Advertisement

ಡಾ.ರಾಜ್, ಡಾ.ವಿಷ್ಣು ಮರೆಯಲಾಗದ ಧ್ರುವತಾರೆಗಳು: ಸಚಿವ ಸೋಮಣ್ಣ

04:29 PM Mar 27, 2022 | Team Udayavani |

ಬೆಂಗಳೂರು: ಕನ್ನಡನಾಡು ಕಂಡ ಅಪ್ರತಿಮ ಕಲಾವಿದರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅವರು ತೆರೆಯ ಮೇಲೆ ಕಂಡಂತೆಯೇ ಬದುಕಿದ ಮಹನೀಯರು. ಆವರು ನಡೆನುಡಿಯಲ್ಲಿ ಕಂಡ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜ ಸಮೃದ್ಧಿಯಾಗಿರುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಗೋವಿಂದರಾಜನಗರದ 22 ನೇ ವೃತ್ತದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಡಾ. ವಿಷ್ಣುವರ್ಧನ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಕಲಾವಿದರು ನಾಡಿನ ಪ್ರತಿಯೊಬ್ಬ ಮನೆಯ ಸದಸ್ಯನಂತೆ ಗುರುತಿಸಿ ಕೊಂಡಿರುತ್ತಾರೆ. ಅವರನ್ನು ನೋಡುತ್ತಾ ಬೆಳೆಯುವ ನಾವು ಅವರಲ್ಲಿನ ಅನೇಕ ಗುಣಗಳನ್ನು ನಮಗೆ ಅರಿವಿಲ್ಲದಂತೆ ಅಳವಡಿಸಿ ಕೊಂಡಿರುತ್ತೇವೆ. ರಾಜ್‍ಕುಮಾರ್, ವಿಷ್ಣುವರ್ಧನ್ ನಮ್ಮ ನಾಡಿನ ಧ್ರುವತಾರೆಗಳು. ಅವರನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸೋಮಣ್ಣ ಹೇಳಿದರು.

ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಸೇವಾ ಸಮಿತಿ ಪದಾಧಿಕಾರಿಗಳಾದ ಎಚ್ ರಮೇಶ್, ಶಶಿಕುಮಾರ್, ಚಂದ್ರಶೇಖರ್, ಕೇಶವ್, ವಿಷ್ಣು ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next