Advertisement

ಯಾರೂ ಹಸಿವಿನಿಂದ ಇರಲು ಬಿಡುವುದಿಲ್ಲ: ಸಚಿವ ಸೋಮಣ್ಣ

12:53 PM Apr 27, 2021 | Team Udayavani |

ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಯಾರನ್ನೂ ಹಸಿವಿನಿಂದ ಇರಲು ಬಿಡುವುದಿಲ್ಲ. ಸರ್ಕಾರದಿಂದ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಸೋಮಣ್ಣ ಹೇಳಿದರು.

Advertisement

ಹೆಬ್ಬಾಳ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಾಗ ಏನೇನು ಅನಾನುಕೂಲ ಆಯ್ತು ಎನ್ನುವುದು ಗೊತ್ತಿದೆ. ಇನ್ನೂ ಕೆಲವು ದಿನಗಳಲ್ಲಿ ಪರಿಸ್ಥಿತಿ ನೋಡುತ್ತೇವೆ. ನಾವು ಶಾಸಕರು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೊಳಗಾದವರಿಗೆ ನೆರವು ಕೊಡುತ್ತೇವೆ. ಯಾರೂ ಹಸಿವಿನಿಂದ ಇರಲು ಬಿಡುವುದಿಲ್ಲ.ಸರ್ಕಾರದಿಂದಲೂ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ. ಸಿಎಂಗೂ ಒತ್ತಾಯ ಹಾಕುತ್ತೇವೆ ಎಂದರು.

ಇದನ್ನೂ ಓದಿ:ದಿ.ಸುರೇಶ್ ಅಂಗಡಿ ಪತ್ನಿ, ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರಿಗೆ ಕೋವಿಡ್ ದೃಢ

ಪ್ಯಾಕೇಜ್ ಘೋಷಿಸಿಲ್ಲ ಎಂದು ಡಿ ಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.  ಆರೋಪ, ಟೀಕೆ ಮಾಡುವುದು ಅವರಿಗೆ ಸೇರಿದ್ದು. ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದರು.

ಜನ ಗುಳೆ ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ಸೋಮಣ್ಣ, ಜನರಲ್ಲಿ ಗಾಬರಿ, ಗೊಂದಲವಿದೆ. ಹಾಗಾಗಿ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದರು.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ಶೋಷಣೆ, ಹಣ ವಸೂಲಿ ವಿಚಾರವಾಗಿ ಉತ್ತರಿಸಿದ ಅವರು,  ಖಾಸಗಿ ಆಸ್ಪತ್ರೆಗಳ ಸುಲಿಗೆ ನಮ್ಮ ಗಮನಕ್ಕೂ ಬಂದಿದೆ. ಹೆಣವನ್ನೂ ಹಣ ಕೊಟ್ಟರೆ ಮಾತ್ರವೇ ಕೊಡುವ ಪರಿಸ್ಥಿತಿಯಿದೆ. ನಮ್ಮ ಕೈಯಲ್ಲಾಗಿದ್ದಷ್ಟೇ ನಾವು ಬಗೆಹರಿಸಬಹುದು. ನಮ್ಮ ಗಮನಕ್ಕೆ ಬರುವ ಒಂದೆರಡು ಪ್ರಕರಣಗಳನ್ನಷ್ಟೇ ನಾವು ಬಗೆಹರಿಸಬಹುದು, ಎಲ್ಲವನ್ನೂ ನಾವು ಬಗೆಹರಿಸಲು ಆಗುವುದಿಲ್ಲ. ಎಲ್ಲ ಬಗೆಹರಿಸುವ ಪರಿಸ್ಥತಿಯಲ್ಲೂ ನಾವು ಯಾರೂ ಇಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next