Advertisement
ಪಟ್ಟಣದ ಖಾಲಿ ನಿವೇಶನಗಳು ಸ್ವಚ್ಚತೆಯ ನಿರ್ವಹಣೆ ಇಲ್ಲದೇ ಕೊಳಚೆ ಪ್ರದೇಶಗಳಾಗಿ ಪರಿವರ್ತನೆ ಯಾಗಿದ್ದು, ನಿವೇಶನಗಳ ಮಾಲೀಕರ ಅಸಡ್ಡೆಯಿಂದಾಗಿ ಅದರ ಅಕ್ಕಪಕ್ಕದ ಮನೆಗಳ ನಿವಾಸಿಗಳು ನೆಮ್ಮದಿಯ ಜೀವನದಿಂದ ವಂಚಿತರಾಗಿದ್ದಾರೆ. ಪ್ರತಿಷ್ಠಿತ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದೇವೆಂದು ಖಾಲಿ ನಿವೇಶನಗಳ ಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳು ಹೆಸರಿಗೆ ಮಾತ್ರ ಹೇಳಿ ಕೊಳ್ಳಬೇಕಷ್ಟೇ. ಕೊಳಚೆ ಪ್ರದೇಶದ ವಾತಾವರಣ ಅಲ್ಲಿ ಸೃಷ್ಟಿಯಾಗಿರುವುದು ಮಾತ್ರ ಅಲ್ಲಿನ ವಾಸ್ತವ ಸಂಗತಿ.
Related Articles
Advertisement
ಸಾಂಕ್ರಾಮಿಕ ರೋಗಗಳ ಭೀತಿ: ಖಾಲಿ ನಿವೇಶನದಲ್ಲಿ ಚರಂಡಿ ನೀರು ಹರಿಯದೆ ನಿಂತು ದುರ್ವಾಸನೆ ಬೀರುತ್ತಾ ಸುತ್ತಲಿನ ಪರಿಸರ ಹಾಳಾಗಿದ್ದು, ಇದರ ಜತೆಗೆ ಕೆಲವರು ಸುತ್ತಮುತ್ತಲ ಕಸವನ್ನು ಇಲ್ಲಿಯೇ ತಂದು ಬಿಸಾಡುತ್ತಿರುವುದರಿಂದ ಈ ಅನಧಿಕೃತ ಕಸದ ತೊಟ್ಟಿಗಳಿಂದ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ನಿವೇಶನದಲ್ಲೇ ನಿಂತು ಸೊಳ್ಳೆಗಳಿಗೆ ಪ್ರಶಸ್ತ ತಾಣಗಳಾಗಿರುವುದರಿಂದ ಪಕ್ಕದ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯ ಆತಂಕದಲ್ಲಿದ್ದಾರೆ.
ಗಮನಹರಿಸದ ನಗರಸಭೆ: ಪ್ರತಿಷ್ಟಿತ ಬಡಾವಣೆ ಗಳಲ್ಲಿರುವ ಖಾಲಿ ನಿವೇಶನ ಗಳನ್ನು ನಿರ್ವಹಣೆ ಮಾಡಿ, ಸ್ವಚ್ಚತೆ ಕಾಪಾಡುವಂತೆ ಮಾಲೀಕರಿಗೆ ನಗರ ಸಭೆ ಸೂಚನೆ ನೀಡದಿರುವುದು ಮಾಲೀಕರ ಅಸಡ್ಡೆಗೆ ಕಾರಣ ವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ತೊಂದರೆಅನುಭವಿ ಸುತ್ತಿರುವ ನಿವಾಸಿಗಳು ಆಗ್ರಹಿಸಿದ್ದಾರೆ.ತಮ್ಮ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಸ್ವಚ್ಛತೆ ಮಾಡಿ ಕೈತೊಳೆ ದುಕೊಳ್ಳುವ ಕೆಲಸ ಮಾಡದೆ ಇಡೀ ಪಟ್ಟಣವನ್ನು ನೈರ್ಮಲ್ಯವಾಗಿಡಲು ಸಹಕರಿಸಬೇಕು. ಖಾಲಿ ನಿವೇಶ ನಗಳ ಮಾಲೀಕರಿಗೆ ನೋಟಿಸ್ ನೀಡಿ ನಿರ್ವಹಣೆ ಮಾಡುವಂತೆ ಎಚ್ಚರಿಸಬೇಕೆಂದು ಒತ್ತಾಯ ಮಾಡಿದ್ದಾರೆ.
ಖಾಲಿ ನಿವೇಶನ ಹೊಂದಿರುವವರು ತಮ್ಮ ನಿವೇಶನಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆಯಾದರೂ, ಕೆಲವಡೆ ಪಾಲಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. -ಶಿವನಂಕಾರಿಗೌಡ, ಪೌರಾಯುಕ್ತ ನಗರಸಭೆ.
-ಎಂ.ಶಿವಮಾದು