Advertisement
ಅಭಿಯಾನದ 10ನೇ ದಿನವಾದ ಸೋಮವಾರ 1,099 ಕೇಂದ್ರಗಳಿಂದ 85,422 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಈ ಪೈಕಿ 1,097 ಕೇಂದ್ರಗಳಿಂದ 32,277 ಮಂದಿಗೆ ಲಸಿಕೆ ಹಾಕುವ ಮೂಲಕ ಶೇ. 38ರಷ್ಟು ಗುರಿ ತಲುಪಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 6,092 ಸಿಬಂದಿಗೆ ಲಸಿಕೆ ನೀಡಲಾಗಿದೆ.
Related Articles
Advertisement
5,215 : ಕಾರ್ಯಗತ
4,20,274 : ಗುರುತಿಸಿದ ಫಲಾನುಭವಿಗಳು
2,30,119 : ಲಸಿಕೆ ಪಡೆದವರು
55 ಶೇ. ಗುರಿ ಸಾಧನೆ
500 ಸೆಲಿಬ್ರಿಟಿಗಳಿಗೆ ಲಸಿಕೆ ನೀಡಲು ಪ್ರಧಾನಿಗೆ ಮನವಿ :
ಕೋವಿಡ್ ಲಸಿಕೆ ಕುರಿತು ಜನಸಾಮಾನ್ಯರಿಗೆ ನೈತಿಕ ಸ್ಥೈರ್ಯ ತುಂಬಲು ಎರಡನೇ ಹಂತದಲ್ಲಿ ಮುಖ್ಯಮಂತ್ರಿಗಳು, ಸಚಿವರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸುಮಾರು 500 ರಷ್ಟು ಜನಪ್ರಿಯ ವ್ಯಕ್ತಿಗಳಿಗೆ (ಸೆಲಿಬ್ರಿಟಿ) ಲಸಿಕೆ ನೀಡುವಂತೆ ಕ್ರಮ ವಹಿಸಲು ಪ್ರಧಾನಿಗಳಿಗೆ ಕೋರಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ತಿಳಿಸಿದ್ದಾರೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಲಸಿಕೆಯಿಂದ ಈವರೆಗೆ ಯಾವುದೇ ದೊಡ್ಡ ಮಟ್ಟದ ಅಡ್ಡ ಪರಿಣಾಮ ಆಗಿಲ್ಲ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಹೆಚ್ಚು ಆರೋಗ್ಯ ಕಾರ್ಯಕರ್ತರು ಪಡೆಯಬೇಕು. ಈಗಾಗಲೇ ಮೊದಲ ಹಂತಕ್ಕೆ ಬೇಕಾದಷ್ಟು ಪ್ರಮಾಣದ ಲಸಿಕೆ ದಾಸ್ತಾನು ರಾಜ್ಯದಲ್ಲಿದೆ.– ಡಾ| ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ