Advertisement

ಭೋಪಾಲ್‌ : ಕೋವಿಡ್ ಲಸಿಕೆ ಬೇಡವೆಂದು ಮರವೇರಿದ ವ್ಯಕ್ತಿ!

08:24 PM Jun 26, 2021 | Team Udayavani |

ಭೋಪಾಲ್‌: ಕೊರೊನಾದಿಂದ ಪಾರಾಗಲು ಜನರು ಚಿತ್ರವಿಚಿತ್ರವಾದ ಉಪಾಯಗಳನ್ನು ಮಾಡಿದ್ದಾರೆ. ಆದರೆ ಕೊರೊನಾ ಲಸಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನ್ನು ಕೇಳಿದ್ದೀರಾ? ಅಂತಹದ್ದೊಂದು ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಪಟಾನ್‌ಕಾಲನ್‌ ಹಳ್ಳಿಯಲ್ಲಿ ನಡೆದಿದೆ. ಅಲ್ಲಿನ ಆರೋಗ್ಯ ಕಾರ್ಯಕರ್ತರು ಹಳ್ಳಿಯಲ್ಲಿ ಲಸಿಕೆ ಹಾಕಲು ಆರಂಭಿಸಿದ್ದರು.

Advertisement

ಕನ್ವರ್‌ಲಾಲ್‌ ಕೂಡಾ ಪತ್ನಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಯಾವಾಗ ಅದು ಕೊರೊನಾ ಲಸಿಕೆ ಎಂದು ಗೊತ್ತಾಯಿತೋ, ಆತ ಹೆದರಿ ಪತ್ನಿಯ ಆಧಾರ್‌ ಕಾರ್ಡನ್ನೂ ಕಿತ್ತುಕೊಂಡು ಮರವೇರಿ ಕುಳಿತರು! ಇಡೀ ದಿನ ಆತ ಮರದಲ್ಲೇ ಕುಳಿತ್ತಿದ್ದರು.

ಕಡೆಗೆ ವೈದ್ಯಾಧಿಕಾರಿಗಳು ಅವರಿಗೆ ವಿಷಯ ಅರ್ಥ ಮಾಡಿಸಿದ ನಂತರ, ಮುಂದಿನ ದಿನಗಳಲ್ಲಿ ಲಸಿಕೆ ಪಡೆಯಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ :ಜಪಾನ್‌ನಲ್ಲಿನ್ನು ವಾರಕ್ಕೆ 5 ದಿನ ಕೆಲಸ! ವಿತ್ತೀಯ ಸುಧಾರಣೆಗಾಗಿ ಮಾರ್ಗಸೂಚಿ ಪ್ರಕಟ

Advertisement

Udayavani is now on Telegram. Click here to join our channel and stay updated with the latest news.

Next