Advertisement

MUDA Case: ಕೈ ಕಾಲು ಸುಟ್ಟುಕೊಂಡಿದ್ದು ಸಾಕು, ಇನ್ನಾದರು ರಾಜೀನಾಮೆ ನೀಡಿ… ವಿ.ಸೋಮಣ್ಣ

11:05 AM Oct 03, 2024 | Team Udayavani |

ಹುಬ್ಬಳ್ಳಿ: ಸಿದ್ದರಾಮಯ್ಯ ನನ್ನ‌ ಸ್ನೇಹಿತರು ಅವರಿಗೆ ಕೈ ಮುಗಿದು ಕೇಳುವೆ, ಮುಡಾದಲ್ಲಿ‌ ಕೈ-ಕಾಲು, ಬಾಯಿ ಸುಟ್ಟುಕೊಂಡಿದ್ದು ಸಾಕು. ಒಂದು ತಪ್ಪು‌ಮುಚ್ಚಲು 50 ತಪ್ಪು ಮಾಡಿದ್ದೀರಿ‌ ಇನ್ನಾದರು ರಾಜೀನಾಮೆ ನೀಡಿ‌ ಮಾದರಿಯಾಗಿ ಎಂದು ರೈಲ್ವೆ ಖಾತೆ ಸಹಾಯಕ‌ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ಇಲ್ಲಿನ‌ ಸದ್ಗುರು ಸಿದ್ಧಾರೂಢಸ್ವಾಮಿ‌ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಢದು, ಶ್ರೀಮಠದ ಟ್ರಸ್ಟ್ ಕಮಿಟಿಯಿಂದ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿದ್ದರಾಮಯ್ಯ, ನಾನು ಜನತಾ ಪರಿವಾರದಿಂದ ಬಂದವರು. ಮುಡಾ ಹಗರಣದಲ್ಲಿ ಆರಂಭದಲ್ಲಿಯೇ ತಪ್ಪು ಒಪ್ಪಿಕೊಂಡಿದ್ದರೆ ಸಿಎಂಗೆ ಈ ಸ್ಥಿತಿ‌ ಬರುತ್ತಿದ್ದಿಲ್ಲ.
ಸಿದ್ದರಾಮಯ್ಯ ಅವರಂತಹ ನಾಯಕರಿಗೆ ಇದು ಶೋಭೆ ತರುವುದಿಲ್ಲ ಎಂದರು.

ಬಿಜೆಪಿಯಲ್ಲಿ ಯಾವ ಬಣ ರಾಜಕೀಯ ಇಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ ಪಕ್ಷ ವರಿಷ್ಠರು‌ ಅದನ್ನು‌ ಸರಿಪಡಿಸುತ್ತಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಾಕೆ ಹೀಗೆ ಮಾತನಾಡುತ್ತಿದ್ದಾರೋ‌ ಗೊತ್ತಿಲ್ಲ. ಸಿಟ್ಟಿನಲ್ಲಿ‌ ಆಡಿದ ಮಾತು ವಾಪಸ್ ಬರುವುದಿಲ್ಲ. ಪಕ್ಷಕ್ಕೆ ಮುಜುಗರ ತರುವ, ಪರಿಣಾಮ ಬೀರುವ ಕೆಲಸ ಮಾಡಲಿದೆ ಎಂದು ತಿಳಿದುಕೊಳ್ಳಲಿ.

Advertisement

ಸಚಿವ ದಿನೇಶ ಗುಂಡೂರಾವ್ ವೀರಸಾರ್ವಕರ ಅವರ ಬಗ್ಗೆ ಏನು‌ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ ಏನಾದರೂ ಮಾತನಾಡುವ ಮುನ್ನ ಇತಿಹಾಸ ‌ಅರಿತು ಮಾತನಾಡಿದರೆ ಒಳಿತು.

ಕರ್ನಾಟಕದಲ್ಲಿ ಬಾಕಿ ಇರುವ ಹಳೇ ರೈಲ್ವೆ ಯೋಜನೆಗಳ ಪೂರ್ಣಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.

ಅಂದಾಜು 43 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದ ಬಾಕಿ‌ ರೈಲ್ವೆ ಯೋಜನೆಗಳನ್ನು‌ ಕೈಗೊಳ್ಳಲಾಗುತ್ತಿದೆ. ರಾಜ್ಯದ ಜನತೆಗೆ ಉತ್ತಮ ಹಾಗೂ ಹೆಚ್ಚಿನ ರೈಲ್ವೆ ಸೌಲಭ್ಯ ಸಿಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ.

ಹುಬ್ಬಳ್ಳಿಯ ಶ್ರೀ ಸಿದ್ದರೂಢಸ್ವಾಮೀಜಿ‌ ರೈಲು ನಿಲ್ದಾಣದಲ್ಲಿ‌ ಸದ್ಗುರು ಸಿದ್ದಾರೂಢಸ್ವಾಮೀಜಿ‌ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು‌ ಎಂದರು.

ಇದನ್ನೂ ಓದಿ: Chitradurga: ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು; ಓರ್ವ ಸಾವು

Advertisement

Udayavani is now on Telegram. Click here to join our channel and stay updated with the latest news.

Next