ದೇವನಹಳ್ಳಿ: ಕೋವಿಡ್-19 ಲಸಿಕೆಶೀಘ್ರ ಲಭ್ಯವಾಗಲಿದ್ದು, ಪ್ರಥಮಆದ್ಯತೆ ಮೇರೆಗೆ ವೈದ್ಯಕೀಯ ಸಿಬ್ಬಂದಿಗೆಲಸಿಕೆ ನೀಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕೋವಿಡ್ -19 ಲಸಿಕೆ ಪರಿಚಯ ಕುರಿತಂತೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆದ್ಯತೆ ಮೇರೆಗೆ ಲಸಿಕೆ: ಹಂತ ಹಂತವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆಕೋವಿಡ್ ಲಸಿಕನೀಡಲಾಗುವುದು. ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯ ಮೊದಲ ಆದ್ಯತೆವೈದ್ಯರಿಗೆ ನೀಡುತ್ತಿದ್ದು ಅದರ ಪ್ರಕಾರ ಲಸಿಕೆ ನೀಡಬೇಕಿದೆ ಎಂದರು.
ಕೋವಿಡ್ ಲಸಿಕೆ ಕುರಿತು ಸಂಪೂರ್ಣವಾದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವೈದ್ಯರಿಗೆ, ಸಿಬ್ಬಂ ದಿಗೆ ತರಬೇತಿ ಅವಶ್ಯಕತೆ ಇರುವು ದರಿಂದ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ನೀಡಲಾಗುವ ಪೂರ್ಣಮಾಹಿತಿಯನ್ನುಸರಿಯಾಗಿಅರ್ಥೈಸಿಕೊಂಡುಸಾರ್ವಜ ನಿಕರಿಗೆ ತಲುಪಿಸಲು ತಿಳಿಸಿದರು.
ಸಿದ್ಧತೆ ಕೈಗೊಳ್ಳಿ: ಡಬ್ಲ್ಯೂಎಚ್ ಪ್ರತಿನಿಧಿಯಾದ ಸರ್ವೇಲೇನ್ಸ್ ಮೆಡಿಕಲ್ ಅಧಿಕಾರಿ ನಾಗರಾಜು ಮಾತ ನಾಡಿ, ನ್ಯಾಷನಲ್ ಎಕ್ಸ್‌ಫರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೇಶನ್ ಮಾರ್ಗದರ್ಶನದಡಿ ನಾವು ಕೋವಿಡ್ ಲಸಿಕೆ ನೀಡಬೇಕಾಗುತ್ತದೆ. ಮೊದಲ ಆದ್ಯತೆ ವೈದ್ಯರಿಗೆ, ನಂತರದಲ್ಲಿಪೊಲೀಸ್‌ಇಲಾಖೆ,ಆಮ್ ಪೋರ್ಸ್, ಹೋಂಗಾರ್ಡ್ಸ್, ಮುನ್ಸಿ ಪಾಲ್ ವರ್ಕರ್ಸ್, 50 ಮೇಲ್ಪಟ್ಟವರಿಗೆ ನೀಡಬೇಕೆಂದು ನೇಗ್‌ವ್ಯಾಕ್ ಸೂಚಿಸಿದೆ ಎಂದು ಮಾಹಿತಿ ನೀಡಿದರು.
ಲಸಿಕೆ ನೀಡಲು ಸೂಕ್ತವಾದ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು, ಆಯಾ ಊರಿನಅಂಗನವಾಡಿಕೇಂದ್ರ,ಸರ್ಕಾರಿಶಾಲೆ, ಮುನ್ಸಿಪಾಲಿಟಿ, ಸಮುದಾ ಯ ಭವನ ಆಯ್ಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ನೀಡಬೇಕು. ಆಯ್ಕೆ ಮಾಡಿ ಕೊಂಡಿರುವ ಸ್ಥಳಗಳಲ್ಲಿ 3ಕೊಠಡಿಗಳಿರಬೇಕು. ಮೊದಲನೇ ಕೊಠಡಿಯಲ್ಲಿ ಲಸಿಕೆಪಡೆಯುವವರು ಕುಳಿತುಕೊಳ್ಳಲು ವ್ಯವಸ್ಥೆ, 2ನೇ ಕೊಠಡಿ ವ್ಯಾಕ್ಸಿನೇಷನ್ ಕೊಠಡಿಯಾಗಿದ್ದು, ಲಸಿಕೆ ನೀಡಲುಬೇಕಾಗುವ ಎಲ್ಲಾ ಸಿದ್ಧತೆ ಮಾಡಿಕೊಂಡಿರಬೇಕು. 3ನೇ ಕೊಠಡಿ ವೀಕ್ಷಣಾ ಕೊಠಡಿಯಾಗಿದ್ದು, ಲಸಿಕೆ ಪಡೆದು ಕೊಂಡವರು ಕನಿಷ್ಠ 30 ನಿಮಿಷ ವಿಶ್ರಾಂತಿ ಪಡೆದು ಹೋಗಲು ಅವಕಾಶ ಕಲ್ಪಿಸಿರಬೇಕು ಎಂದರು.
ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಶರ್ಮಿಳಾ ಹೆಡೆ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಾಜು, ತಾಲೂಕು ಆರೋಗ್ಯಾಧಿಕಾರಿಗಳು, ಸಹಾಯಕರು ಇದ್ದರು.