Advertisement

ಲಸಿಕೆ ಪಡೆದವರಿಗೆ ಟಿ20 ಪಂದ್ಯಕ್ಕೆ ಪ್ರವೇಶ

11:31 PM Nov 10, 2021 | Team Udayavani |

ಜೈಪುರ: ಒಂದು ಡೋಸ್‌ ಲಸಿಕೆ ಪಡೆದ ವೀಕ್ಷಕರಿಗೆ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ಟಿ20 ಪಂದ್ಯಕ್ಕೆ ಸ್ಟೇಡಿಯಂ ಪ್ರವೇಶಿಸಲು ಅನುಮತಿ ನೀಡಲಾಗಿದೆ.

Advertisement

ರಾಜಸ್ಥಾನ್‌ ಕ್ರಿಕೆಟ್‌ ಅಸೋಸಿಯೇಶನ್‌ (ಆರ್‌ಸಿಎ) ಕಾರ್ಯದರ್ಶಿ ಮಹೇಂದ್ರ ಶರ್ಮ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು. ಜೈಪುರದ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಬುಧವಾರ ಈ ಪಂದ್ಯ ನಡೆಯಲಿದೆ.

“ರಾಜ್ಯ ಸರಕಾರ ಹಾಗೂ ಗೃಹ ಇಲಾಖೆಯ ಆರೋಗ್ಯ ಮಾರ್ಗಸೂಚಿಯಂತೆ ಪ್ರೇಕ್ಷಕರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ವೀಕ್ಷಕರು ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು. ಹಾಗೆಯೇ 48 ಗಂಟೆಗಳ ಹಿಂದಿನ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು’ ಎಂದು ಶರ್ಮ ತಿಳಿಸಿದರು.

ಇದನ್ನೂ ಓದಿ:ಮಿಂಚಿದ ಮಿಚೆಲ್‌; ಕಿವೀಸ್‌ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next