Advertisement
ಈ ಸಂಬಂಧ ನೀತಿ ಆಯೋಗದ ಕಾಯಂ ಸದಸ್ಯ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯೂ ಆಗಿರುವ ಡಾ| ವಿ.ಕೆ. ಪಾಲ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಜರುಗಿತು. ಲಸಿಕೆ ವಿತರಣೆಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ, ಲಸಿಕೆ ಸಂಗ್ರಹಕ್ಕೆ ಪ್ರತ್ಯೇಕ ಮಾರ್ಗ ಕಂಡುಕೊಳ್ಳದಂತೆ ಎಲ್ಲ ರಾಜ್ಯ ಸರಕಾರಗಳಿಗೆ ಆರೋಗ್ಯ ಸಚಿವಾಲಯ ಸ್ಪಷ್ಟವಾಗಿ ಸೂಚಿಸಿದೆ. ಮಾರ್ಚ್ 11ರಿಂದ ಈವರೆಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 3.04 ಕೋಟಿ ಎನ್95 ಮಾಸ್ಕ್ ಗಳು, 10.83 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಉಚಿತವಾಗಿ ವಿತರಣೆ ಮಾಡಿದ್ದೇವೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ.
ಕೋವಿಡ್ ಪ್ರಕರಣದಲ್ಲಿ ದೇಶ ಮತ್ತೂಂದು ದಾಖಲೆ ಬರೆದಿದೆ. ಕೇವಲ 24 ಗಂಟೆಗಳಲ್ಲಿ 66,999 ಮಂದಿಗೆ ಸೋಂಕು ದೃಢಪಟ್ಟಿದ್ದು, 942 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 24 ಲಕ್ಷದ ಸನಿಹಕ್ಕೆ ಬಂದಿದೆ. ಇದೇ ವೇಳೆ, ಗುಣಮುಖರಾದವರ ಸಂಖ್ಯೆ 17 ಲಕ್ಷ ಸಮೀಪಿಸಿದ್ದು, ಗುಣಮುಖ ಪ್ರಮಾಣ ಶೇ.70.77ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.