾಗಿ ತಪಾಸಣೆಗೊಳಪಡಿಸಲಾಗುತ್ತಿದೆ.ಬಿಳಿಕೆರೆಯಲ್ಲಿ ಉಪ ತಹಶೀಲ್ದಾರ್‌ ಮಹದೇವನಾಯಕ,ವೈದ್ಯ ಡಾ.ಉಮೇಶ್‌, ರತ್ನಪುರಿಯಲ್ಲಿ ಡಾ.ಶ್ರೀನಿವಾಸ್‌,ಸಿಬ್ಬಂದಿ ರಂಜಿತಾ, ಕುಮಾರ್‌ ನೇತƒತ್ವದಲ್ಲಿ ಆರೋಗ್ಯಸಿಬ್ಬಂದಿಗಳು ಕೊರೊನಾ ಟೆಸ್ಟ್‌ ನಡೆಸುತ್ತಿದ್ದು, ಜನರು ಸರತಿಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.

ಇದೀಗ ಕೃಷಿ ಚಟುವಟಿಕೆಗಾಗಿ ವಿವಿಧ ದಾಖಲಾತಿಪಡೆಯಲು ನೋಂದಣಾಧಿಕಾರಿ (ಸಬ್‌ರಿಜಿಸ್ಟ್ರಾರ್‌) ಕಚೇರಿಗೆಹೆಚ್ಚಿನ ಜನ ಬರುತ್ತಿರುವುದರಿಂದ ಅಂಬೇಡ್ಕರ್‌ ಭವನ ಹಾಗೂತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಬಸವರಾಜು,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ್‌ ನೇತೃತ್ವದಲ್ಲಿತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತದವತಿಯಿಂದ ತಾಲೂಕಿನ ವಿವಿಧೆಡೆಗಳಲ್ಲಿ 25 ಮಂದಿ ಗೃಹಕರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ.

ನಗರದ ಅಂಬೇಡ್ಕರ್‌ ಭವನ, ತಾಲೂಕು ಕಚೇರಿ, ಬಿಳಿಕೆರೆ,ರತ್ನಪುರಿ, ಹನಗೋಡು, ಗಾವಡಗೆರೆಯಲ್ಲಿ ಕೊರೊನಾ ಟೆಸ್ಟ್‌ಭರದಿಂದಲೇ ನಡೆಯುತ್ತಿದೆ.ಲಸಿಕೆ ಕೊರತೆ ಹುಣಸೂರಿಗೆ ಸೀಮಿತ: ಗುರುವಾರದಿಂದಲೇಲಸಿಕೆ ಕೊರತೆಯಿಂದಾಗಿ ತಾಲೂಕಿನಲ್ಲಿ 18 ವರ್ಷಕ್ಕೆಮೇಲ್ಪಟ್ಟವರಿಗೆ ಪಿಎಚ್‌ಸಿಗಳಲ್ಲಿ ನೀಡುತ್ತಿದ್ದ ಲಸಿಕೆಯನ್ನು ಸ್ಥಗಿತಗೊಳಿಸಿ ನಗರದ ಅಂಬೇಡ್ಕರ್‌ ಭವನದಲ್ಲಿ ಮಾತ್ರ ನೀಡಲಾಗುತ್ತಿತ್ತು,

Advertisement

ಇದೀಗ ಶುಕ್ರವಾರದಂದು ಲಸಿಕೆಪಡೆಯಲು ಕೊರೊನಾ ಟೆಸ್ಟ್‌ ಮಾಡಿಸಿಕೊಂಡು ಸರತಿಸಾಲಿನಲ್ಲಿ ನಿಂತಿದ್ದರೂ ಮಧ್ಯಾಹ್ನದ ವೇಳೆಗೆ ಲಸಿಕೆ ಮುಗಿದಿದ್ದು,ಇದರಿಂದಾಗಿ ಸರತಿಯಲ್ಲಿ ನಿಂತು ಕಾದು ವಾಪಸ್ಸಾದಘಟನೆಯೂ ನಡೆಯಿತು.ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್‌ ಬಸವರಾಜು,ಲಸಿಕೆಗಾಗಿ ಬೇಡಿಕೆ ಸಲ್ಲಿಸಲಾಗಿದೆ. ತಮ್ಮ ಸರದಿ ಬಂದ ವೇಳೆಬಂದು ಲಸಿಕೆ ಪಡೆಯಿರಿ, ಆತಂಕ ಬೇಡ ಎಲ್ಲರಿಗೂ ಲಸಿಕೆನೀಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next