Advertisement

ಅರಣ್ಯದಂಚಿನ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ

12:38 PM Oct 16, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನ ದಂಚಿನ ಗ್ರಾಮಗಳಲ್ಲಿ ಪಶು ವೈದ್ಯಕೀಯ ಇಲಾಖೆ, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಹಾಗೂ ಮೈಮುಲ್‌ ನೆರವಿನಿಂದ ಜಾನುವಾರುಗಳಿಗೆ ಕಾಲು-ಬಾಯಿ ಜ್ವರದ ಲಸಿಕೆ ನೀಡುವ ಕಾರ್ಯಕ್ಕೆ ಉಡುವೆಪುರದಲ್ಲಿ ಚಾಲನೆ ನೀಡಲಾಯಿತು. ಈ ಗ್ರಾಮದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.

Advertisement

ಹನಗೋಡು ಪಶು ಆಸ್ಪತ್ರೆ ವೈದ್ಯ ಡಾ| ದರ್ಶನ್‌ ನೇತೃತ್ವದಲ್ಲಿ ಸಿಬ್ಬಂದಿ ರಾಸುಗಳಿಗೆ ಲಸಿಕೆ ನೀಡುವ ಮೂಲಕ ರೈತರಿಗೆ ಆರೋಗ್ಯ ಮಾಹಿತಿ ನೀಡಿದರು. ಸರ್ಕಾರ ದಿಂದ ಲಸಿಕೆ ಬಾರದ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಯೋಜನೆ ಹಾಗೂ ಮೈಮುಲ್‌ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಲಸಿಕೆ ಒದಗಿಸಲಾಗಿದೆ.

ಆದ್ಯತೆ ಮೇರೆಗೆ ನಾಗರಹೊಳೆ ಉದ್ಯಾನ ದಂಚಿನ ಉಡುವೆಪುರ, ನೇರಳಕುಪ್ಪೆ, ಬಿಲ್ಲೇನಹೊಸಹಳ್ಳಿ, ಕಾಳಬೂಚನಹಳ್ಳಿ, ಕಚುವಿನಹಳ್ಳಿ, ಕಡೇಮನುಗನಹಳ್ಳಿ, ಸಿಂಡೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಲಸಿಕೆ ಪಶುವೈದ್ಯರು ನೀಡಿದರು. ಈ ಭಾಗದಲ್ಲಿ ನಿತ್ಯವೂ ಲಸಿಕೆ ಹಾಕಲಾಗುವುದೆಂದು ವೈದ್ಯರು ತಿಳಿಸಿದ್ದಾರೆ. ಲಸಿಕೆ ನೀಡುವ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಡೇರಿ ಕಾರ್ಯದರ್ಶಿಗಳು ಉಪಸ್ಥಿತರಿ ದ್ದರು. ಉದಯವಾಣಿಯಲ್ಲಿ ಅ.10ರಂದು ತಾಲೂಕಿನಲ್ಲಿ ಕಾಲುಬಾಯಿ ಜ್ವರ ಉಲ್ಬಣ ಗೊಂಡಿರುವ ಕುರಿತು ಸಮಗ್ರ ವರದಿ ಪ್ರಕಟಿಸಿ ಬೆಳಕು ಚೆಲ್ಲಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next