Advertisement

ಇಂದಿನಿಂದ ಮಕ್ಕಳಿಗೆ ಲಸಿಕೆ; 28 ದಿನಗಳ ಬಳಿಕ ಮತ್ತೊಂದು ಡೋಸ್‌ ನೀಡಿಕೆ

01:28 AM Jan 03, 2022 | Team Udayavani |

ಬೆಂಗಳೂರು/ಹೊಸದಿಲ್ಲಿ: ದೇಶಾದ್ಯಂತ 15-18 ವರ್ಷದ ಮಕ್ಕಳಿಗೆ ಲಸಿಕೆ ವಿತರಿಸುವ ಕಾರ್ಯ ಸೋಮವಾರ ಆರಂಭವಾಗಲಿದೆ.

Advertisement

ಮೊದಲ ದಿನ 15 ವರ್ಷ ಮೇಲ್ಪಟ್ಟ 6 ಲಕ್ಷ ವಿದ್ಯಾರ್ಥಿ ಗಳಿಗೆ ಕೊವ್ಯಾಕ್ಸಿನ್‌ ನೀಡಲಾಗುತ್ತದೆ. ಇತರ ಲಸಿಕೆ ಪಡೆದಿದ್ದರೆ ಅಂಥವರಿಗೆ 15 ದಿನಗಳ ಬಳಿಕ ಕೊವ್ಯಾಕ್ಸಿನ್‌ ನೀಡ‌ಲಾಗುತ್ತದೆ. ಯಾವುದೇ ಅಡ್ಡಪರಿಣಾಮಗಳ ನಿರ್ವಹಣೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶಿಕ್ಷಣ ಇಲಾಖೆ ಸಿದ್ಧತೆ
ಆಯಾ ಶಾಲಾ ಮಟ್ಟದಲ್ಲಿ ಸಂಪುರ್ಣವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಸ್ತುವಾರಿ ಸಚಿವರು ಹಾಗೂ ವಿಧಾನ ಸಭೆ ಕ್ಷೇತ್ರದಲ್ಲಿ ಶಾಸಕರು ಚಾಲನೆ ನೀಡಲಿದ್ದಾರೆ. ಮೊದಲ ಡೋಸ್‌ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್‌ ನೀಡಲಾಗುತ್ತದೆ. ರಾಜ್ಯದಲ್ಲಿ 16 ಲಕ್ಷ ಡೋಸ್‌ ಕೊವ್ಯಾಕ್ಸಿನ್‌ ಲಭ್ಯವಿದೆ. ಜ. 3ರಂದು ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಪಾಲಕ/ಪೋಷಕರ ಸಭೆ ಕರೆದು ಲಸಿಕೆ ನೀಡುವ ಕುರಿತು ಮಾಹಿತಿ ನೀಡಲಾಗಿದೆ. ಲಸಿಕೆಯನ್ನು ಯಾಕಾಗಿ ನೀಡಲಾಗುತ್ತಿದೆ ಎಂಬ ಜಾಗೃತಿ ಮೂಡಿಸಲಾಗುತ್ತಿದೆ. ಲಸಿಕೆ ನೀಡುವ ದಿನ ಪ್ರಾಂಶುಪಾಲರು/ವಿದ್ಯಾರ್ಥಿಗಳು ಅಥವಾ ಪೋಷಕರ ಮೊಬೈಲ್‌ ಸಂಖ್ಯೆಯನ್ನು ದಾಖಲಿಸಿ ಲಸಿಕೆ ಕೊಡಿಸಲಾಗುತ್ತದೆ ಎಂದು ಶಾಲಾ-ಕಾಲೇಜು ಆಡಳಿತ ಮಂಡಳಿಗಳು ತಿಳಿಸಿವೆ.

ಇದನ್ನೂ ಓದಿ:ಕಾರು ಮಾರಾಟದಲ್ಲಿ ಹುಂಡೈಯನ್ನು ಮೀರಿಸಿದ ಟಾಟಾ

ಲಸಿಕೆ ವಿತರಣೆ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ, ಶಿಸ್ತಿನಿಂದ ಕಾರ್ಯಗತ ಗೊಳಿಸಲು ಸೂಚನೆ ನೀಡಲಾಗಿದೆ. ಮಕ್ಕಳನ್ನು ಸುರಕ್ಷಾ ಚಕ್ರದೊಳಗೆ ತರುವ ಪ್ರಧಾನಿಯವರ ಆಶಯದ ಈ ಕಾರ್ಯಕ್ರಮ ಸೋಮವಾರದಿಂದ ಪ್ರಾರಂಭವಾಗಲಿದೆ.ಜ. 10ರಿಂದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲಾಗುವುದು.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next