ಹೊಸದಿಲ್ಲಿ: ಕೆಲವೇ ವಾರಗಳಲ್ಲಿ ಕೊರೊನಾಗೆ ಲಸಿಕೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆಯೇ, ಕೇಂದ್ರ ಸರಕಾರ 1.6 ಬಿಲಿಯ ಡೋಸ್‌ಗಳ ಖರೀದಿಗೆ ಮುಂದಾಗಿದೆ. ಈ ಮೂಲಕ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸುವ ರಾಷ್ಟ್ರ ಭಾರತವಾಗಲಿದೆ. ಭಾರತದ ಬಳಿಕ ಐರೋಪ್ಯ ಒಕ್ಕೂಟ 1.58 ಬಿಲಿಯ ಡೋಸ್, ಅಮೆರಿಕ ಕೇವಲ 1 ಬಿಲಿಯ ಡೋಸ್‌ಗಳಷ್ಟು ಮಾತ್ರ ಖರೀದಿಸಿದೆ.
ವಿಜ್ಞಾನಿಗಳು ಮತ್ತು ಆರೋಗ್ಯ ಕ್ಷೇತ್ರದ ತಜ್ಞರ ಪ್ರಕಾರ 800 ಮಿಲಿಯ ಜನರಿಗೆ ಲಸಿಕೆ ನೀಡಲು ಇದರಿಂದ ಸಾಧ್ಯವಾಗಲಿದೆ. ಆಕ್ಸ್‌ಫರ್ಡ್ ವಿವಿ- ಆಸ್ಟ್ರಾಜೆನೆಕಾ ದಿಂದ 500 ಮಿಲಿಯ ಡೋಸ್, ಅಮೆರಿಕದ ನೊವಾಕ್ಸ್ ನಿಂದ 1 ಬಿಲಿಯ, ರಷ್ಯಾ ಅಭಿವೃದ್ಧಿ ಪಡಿಸಿದ “ಸ್ಪುಟ್ನಿಕ್-5′ 100 ಮಿಲಿಯ ಡೋಸ್ ಪಡೆದುಕೊಳ್ಳಲಿದೆ.
ಮಧ್ಯಪ್ರದೇಶದಲ್ಲಿ ಪರೀಕ್ಷೆ ಇಲ್ಲ: ಮಧ್ಯಪ್ರದೇಶದಲ್ಲಿ 1 ರಿಂದ 8ನೇ ತರಗತಿ ವರೆಗೆ ಮಾ.31ರ ವರೆಗೆ ಶಾಲೆ ನಡೆಸಲಾಗುವು ದಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳನ್ನು ನಡೆಸಲಾಗು ವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಲಾಗಿರುವ ಅಭ್ಯಾಸದ ಕೆಲಸಗಳ ಸಾಧನೆಗಳನ್ನು ನೋಡಿಕೊಂಡು ಮೌಲ್ಯಮಾಪನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 10 ಮತ್ತು 12ನೇ ತರಗತಿಗಳಿಗೆ ಸಾಮಾಜಿಕ ಅಂತರವನ್ನು ಇರಿಸಿಕೊಂಡು ಶೀಘ್ರವೇ ಶಾಲೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
24 ಗಂಟೆಗಳಲ್ಲಿ ಸೋಂಕು ತಡೆ ಸಾಧ್ಯ?: 24 ಗಂಟೆಗಳಲ್ಲಿ ಸೋಂಕು ಹರಡುವುದನ್ನು ತಡೆಯುವ ಔಷಧ ಕಂಡುಹಿಡಿದಿರುವ ಬಗ್ಗೆ “ನೇಚರ್ ಜರ್ನಲ್’ನಲ್ಲಿ ಲೇಖನ ಪ್ರಕಟವಾಗಿದೆ. ಮೋಲು°ಪಿರಾವಿರ್ (Molnupiravir) ಎಂದ ಔಷಧದಿಂದ ಇದು ಸಾಧ್ಯವಾಗಿದೆ ಎಂದು ಜಾರ್ಜಿಯ ಸ್ಟೇಟ್ ವಿವಿಯ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ.
ಹರಿಯಾಣ ಸಚಿವ ವಿಜ್‌ಗೆ ಸೋಂಕು: ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಹರಿಯಾಣ ಸಚಿವ ಅನಿಲ್ ವಿಜ್‌ಗೆ ಸೋಂಕು ದೃಢಪಟ್ಟಿದೆ. 3 ಹಂತದ ಪ್ರಯೋಗದ ಪೈಕಿ ಮೊದಲ ಹಂತದ ಡೋಸ್ ಮಾತ್ರ ಅವರಿಗೆ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತ್ ಬಯೋಟೆಕ್ 2ನೇ ಡೋಸ್ ನೀಡಿ 14 ದಿನಗಳ ಬಳಿಕವಷ್ಟೇ ಅದರ ಪರಿಣಾಮ ಬೀರಲಿದೆ ಎಂದಿದೆ.