Advertisement
2019ರ 2, 3 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ 83,196 ವಿದ್ಯಾರ್ಥಿಗಳಲ್ಲಿ 66,062 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 26,448 ವಿದ್ಯಾರ್ಥಿಗಳು ಮತ್ತು 39,614 ವಿದ್ಯಾರ್ಥಿನಿಯರಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪದವಿ ಪೂರೈಸಿದ್ದಾರೆ. ಕಲಾ ವಿಭಾಗದಲ್ಲಿ ಮೂರು ಸೆಮಿಸ್ಟರ್‌ಗಳಲ್ಲಿ 9,457 ವಿದ್ಯಾರ್ಥಿಗಳು, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ)ನಲ್ಲಿ 5,769 ವಿದ್ಯಾರ್ಥಿಗಳು, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ (ಬಿಬಿಎಂ) 762 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ (ಬಿ.ಕಾಂ.)ದಲ್ಲಿ 38, 682 ವಿದ್ಯಾರ್ಥಿಗಳು, ಕಂಪ್ಯೂಟರ್ ಎಪ್ಲಿಕೇಶನ್ (ಬಿಸಿಎ)ನಲ್ಲಿ 4775 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗ (ಬಿಎಸ್ಸಿ)ದಲ್ಲಿ 6,617 ವಿದ್ಯಾರ್ಥಿಗಳು ಪದವಿ ಪೂರೈಸಿದ್ದಾರೆ. ಅನ್‌ಲೈನ್ ಎಂಟ್ರಿ ತ್ವರಿತ ಫಲಿತಾಂಶ
ಕಳೆದ ಎರಡು ಸೆಮಿಸ್ಟರ್‌ನಿಂದ ಮೌಲ್ಯಮಾಪನ ಸಂದರ್ಭದಲ್ಲೇ ಆನಲೈನ್ ಎಂಟ್ರಿ ಆರಂಭಿಸಿದ್ದು, ಈ ಬಾರಿ ಪ್ರಾಯೋಗಿಕ ಪರೀಕ್ಷೆಯನ್ನು ಆನ್‌ಲೈನ್ ಎಂಟ್ರಿ ಮೂಲಕ ಆರಂಭ ಮಾಡಲಾಗಿದೆ. ಪ್ರತಿಯೊಬ್ಬ ಮೌಲ್ಯಮಾಪಕರಿಗೂ ಶಾಶ್ವತ ಕೋಡ್ ನೀಡಲಾಗಿದ್ದು ಆ ಕೋಡ್‌ನ ಮೂಲಕವೇ ಆನ್‌ಲೈನ್ ಎಂಟ್ರಿ ಮಾಡಲಾಗುತ್ತಿದೆ. ಹಿಂದೆ ಟ್ಯಾಬ್ಯುಲೇಷನ್ ಪದ್ಧತಿ ಬಳಿಕ ಒಎಂಆರ್ ಶೀಟ್ ಮೂಲಕ ಅಂಕ ನಮೂದಿಸುವ ಪದ್ಧತಿ ಇತ್ತು. ಇದೀಗ ಆನ್‌ಲೈನ್ ಎಂಟ್ರಿಯಿಂದ ದೋಷಗಳು ಕಂಡು ಬರುವುದಿಲ್ಲ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರ ಆಚಾರ್ ತಿಳಿಸಿದರು.