Advertisement
ತಾಲೂಕಿನಲ್ಲಿ ಕೊರೊನಾ ಎರಡನೇ ಅಲೆದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಪ್ರತಿ ದಿನತಾಲೂಕಿನಲ್ಲಿ 30ರಿಂದ 40 ಕೊರೊನಾ ಸೋಂಕಿತಪ್ರಕರಣ ದಾಖಲಾಗುತ್ತಿವೆ ಕೊರೊನಾ ತೀವ್ರತೆಅರಿತ ತಹಶೀಲ್ದಾರ್ ತಾಲೂಕಿನ ಹಾರೋಹಳ್ಳಿಮತ್ತು ಮರಳವಾಡಿ ಹೋಬಳಿಗಳಲ್ಲಿ ಸ್ವತಹ ಫೀಲ್ಡಿಗಿಳಿದಿದ್ದರು.
Related Articles
Advertisement
ಬಳಿಕರಾಘವೇಂದ್ರ ವೈನ್ ಶಾಪ್‌ಗೆ ಭೇಟಿ ನೀಡಿ ಮಾಸ್ಕ್ಹಾಕಿಕೊಂಡು ಬರುವ ಮದ್ಯಪ್ರಿಯರಿಗೆ ಮಾತ್ರಕೊಡಬೇಕು. ವೈನ್ ಶಾಪ್‌ನಲ್ಲಿ ಮದ್ಯ ಸೇವಿಸಲುಯಾರಿಗೂ ಅವಕಾಶ ಕೊಡಬಾರದು ಎಂದುಖಡಕ್ ಆದೇಶ ಮಾಡಿದರು.
ಲಸಿಕೆ ಶಕ್ತಿ ಇದ್ದಂತೆ: ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕೊರೊನಾ ವಿರುದ್ಧಹೋರಾಡಲು ಲಸಿಕೆ ಎಂಬ ಶಕ್ತಿಯನ್ನು 45 ವರ್ಷಮೇಲ್ಪಟ್ಟ ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು.
ತಾಲೂಕಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಮುಂದಿನ ದಿನಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗಲಿದೆ.ಬೇಕು ಎಂದರೂ ಲಸಿಕೆ ಸಿಗುವುದಿಲ್ಲ. ಹೀಗಾಗಿಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು.ಲಸಿಕೆ ಪಡೆಯುವುದರಿಂದ ಶಕ್ತಿ ವೃದ್ಧಿಯಾಗಿಕೊರೊನಾದಿಂದ ದೂರವಿಬಹುದು. ಲಸಿಕೆಒಂದು ಶಕ್ತಿ ಇದ್ದಂತೆ. ಆ ಶಕ್ತಿಯನ್ನು ನೀವೆಲ್ಲರೂಪಡೆದು ಕೊರೊನಾ ಮುಕ್ತ ಸಮಾಜಕ್ಕೆ ನಮಗೆ ಶಕ್ತಿನೀಡಬೇಕು ಎಂದರು.
ಪ್ರತಿಯೊಬ್ಬರಿಗೂ ಲಸಿಕೆತಲುಪಬೇಕು ಆ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ನಾವೂ ಮನೆ ಮನೆಗೆ ಭೇಟಿ ನೀಡಿಕೊರೊನಾ ಲಸಿಕೆ ಪಡೆದುಕೊಳ್ಳುವಂತೆ ಮನವರಿಕೆಮಾಡಿಕೊಟ್ಟಿದ್ದೇವೆಂದರು.