Advertisement

ಹಾಡಿಗಳ ಆದಿವಾಸಿಗಳಿಗೆ ಲಸಿಕೆ ಜಾಗೃತಿ

02:47 PM Apr 17, 2021 | Team Udayavani |

ಹುಣಸೂರು: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆತಾಲೂಕು ಆಡಳಿತವು ತಾಲೂಕಿನ ಆದಿವಾಸಿಗಳಹಾಡಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ.ಆದಿವಾಸಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟುಹಾಕುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ತಹಶೀಲ್ದಾರ್‌ಐ.ಇ.ಬಸವರಾಜ್‌, ತಾಪಂ ಇಒ ಗಿರೀಶ್‌ ಅವರುಆರೋಗ್ಯ ಕಾರ್ಯಕರ್ತರ ತಂಡದೊಂದಿಗೆಹನಗೋಡು ಹೋಬಳಿಯ ನೇರಳಕುಪ್ಪೆ ಎ ಮತ್ತು ಬಿಹಾಡಿ, ಬೀರತಮ್ಮನಹಳ್ಳಿ ಹಾಡಿ, ಬಿಲ್ಲೇನಹೊಸಹಳ್ಳಿ ಸೇರಿದಂತೆ ವಿವಿಧ ಹಾಡಿಗಳಿಗೆ ಭೇಟಿನೀಡಿ, ಹಾಡಿ ಮಂದಿಯೊಂದಿಗೆ ಚರ್ಚೆ ನಡೆಸಿದರು.

Advertisement

ಕೊರೊನಾ 2ನೇ ಅಲೆ ವೇಗವಾಗಿ ಹರಡುತ್ತಿದ್ದು, ದಿನೇದಿನೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. 45ವರ್ಷ ಮೇಲ್ಪಟ್ಟಎಲ್ಲರೂ ಲಸಿಕೆ ಹಾಕಿಸಿಕೊಂಡಲ್ಲಿ ರೋಗನಿಯಂತ್ರಣಗೊಳಿಸಬಹುದಾಗಿದೆ. ಲಸಿಕೆಹಾಕಿಸಿಕೊಂಡರೆ ಯಾವುದೇ ಅಡ್ಡ ಪರಿಣಾಮಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸಲಹೆನೀಡಿ, ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಮನವಿಮಾಡಿದರು.ಈ ವೇಳೆ ಆರೋಗ್ಯ ಇಲಾಖೆ ಸಹಾಯಕಚಂದ್ರಶೇಖರ್‌, ಕಾರ್ಯಕರ್ತೆ ನಿತ್ಯ ಸೇರಿದಂತೆಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

46,650 ಮಂದಿಗೆ ಲಸಿಕೆ: ತಾಲೂಕಿನಾದ್ಯಂತಶುಕ್ರವಾರದವರೆಗೆ 45 ವರ್ಷ ಮೇಲ್ಪಟ್ಟವರು46,650 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.ತಾಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರು 70ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಎಲ್ಲಗ್ರಾಪಂಗಳು ಹಾಗೂ ಹುಣಸೂರು ನಗರಸಭೆಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರುತಮ್ಮ ಆರೋಗ್ಯ ದೃಷ್ಟಿಯಿಂದ ಲಸಿಕೆಹಾಕಿಸಿಕೊಳ್ಳಬೇಕು. ಸಂಘ ಸಂಸ್ಥೆಗಳು,ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಜನರಮನವೊಲಿಸಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಬೇಕೆಂದು ತಹಶೀಲ್ದಾರ್‌ ಬಸವರಾಜ್‌ ಹಾಗೂ ಇಒಗಿರೀಶ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next