Advertisement

ಸಂಕ್ರಾಂತಿಯೊಳಗೆ ಲಸಿಕೆ ಅಭಿಯಾನ ಪೂರ್ಣಗೊಳಿಸಿ

12:17 PM Jan 11, 2022 | Team Udayavani |

ಹುಣಸೂರು: ತಾಲೂಕಿನಲ್ಲಿ ಸಂಕ್ರಾತಿಯೊಳಗೆ ಪ್ರತಿಯೊಬ್ಬರಿಗೂ ಕೋವಿಡ್‌ ಲಸಿಕೆ ಹಾಕಿಸಬೇಕುಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಸೂಚಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಲಸಿಕೆ ಹಾಕಿಸುವಲ್ಲಿ ಜಿಲ್ಲೆಯಲ್ಲೇ ತಾಲೂಕು ಕೊನೆ ಸ್ಥಾನದಲ್ಲಿದೆ ಎಂಬ ಮಾಹಿತಿ ನೀಡಿದ್ದಾರೆ. ಇದಕ್ಕೆ ತಹಶೀಲ್ದಾರ್‌ಡಾ.ಅಶೋಕ್‌, ಇಒ ಗಿರೀಶ್‌ ಹಾಗೂ ಟಿಎಚ್‌ಓಡಾ.ಕೀರ್ತಿಕುಮಾರ್‌ ನಡುವೆ ಸಮನ್ವಯತೆಕೊರತೆ ಇದೆ ಎನಿಸುತ್ತಿದೆ. ನೋಡಲ್‌ ಅಧಿಕಾರಿಗಳುಸ್ಪಂದಿಸುತ್ತಿಲ್ಲವೇ?, ಯಾವ ಕಾರಣಕ್ಕಾಗಿ ಲಸಿಕೆನೀಡಿಕೆಯಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಸಬೇಕೆಂದು ಸೂಚಿಸಿದರು.

ತಾಲೂಕಿನಲ್ಲಿ ಮೊದಲ ಡೋಸ್‌ನ 9 ಸಾವಿರ,58 ಸಾವಿರ ಮಂದಿಗೆ ಎರಡನೇ ಡೋಸ್‌ ಲಸಿಕೆನೀಡಬೇಕಿದೆ. ಲಸಿಕೆ ನೀಡುವ ಗುರಿಯಲ್ಲೇಲೋಪವಿದೆಯೇ ಎಂಬುದನ್ನು ತಿಳಿಸಿಸಬೇಕು.ಮುಖ್ಯವಾಗಿ ಎಲ್ಲೆಲ್ಲಿ, ಯಾವ ಕಾರಣಕ್ಕಾಗಿ ಲಸಿಕೆ ಪಡೆದಿಲ್ಲ ಎಂಬುದರ ಬಗ್ಗೆ ಆಶಾ-ಆರೋಗ್ಯಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಗುರಿಯಲ್ಲಿ ಲೋಪ: ಕಲ್ಲಹಳ್ಳಿ ಆಸ್ಪತ್ರೆ ವೈದ್ಯ ಡಾ.ದರ್ಶನ್‌, ರತ್ನಪುರಿ ಆಸ್ಪತ್ರೆ ವೈದ್ಯ ಡಾ.ಶ್ರೀನಿವಾಸ್‌, ಗಾವಡಗೆರೆ ಆಸ್ಪತ್ರೆ ವೈದ್ಡಾ|ಜಗದೀಶ್‌, ಕಟ್ಟೆಮಳಲವಾಡಿ ಆಸ್ಪತ್ರೆ ವೈದ್ಯೆಗೀತಾಂಜಲಿ ಮತ್ತಿತರರು ಟಾರ್ಗೆಟ್‌ ನೀಡಿಕೆಯಲ್ಲಿವ್ಯತ್ಯಾಸವಿದೆ. ಮೊದಲ ಡೋಸ್‌ ಪಡೆಯದ 9760ಮಂದಿ ಇದ್ದಾರೆಂಬ ಮಾಹಿತಿ ನೀಡಿದೆ. ಕೆಲವರುಕಾರ್ಖಾನೆ ಸೇರಿದಂತೆ ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ಪಡೆದಿದ್ದಾರೆ. ಕೆಲವರು ನಿಧನರಾಗಿದ್ದಾರೆ.ಎರಡನೇ ಡೋಸ್‌ಗೆ 84 ದಿನವಾಗದವರು ಬಾಕಿಉಳಿದಿದ್ದಾರೆ. ಸರಿಯಾಗಿ ಆನ್‌ಲೈನ್‌ನಲ್ಲಿ ಡಾಟಾಅಪ್‌ ಲೋಡ್‌ ಆಗದೆ ಲೆಕ್ಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದರು.

ನೇರಳಕುಪ್ಪೆ ಆಸ್ಪತ್ರೆ ವೈದ್ಯೆ ಡಾ.ಶಿಲ್ಪಶ್ರೀ, ಹೊಸೂರು ಆಸ್ಪತ್ರೆ ವೈದ್ಯ ರಾಜೇಶ್‌, ದೊಡ್ಡಹೆಜೂjರುಆಸ್ಪತ್ರೆ ವೈದ್ಯ ಡಾ.ಸುಧಾಕರ್‌, ಚಲ್ಲಹಳ್ಳಿಯ ಆಸ್ಪತ್ರೆವೈದ್ಯೆ ಮಮತಾ ಅವರು, ನಮ್ಮ ವ್ಯಾಪ್ತಿಯ ಗಿರಿಜನಹಾಡಿಗಳಿಂದ ಸುಮಾರು 500 ಮಂದಿ, ಈರನ್‌ದಾಸಿಕೊಪ್ಪಲಿನಲ್ಲಿ 100 ಮಂದಿ ಲಸಿಕೆ ಪಡೆದಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಒತ್ತಾಯಿಸಿದರೆ ನಮ್ಮಗಳಮೇಲೆಯೇ ಗಲಾಟೆ-ಹಲ್ಲೆಗೆ ಮುಂದಾಗುತ್ತಾರೆಂದು ಅಳಲು ತೋಡಿಕೊಂಡರು.

Advertisement

ನಿಖರ ಮಾಹಿತಿ ಸಂಗ್ರಹಿಸಿ: ನೋಡಲ್‌ಅಧಿಕಾರಿಗಳು, ಗ್ರಾಪಂ ಹಾಗೂ ಆಶಾ, ಆರೋಗ್ಯಕಾರ್ಯಕರ್ತರ ನೆರವಿನೊಂದಿಗೆ ಲಸಿಕೆ ಪಡೆದಬಗ್ಗೆ, ಎಲ್ಲಿ ಪಡೆದುಕೊಂಡಿದ್ದಾರೆ, ಎಷ್ಟು ಮಂದಿಅನಾರೋಗ್ಯ ಪೀಡಿತರು, ನಿಧನರಾದ ಹಾಗೂ ಬೇರೆಡೆಗಳಲ್ಲಿ ವಾಸಿಸುತ್ತಿರುವ ಬಗ್ಗೆ ನಿಖರ ಮಾಹಿತಿಸಂಗ್ರಹಿಸಿ ವರದಿ ನೀಡಿದಲ್ಲಿ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡುತ್ತೇನೆಂದು ಶಾಸಕರು ತಿಳಿಸಿದರು.

ಲಸಿಕೆ ಕೊರತೆ: ಸರ್ಕಾರ 15-18 ವರ್ಷದವರಿಗೆ ಲಸಿಕೆ ಹಾಕಿಸಿ ಎನ್ನುತ್ತಿದೆ. ಆದರೆ, ಮೂರು ದಿನಗಳಿಂದ ಕೊವ್ಯಾಕ್ಸಿನ್‌ ಲಸಿಕೆ ಕೊರತೆ ಇದ್ದು, ಇದ ರಿಂದ ಲೂ ಲಸಿಕೆ ನೀಡಿಕೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ಹಲವು ವೈದ್ಯರು ಅಳಲು ತೋಡಿಕೊಂಡರು.ಸಭೆಯಲ್ಲಿ ತಹಶೀಲ್ದಾರ್‌ ಡಾ.ಅಶೋಕ್‌, ತಾಪಂಇಒ ಗಿರೀಶ್‌, ಟಿಎಚ್‌ಒ ಡಾ.ಕೀರ್ತಿಕುಮಾರ್‌, ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಹುಣಸೂರು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್‌ರಾಜೇ ಅರಸ್‌, ಪರಿಸರ ಎಂಜಿನಿಯರ್‌ ರೂಪಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next