Advertisement
(ಸಿಡಿಪಿಒ) ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳ ಪೈಕಿ ಐದು ತಾಲೂಕುಗಳಲ್ಲಿ ಶಾಶ್ವತ ಸಿಡಿಪಿಒ ಅಧಿಕಾರಿಗಳು ಇಲ್ಲದೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಅಸಮಾಧಾನ ಕೇಳಿ ಬಂದಿದೆ.
Related Articles
Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಿಡಿಪಿಒ ಮತ್ತು ಮೇಲ್ವಿಚಾರಕರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ
ಮೇಲ್ವಿಚಾರಕ ಹುದ್ದೆಗಳೂ ಖಾಲಿ: ಅಧಿಕಾರಿಗಳ ನಿರ್ಲಕ್ಷ್ಯ:
ಜಿಲ್ಲೆಯಲ್ಲಿ ಸುಮಾರು 1961 ಅಂಗನವಾಡಿ ಕೇಂದ್ರಗಳಿದ್ದು ಈ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಹೊಂದಿದ್ದಾರೆ. ದುರಾದೃಷ್ಟವಶಾತ್ ಒಂದು ಕಡೆ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳ ಭಾಗ್ಯವಿಲ್ಲದಂತಾಗಿದೆ. ಮತ್ತೂಂದೆಡೆ ಜಿಲ್ಲಾದ್ಯಂತ 75 ಮೇಲ್ವಿಚಾರಕರ ಪೈಕಿ 52 ಮೇಲ್ವಿಚಾರಕಿಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇಲಾಖೆಯಲ್ಲಿ ಖಾಲಿ ಇರುವ ಅಧಿಕಾರಿಗಳು, ಸಿಬ್ಬಂದಿ ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 5ತಾಲೂಕುಗಳಲ್ಲಿ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳು ಇಲ್ಲ. ಎಸಿಡಿಪಿಒಗಳನ್ನು ಪ್ರಭಾರ ಅಧಿಕಾರಿಗಳಾಗಿ ನೇಮಕಮಾಡಲಾಗಿದೆ. ಜತೆಗೆ ಮೇಲ್ವಿಚಾರಕರಹುದ್ದೆಗಳೂ ಖಾಲಿ ಇದ್ದು ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.– ಲಕ್ಷ್ಮೀದೇವಮ್ಮ, ಜಿಲ್ಲಾ ಅಧ್ಯಕ್ಷರು, ಸಿಐಟಿಯು ಸಂಘಟನೆ ಚಿಕ್ಕಬಳ್ಳಾಪುರ
ಜಿಲ್ಲೆಯ 5 ತಾಲೂಕುಗಳಲ್ಲಿ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳುಇಲ್ಲದ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಪ್ರಸ್ತುತ ಎಸಿಡಿಪಿಗಳನ್ನು ಪ್ರಭಾರ ವಹಿಸಿ ಇಲಾಖೆಕಾರ್ಯಕ್ರಮ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. – ಅಶ್ವತ್ಥಮ್ಮ, ಉಪನಿರ್ದೇಶಕಿ, ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ
–ಎಂ.ಎ.ತಮೀಮ್ ಪಾಷಾ