ನೆಲಮಂಗಲ: ಜಾನುವಾರುಗಳ ಆರೋಗ್ಯಕ್ಕೆ ಕುತ್ತು ತರುವ ಕಾಲುಬಾಯಿ ರೋಗದ ನಿಯಂತ್ರಣಕ್ಕೆ ಎರಡನೇ ಹಂತದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದ್ದು ತಾಲೂಕಿನ 44 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ನಾಗರಾಜು ಹೇಳಿದರು.
ನಗರದ ಪಶುಸಂಗೋಪನಾ ಇಲಾಖೆಯ ಆವರಣದಲ್ಲಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾಲುಬಾಯಿ ರೋಗ ನಿಯಂತ್ರಣದ ಲಸಿಕಾ ಅಭಿಯಾ ನಕ್ಕೆ ಚಾಲನೆ ನೀಡಿ ಮಾತನಾಡಿದರು.
ಎತ್ತು, ಹೋರಿ, ಹಸು, ಎಮ್ಮೆ ಹಾಗೂ ಹಂದಿಗಳು ಸೇರಿ ಜಾನುವಾರುಗಳಿಗೆ ಅತಿ ಯಾದ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸುರಿಸುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಸೇರಿದಂತೆವಿವಿಧ ರೋಗ ಲಕ್ಷಣಗಳು ಕಂಡುಬಂದರೆ ಕಾಲುಬಾಯಿ ರೋಗ ಬಂದಿರುವುದು ಖಾತರಿ ಆಗುತ್ತದೆ. ಆದ್ದರಿಂದ ಮುಂಜಾಗ್ರತೆ ವಹಿಸಿ ಆರು ತಿಂಗಳಿಗೆ ನೀಡುವ ಕಾಲುಬಾಯಿ ಲಸಿಕೆಯನ್ನು ಕಡ್ಡಾಯವಾಗಿ ಜಾನುವಾರುಗಳಿಗೆ ಕೊಡಿಸಬೇಕು ಎಂದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯ ದಲ್ಲಿ 2019ರಿಂದ ಕಾಲುಬಾಯಿ ಲಸಿಕೆ ಅಭಿಯಾನ ಆರಂಭವಾಗಿದ್ದು ರೈತರು ತಪ್ಪದೆ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು.
ರೈತರ ಸಹಕಾರ ಮುಖ್ಯ: ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಮನುಷ್ಯರ ಜತೆ ಜಾನುವಾರುಗಳ ಆರೋಗ್ಯದ ಮೇಲೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿದೆ. ರೋಗಗ್ರಸ್ಥ ಪ್ರಾಣಿಗಳ ನೇರಸಂಪರ್ಕದಿಂದ, ಕಲುಷಿತ ಮೇವು, ನೀರಿನಿಂದ , ಗಾಳಿಯ ಮೂಲಕ ಹಾಗೂ ದನಗಳ ಸಂತೆ ಮತ್ತು ಜಾತ್ರೆಗಳಲ್ಲಿ ಈ ರೋಗಹರಡುವುದು ಹೆಚ್ಚಾಗಿದ್ದು ತಡೆಗಟ್ಟಬೇಕಾದರೇ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕಾಗಿದೆ. ರೈತರು ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದರು.
44 ಸಾವಿರ ಜಾನುವಾರುಗಳಿಗೆ ಲಸಿಕೆ: ತಾಲೂಕಿನ 1191 ಎಮ್ಮೆಗಳು ಸೇರಿದಂತೆ 43,480 ಜಾನುವಾರುಗಳಿಗೆ ಲಸಿಕೆಯನ್ನು 37 ವೈದ್ಯ ಸಿಬ್ಬಂದಿ ತಂಡ 509ಪ್ರದೇಶಗಳಲ್ಲಿ ಲಸಿಕೆಯನ್ನು ಹಾಕಲಿದ್ದುಲಸಿಕೆಯನ್ನು ನೆಲಮಂಗಲ ನಗರ, ದಾಬಸ್‌ಪೇಟೆ, ದೊಡ್ಡೇರಿ ಪಶು ಆಸ್ಪತ್ರೆಗಳಲ್ಲಿಲಸಿಕೆ ಸಂಗ್ರಹಿಸಲು ಐಸ್‌ಲೈನ್ ರೇಫ್ರಿಜಿರೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಸಹಾಯಕ ನಿರ್ದೇಶಕ ಎಚ್. ಸಿದ್ದಪ್ಪ ತಿಳಿಸಿದರು.
ಕಿವಿಯೋಲೆಯ ಮೂಲಕ ಖಾತರಿ: ತಾಲೂಕಿನ ಎಲ್ಲಾ ಜಾನುವಾರುಗಳಿಗೆಈಗಾಗಲೇ ನಂಬರ್‌ಗಳಿರುವ ಕಿವಿಯೋಲೆಗಳನ್ನು ಹಾಕಲಾಗಿದ್ದು ಆ ನಂಬರ್‌ಮೂಲಕ ಇಲಾಖೆಯ ಆ್ಯಪ್‌ಗ್ಳಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿರುವ ಬಗ್ಗೆಖಾತರಿಯನ್ನು ಕೂಡ ಮಾಡಲಾಗುತ್ತದೆ.
ಶಾಸಕ ಡಾ.ಶ್ರೀನಿವಾಸಮೂರ್ತಿ , ತಾಪಂ ಇಒ ಮೋಹನ್‌ಕುಮಾರ್,ನಗಸಭೆ ಪೌರಾಯುಕ್ತ ಮಂಜುನಾಥ್, ಕೃಷಿಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ, ನಗರಸಭೆ ಸದಸ್ಯ ನರಸಿಂಹಮೂರ್ತಿ, ಪಶುವೈದ್ಯರಾದ ಡಾ.ನಾಗರಾಜು, ಡಾ.ಜಯರಾಮಯ್ಯ, ಡಾ.ದಿವ್ಯಾ,ಡಾ.ಶಿವಪ್ರಸಾದ್,ಡಾ.ನಿಶಾಂತ್, ಡಾ.ಚಂದ್ರನಾಯಕ್, ಮುಖಂಡರಾದಸೀತಾರಾಮ್, ಎಂಜಿನಿಯರ್ ಶಂಕರ್ ಇತರರು ಇದ್ದರು.