Advertisement

ಶಿರ್ವ: ಲಸಿಕೆ ಕೇಂದ್ರದಲ್ಲಿ ಭಾರೀ ಜನಜಂಗುಳಿ

11:39 AM Jun 08, 2021 | Team Udayavani |

ಶಿರ್ವ: ಇಲ್ಲಿನ ಸಮುದಾಯ ಅರೋಗ್ಯ ಕೇಂದ್ರದ ಬಳಿಯ ಸಂತ ಮೇರಿ ಪ.ಪೂ.ಕಾಲೇಜಿನ ಲಸಿಕೆ ಕೇಂದ್ರದಲ್ಲಿ ಮಂಗಳವಾರ ಭಾರೀ ಜನಸಂದಣಿ ಇದ್ದು ಸಾಮಾಜಿಕ ಅಂತರ ಮರೆತ ಜನರು ಟೋಕನ್ ಪಡೆಯಲು ಮುಗಿಬಿದ್ದಿದ್ದರು.

Advertisement

ಲಸಿಕೆ ಕೇಂದ್ರದಲ್ಲಿ ಮಂಗಳವಾರ 44 ವರ್ಷ ಮೇಲ್ಪಟ್ಟ ನಾಗರಿಕರಿಗೆ ಸುಮಾರು 180 ಡೋಸ್ ಲಸಿಕೆ ವಿತರಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂಜಾನೆ 8-30ರಿಂದ ಟೋಕನ್ ವಿತರಿಸಲು ಪ್ರಾರಂಭಿಸಲಾಗಿತ್ತು.9-30 ರಿಂದ ಲಸಿಕೆ ನೀಡಲು ಪ್ರಾರಂಭಿಸಲಾಯಿತು.

ಕೊರೊನಾ ನಿಯಂತ್ರಿಸಲು ಜಿಲ್ಲಾಧಿಕಾರಿಯವರ ಆದೇಶ ದಂತೆ ಶಿರ್ವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿತ್ತು. ಆದರೆ ಲಸಿಕೆ ಕೇಂದ್ರದಲ್ಲಿ 450ಕ್ಕೂ ಹೆಚ್ಚು ಜನರು ಸಾಮಾಜಿಕ ಅಂತರ ಮರೆತು ಜಮಾಯಿಸಿದ್ದು ಲಸಿಕೆ ಕೇಂದ್ರದಿಂದಲೇ ಕೊರೊನಾ ವನ್ನು ಮನೆಗೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣ ಗೊಂಡಿತ್ತು.

Advertisement

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆದ್ಯತೆಯ ಮೇರೆಗೆ 18ರಿಂದ-44 ವಯಸ್ಸಿನವರಿಗೆ ಸುಮಾರು 50 ಡೋಸ್‌ ಮತ್ತು 2ನೇ ಡೋಸ್‌ ಪಡೆಯವವರಿಗೆ ಸುಮಾರು 40 ಡೋಸ್‌ ಕೋವಾಕ್ಸಿನ್‌ ನೀಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next