ತೇರದಾಳ: ಸರಕಾರಿ ಆಸ್ಪತ್ರೆ ಸಿಬ್ಬಂದಿ ಅವಾಂತರದಿಂದ ಕೊರೊನಾ ಮೊದಲ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪೂರ್ಣಗೊಂಡಿದೆ ಎಂಬ ಸಂದೇಶ ಬಂದಿದೆ.
ತೇರದಾಳ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಮೊದಲ ಲಸಿಕೆ ಪಡೆದು ಮೂರು ತಿಂಗಳು ಗತಿಸಿದ ಹಲವರಿಗೆ ಎರಡನೇ ಡೋಸ್ ಹಾಕಿಸಿಕೊಳ್ಳದಿದ್ದರೂ ತಮ್ಮ ಡೋಸ್‌ಪೂರ್ಣಗೊಂಡಿದೆ ಎಂಬ ಸಂದೇಶ ಅವರ ಮೊಬೈಲ್ ಗೆ ಬರುತ್ತಿವೆ. ಇದು ಅಷ್ಟೇ ಅಲ್ಲ ಬೇರೆಯವರ ಹೆಸರಿನ ಎರಡನೇ ಡೋಸ್ ಲಸಿಕೆ ಪೂರ್ಣಗೊಂಡಿದೆಎಂಬ ಸಂದೇಶಗಳು ಕೂಡ ಇನ್ನೊಬ್ಬರಿಗೆ ಬರುತ್ತಿವೆ.ಇದರಿಂದ ಸಾರ್ವಜನಿಕರು ಸರಕಾರಿ ಆಸ್ಪತ್ರೆಗೆ ಅಲೆದಾಡುವಂತಾಗಿದೆ.
ನಾನು ಮೂರು ತಿಂಗಳ ಹಿಂದೆ 1ನೇ ಡೋಸ್ ಲಸಿಕೆ ಪಡೆದಿರುವೆ. ಡಿ.16ಕ್ಕೆ 2ನೇ ಡೋಸ್‌ಲಸಿಕೆ ಪಡೆಯಬೇಕಿತ್ತು. ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯುವವನಿದ್ದೇನೆ. ಆದರೆ ಡಿ.16ರ ಮಧ್ಯಾಹ್ನ 2:35ಕ್ಕೆ 2ನೇ ಡೋಸ್ ಲಸಿಕೆ ಪಡೆದ ಬಗ್ಗೆ ಮೆಸೇಜ್ ಬಂದಿದೆ. ಈಗ ಲಸಿಕೆ ಪಡೆಯಲು ಹೇಗೆಹೋಗುವುದು ತಿಳಿಯದಾಗಿದೆ. ಅಲ್ಲದೆ 2ನೇ ಡೋಸ್‌ಲಸಿಕೆ ಪಡೆದ ಬಗ್ಗೆ ನನಗೆ ಪರಿಚಯವಿಲ್ಲದವರೊಬ್ಬರಹೆಸರಿನ(ಸವಿತಾ ಪಟ್ಟಣಶೆಟ್ಟಿ) ಮೆಸೇಜ್ ಕೂಡ ನನಗೆಬಂದಿದ್ದು ಆಶ್ಚರ್ಯವಾಗಿದೆ ಎನ್ನುತ್ತಾರೆ ತೇರದಾಳದ ಅಲ್ಲಪ್ಪ ಯಾದವಾಡ
ಜಮಖಂಡಿ ತಾಲೂಕಿನಲ್ಲಿ ಕೋವಿಡ್ ಮೊದಲ ಡೋಸ್ ಪಡೆದವರು ಶೇ.95, 2ನೇ ಡೋಸ್ ಪಡೆದವರು ಶೇ.75 ಎಂದು ಅಂದಾಜಿಸಲಾಗಿದೆ. ಕಳೆದ 8-10ದಿನಗಳಿಂದ ಲಸಿಕೆ ಪಡೆಯಲು ಬರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಿತ್ಯ 2ರಿಂದ 5 ಸಾವಿರ ಜನ ಲಸಿಕೆ ಪಡೆಯುತ್ತಿದ್ದಾರೆ. 2-3 ತಿಂಗಳಲ್ಲಿಶೇ.100ರ ಸಾಧನೆ ಸಾಧ್ಯವಿದೆ. ಆದರೆ ಡೋಸ್ ಪಡೆಯದಿದ್ದರೂ ಅಥವಾಬೇರೊಬ್ಬರ ಮೊಬೈಲ್‌ಗೆ ಇನ್ನೊಬ್ಬರ ಸಂದೇಶ ಹೋಗುತ್ತಿದ್ದು, ಆಸ್ಪತ್ರೆಗಳಲ್ಲಿನ ಕಂಪ್ಯೂಟರ್ ಆಪರೇಟರ್ ಅವರ ಅವಾಂತರವೇ ಕಾರಣವಾಗಿರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಯಾವುದೆ ಭಯ ಪಡೆಯದೆ ಲಸಿಕೆ ಪಡೆಯಬೇಕು.
-ಡಾ|ಜಿ.ಎಚ್. ಗಲಗಲಿ, ತಾಲೂಕು ವೈದ್ಯಾಧಿ ಕಾರಿ, ಜಮಖಂಡಿ