ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಮೊಟ್ಟ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ವಿ.ಸೋಮಣ್ಣ ಅವರಿಗೆ ಚೊಚ್ಚಲ ಆಯ್ಕೆಯಲ್ಲೇ ಅದೃಷ್ಟದ ಬಾಗಿಲು ತೆರೆದಿದ್ದು, ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಮಂತ್ರಿ ಯಾಗಿ ಪದವಿ ಪಡೆದಿದ್ದಾರೆ.
ರಾಮನಗರ ಜಿಲ್ಲೆ ದೊಡ್ಡ ಮರಳ ವಾಡಿಯಲ್ಲಿ ವೀರಣ್ಣ- ಕೆಂಪಮ್ಮ ದಂಪತಿಯ ಪುತ್ರರಾಗಿ 1951ರ ಜು.20 ರಂದು ಜನಿಸಿದ ಸೋಮಣ್ಣ, 1974ರಲ್ಲಿ ಬೆಂಗಳೂರಿನ ವಿವಿ ಪುರಂ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು.
1983-87ರ ವರೆಗೆ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, 1994ರಲ್ಲಿ ಬಿನ್ನಿಪೇಟೆ ವಿಧಾ ನ ಸಭಾ ಕ್ಷೇತ್ರದ ಜನತಾ ದಳ ಶಾಸಕ ರಾಗಿ ವಿಧಾನಸಭೆ ಪ್ರವೇಶಿಸಿದರು. 1996-99ರ ವರೆಗೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಬಂಧಿಖಾನೆ ಸಚಿವರಾಗಿ ಸೇವೆ ಸಲ್ಲಿಸಿದ ಸೋಮಣ್ಣ, 1999ರಲ್ಲಿ ಬಿನ್ನಿಪೇಟೆಯಿಂದ ಸ್ವತಂತ್ರ ವಾಗಿ ಗೆದ್ದು ಶಾಸಕರಾಗುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು.
2004 ರಲ್ಲಿ ಕಾಂಗ್ರೆಸ್‌ನಿಂದ 3ನೇ ಬಾರಿಗೆ ವಿಧಾನಸಭೆ ಪ್ರವೇ ಶಿಸಿದ ಅವರು, 2008ರಲ್ಲಿ ಗೋವಿಂದರಾಜ ನಗರದ ಕಾಂಗ್ರೆಸ್ ಶಾಸಕ ರಾದರು. 2010-18ರವ ರೆಗೆ ಕರ್ನಾ ಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, 2018ರಲ್ಲಿ ಬಿಜೆಪಿಯಿಂದ ಶಾಸಕರಾಗಿ 2019-20 ರಲ್ಲಿ ತೋಟಗಾರಿಕೆ, ರೇಷ್ಮೆ ಸಚಿವರಾಗಿ, ವಸತಿ, ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನೂ ನಿಭಾಯಿಸಿದ್ದರು. 2023ರಲ್ಲಿ ವರುಣ, ಚಾಮರಾ ಜನಗರದಿಂದ ಸ್ಪರ್ಧಿಸಿ ಸೋಲುಂಡಿದ್ದ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರ ಕಲ್ಪವೃಕ್ಷವಾಗಿ ಪರಿಣಮಿಸಿದೆ.