Advertisement

ಲಸಿಕೆ ಅಭಿಯಾನ ಚುರುಕುಗೊಳಿಸಲು ಸಿಎಸ್‌ ಸೂಚನೆ

08:07 PM May 24, 2021 | Team Udayavani |

ಕೆಜಿಎಫ್: ಕೋವಿಡ್‌ ಲಸಿಕೆ ಕಾರ್ಯಕ್ರಮವನ್ನುಚುರುಕುಗೊಳಿಸುವಂತೆ ತಾಲೂಕು ವೈದ್ಯಾಧಿಕಾರಿಡಾ.ಸುನಿಲ್‌ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಸೂಚನೆ ನೀಡಿದರು.ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಅವರು, ಇಸ್ರೇಲ್‌ನಿಂದಬಂದಿದ್ದ ಆಮ್ಲಜನಕ ಘಟಕವನ್ನು ವೀಕ್ಷಿಸಿದರು.ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್‌ ಘಟಕದ ಬಗ್ಗೆವಿವರಣೆ ನೀಡಿದರು.

Advertisement

ಘಟಕವು ಈಗ ರಿಪೇರಿಯಲ್ಲಿದ್ದು, ಎಂಜಿನಿಯರ್‌ಗಳು ರಿಪೇರಿ ಕಾರ್ಯದಲ್ಲಿತೊಡಗಿದ್ದಾರೆ ಎಂದು ತಿಳಿಸಿದರು.ನಂತರ ತಾಲೂಕು ವೈದ್ಯಾಧಿಕಾರಿ ಡಾ.ಸುನಿಲ್‌ಅವರಿಂದ ಕೋವಿಡ್‌ ಲಸಿಕೆ ಮಾಹಿತಿ ಪಡೆದರು.2000 ಗುರಿಯನ್ನು ಇನ್ನೂ ತಲುಪಿಲ್ಲ. ಯಾಕೆ ತಡವಾಗುತ್ತಿದೆ. ಇದೇ ರೀತಿ ಆದರೆ, ಕೊವ್ಯಾಕ್ಸಿನ್‌ ಅನ್ನುಬೇರೆಡೆಗೆ ಕಳಿಸುತ್ತೇನೆ. ಎಲ್ಲಾ ವರ್ಗದವರಿಗೆ,ಸರ್ಕಾರಿ ನೌಕರರಿಗೆ ಆದ್ಯತೆ ನೀಡಿ. ಗುರುತಿಸಿದನಿರ್ದಿಷ್ಟ ವಲಯಕ್ಕೆ ಆದ್ಯತೆ ನೀಡಬೇಕು ಎಂದುಹೇಳಿದರು.

ಲಾಕ್‌ಡೌನ್‌ ಪರಿಣಾಮವಾಗಿ ಜನರು ಹೊರಗೆಬರುತ್ತಿಲ್ಲ. ಆದ್ದರಿಂದ ಕಳೆದ ಎರಡು ದಿನಗಳಿಂದಕಡಿಮೆ ಪ್ರಮಾಣದಲ್ಲಿ ಲಸಿಕೆಹಾಕುವಕಾರ್ಯಕ್ರಮನಡೆಯುತ್ತಿದೆ ಎಂದು ವೈದ್ಯರು ಹೇಳಿದರು.ನಗರಸಭೆಯಿಂದ ಕೂಡಲೇ ವಾಹನಗಳಮೂಲಕ ಜನರನ್ನು ಕರೆದುಕೊಂಡು ಬರಬೇಕು ಎಂದು ಸೂಚಿಸಿದರು.

ಬೆಳಗ್ಗೆ 18 ವರ್ಷದೊಳಗಿನವರಿಗೆ ಕೊಡಿ. ಮಧ್ಯಾಹ್ನದ ನಂತರ 45 ವರ್ಷದನಂತರದವರಿಗೆ ಕೊಡಿ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಹೇಳಿದರು.ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಒಬ್ಬ ಫಿಸಿಜಿಯನ್‌ ವೈದ್ಯರನ್ನು ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್‌ ಮನವಿ ಮಾಡಿದರು.ನಗರಸಭೆಯಿಂದ ಕೋವಿಡ್‌ ಮುಂಜಾಗರೂಕತೆಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಸಲಹೆಮೇರೆಗೆ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ ಎಂದು ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಹೇಳಿದರು.ಜಿಲ್ಲಾಪಂಚಾಯ್ತಿಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಇಲಕ್ಕಿಯಾ ಕರುಣಾಗರನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next