Advertisement

ಅರಣ್ಯ ಇಲಾಖೆಯಲ್ಲಿ ಹುದ್ದೆ ಖಾಲಿ ಖಾಲಿ

05:42 PM Oct 05, 2020 | Suhan S |

ದೇವದುರ್ಗ: ಪಟ್ಟಣದ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ವಲಯ ಅರಣ್ಯಾಧಿಕಾರಿ ಸೇರಿ ಇತರೆ ಅಧಿಕಾರಿ, ಸಿಬ್ಬಂದಿ ಹುದ್ದೆ ಖಾಲಿ ಇದ್ದು, ಇರುವ ಸಿಬ್ಬಂದಿಯೇ ಅರಣ್ಯ ಸಂರಕ್ಷಣೆ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹರಸಾಹಸಪಡುವಂತಾಗಿದೆ.

Advertisement

ಹುದ್ದೆಗಳು ಖಾಲಿ ಖಾಲಿ: ಪಟ್ಟಣದ ವಲಯ ಅರಣ್ಯ ಇಲಾಖೆ ಅಧಿಕಾರಿ ಸೇರಿ ಎರಡು ಉಪ ವಲಯ ಅಧಿಕಾರಿ, ಅರಣ್ಯ ರಕ್ಷಣೆ, ಎಫ್‌ಡಿಎ ಸೇರಿ ವಿವಿಧ ಹುದ್ದೆಗಳು ಖಾಲಿ ಇವೆ. ಹೀಗಾಗಿ ಕಚೇರಿಯಲ್ಲಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿವೆ. ರಾಜ್ಯ ಸರಕಾರ ಸುಮಾರು ವರ್ಷಗಳಿಂದ ಖಾಲಿ ಹುದ್ದೆ ಭರ್ತಿಗೆ ಮುಂದಾಗದ್ದರಿಂದ ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಪಟ್ಟಣ ಮತ್ತು ಮಸರಕಲ್‌ ಉಪ ವಲಯ ಅಧಿಕಾರಿ ಹುದ್ದೆ ಖಾಲಿ ಇದೆ. ಅರಣ್ಯ ರಕ್ಷಕರ ಹುದ್ದೆಯೂ ಖಾಲಿರುವ ಕಾರಣ ಅರಣ್ಯ ಸಂರಕ್ಷಣೆಗೆ ಇಲ್ಲಿನ ಅಧಿ ಕಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಪರಿಚಾರ ಹುದ್ದೆ ಖಾಲಿ ಇದ್ದು, ಗುತ್ತಿಗೆ ಸಿಬ್ಬಂದಿ ನೇಮಕ ಮಾಡಲಾಗಿದೆ.

ಮೂರು ಇಲಾಖೆ ಹೊಣೆ: ಇಲ್ಲಿನ ವಲಯ ಅರಣ್ಯ ಅಧಿಕಾರಿಗೆ ರಾಯಚೂರು, ಮಾನ್ವಿ, ದೇವದುರ್ಗ ಪ್ರಭಾರಿ ವಹಿಸಲಾಗಿದೆ. ವಾರದಲ್ಲಿ ಎರಡ್ಮೂರು ದಿನ ಕಚೇರಿಗೆ ಆಗಮಿಸುತ್ತಿದ್ದು, ಕಚೇರಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ. ದಿನಗೂಲಿ ಸಿಬ್ಬಂದಿ ವೇತನ ಪಾವತಿ ಕೂಡ ವಿಳಂಬವಾಗುತ್ತಿದೆ. ಎಫ್‌ ಡಿಎ ಹುದ್ದೆ ಖಾಲಿ ಇದ್ದು ಗುತ್ತಿಗೆ ಸಿಬ್ಬಂದಿ ಕಚೇರಿ, ಕೆಲಸ ಕಾರ್ಯ ನೋಡಿಕೊಳ್ಳಬೇಕಿದೆ.

ಕಾದಿಟ್ಟ ಅರಣ್ಯ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಕಾದಿಟ್ಟ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಬೆಟ್ಟಗಳು, ವನ್ಯ ಸಂಪತ್ತು ಇದೆ. ಇದೀಗ ಸತತ ಮಳೆಯಿಂದ ಕಾದಿಟ್ಟ ಅರಣ್ಯ ಪ್ರದೇಶ ಹಸಿರು ಹೊದ್ದು ನಿಂತಿದೆ. ಇಲ್ಲಿನ ಮರಗಳಿಗೆ ಆಗಾಗ ಕೊಡಲಿ ಪೆಟ್ಟು ಬೀಳುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಇವುಗಳ ಸಂರಕ್ಷಣೆ ಸವಾಲಾಗಿದೆ. ಸಾವಿರಾರು ಸಸಿಗಳು: ಜಾಲಹಳ್ಳಿ, ತಳವರದೊಡ್ಡಿ,ಸಮುದ್ರ, ಜಾಗೀರ ಜಾಡಲದಿನ್ನಿ ಸೇರಿ ಇತರೆ ಗ್ರಾಮಗಳ ವ್ಯಾಪ್ತಿಯ ಅರಣ್ಯ ಇಲಾಖೆಯ ನಿವೇಶನದಲ್ಲಿ 20 ಸಾವಿರಕ್ಕೂ ಹೆಚ್ಚು ವಿವಿಧ ಗಿಡಗಳನ್ನು ಬೆಳೆಸಲಾಗಿದೆ. ಒಂದು ಗ್ರಾಮದಲ್ಲಿ 5 ಸಾವಿರದಂತೆ ಸಸಿಗಳನ್ನು ನೆಡಲಾಗಿದೆ. ಪಟ್ಟಣದಲ್ಲಿ 900 ಗಿಡಗಳು, ರಾಜ್ಯ ಹೆದ್ದಾರಿ ರಸ್ತೆ ಪಕ್ಕದಲ್ಲಿ 900 ಗಿಡಗಳನ್ನು ಬೆಳೆಸಲಾಗಿದೆ. ರಸ್ತೆ ಬದಿ ಬೆಳೆಸಿದಗಿಡಗಳು ಆಗಾಗ ಜಾನುವಾರುಗಳಿಗೆ ಆಹಾರಆಗುತ್ತಿವೆ. ಇನ್ನಾದರೂ ಅರಣ್ಯ ಇಲಾಖೆ ಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಬೇಕಿದೆ.

ರಾಯಚೂರು, ಮಾನ್ವಿ ಇಲಾಖೆ ಜತೆ ದೇವದುರ್ಗ ವಲಯ ಅರಣ್ಯ ಇಲಾಖೆ ಕಚೇರಿ ಜವಾಬ್ದಾರಿ ನೀಡಲಾಗಿದೆ. ಕೆಲ ಹುದ್ದೆಗಳು ಖಾಲಿರುವ ಕಾರಣ ಇರುವಂತಹ ಅ ಧಿಕಾರಿಗಳು ಅರಣ್ಯ ಸಂರಕ್ಷಣೆ ಮಾಡಬೇಕಾಗಿದೆ.  -ರಾಜೇಶ, ಪ್ರಭಾರಿ ವಲಯ ಅರಣ್ಯಾಧಿಕಾರಿ

Advertisement

 

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next